ತನ್ನ ಲೈಂಗಿಕ ದಾಹ ತೀರಿಸಿಕೊಳ್ಳಲು ಮಗಳನ್ನೇ ಅತ್ಯಾಚಾರ ಮಾಡಿದ ಕಾಮುಕ

ಮಧ್ಯಾಹ್ನ 2 ಗಂಟೆ ವೇಳೆಗೆ ಬಾಲಕಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ತಂದೆ ಮಗಳನ್ನು ರೂಂಗೆ ಎಳೆದೊಯ್ದಿದ್ದಾನೆ. ಈ ವೇಳೆ ಅತ್ಯಾಚಾರ ಮಾಡಲು ತಾಯಿ ಕೂಡ ಸಹಾಯ ಮಾಡಿದ್ದಳು.

news18-kannada
Updated:September 18, 2020, 3:41 PM IST
ತನ್ನ ಲೈಂಗಿಕ ದಾಹ ತೀರಿಸಿಕೊಳ್ಳಲು ಮಗಳನ್ನೇ ಅತ್ಯಾಚಾರ ಮಾಡಿದ ಕಾಮುಕ
ಸಾಂಧರ್ಭಿಕ ಚಿತ್ರ
  • Share this:
ಮಕ್ಕಳನ್ನು ದೇವರ ಸಮಾನ ಎಂದು ಭಾವಿಸುತ್ತಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪಾಲಕರ ಜವಾಬ್ದಾರಿ ಕೂಡ ಹೌದು. ಕುಡಿದು ಬಂದು ಅಪ್ಪ ಮಕ್ಕಳ ಮೇಲೆ ಕೈ ಮಾಡುವ ಪ್ರಕರಣ ಆಗಾಗ ಬೆಳಕಿಗೆ ಬರುತ್ತಿರುತ್ತದೆ. ಆದರೆ, ಮಧ್ಯ ಪ್ರದೇಶದಲ್ಲಿ ನಡೆದಿರುವ ಘಟನೆ ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಕಾಮುಕನೋರ್ವ ಸ್ವಂತ ಮಗಳನ್ನೇ ಅತ್ಯಾಚಾರ ಮಾಡಿದ್ದಾನೆ. ಅದೂ ಹೆಂಡತಿಯ ಸಹಾಯ ಪಡೆದು! ಈ ಘಟನೆ ಬಗ್ಗೆ ಭಾರೀ ಚರ್ಚೆಗಳು ಆಗುತ್ತಿವೆ. ಕೊರೋನಾ ನಿಯಂತ್ರಿಸಲು ಸರ್ಕಾರ ಲಾಕ್ಡೌನ್ ಹೇರಿತ್ತು. ಈ ಸಂದರ್ಭದಲ್ಲಿ ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. 18 ವರ್ಷದ ಬಾಲಕಿಯನ್ನು ತಂದೆಯೇ ಅತ್ಯಾಚಾರ ಮಾಡಿದ್ದಾನೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆತನನ್ನು ಅರೆಸ್ಟ್ ಮಾಡಲಾಗಿದೆ.

ಮಾರ್ಚ್ 22ರಂದು ಈ ಘಟನೆ ನಡೆದಿದೆ. ಮಧ್ಯಾಹ್ನ 2 ಗಂಟೆ ವೇಳೆಗೆ ಬಾಲಕಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ತಂದೆ ಮಗಳನ್ನು ರೂಂಗೆ ಎಳೆದೊಯ್ದಿದ್ದಾನೆ. ಸಹಾಯಕ್ಕೆ ಅಂಗಲಾಚಿದಾಗ ಅಮ್ಮ ಬಂದಿದ್ದನ್ನು ನೋಡಿ ಬಾಲಕಿ ಸಂತೋಷಗೊಂಡಿದ್ದಳು. ಆದರೆ, ಕ್ಷಣ ಮಾತ್ರದಲ್ಲಿ ಬಾಲಕಿಗೆ ಶಾಕ್ ಆಗಿತ್ತು.

ಹಾಸಿಗೆ ಬಳಿ ಬಂದ ತಾಯಿ, ಬಾಲಕಿಯ ಬಾಯಿಗೆ ಬಟ್ಟೆ ತುರುಕಿದ್ದಳು. ನಂತರ ತಂದೆ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ. “ಮದುವೆಯಾದ ನಂತರ ಗಂಡನೂ ಇದೇ ರೀತಿ ಮಾಡುತ್ತಾನೆ. ಆಗ ನಿನಗೆ ನೋವಾಗಬಾರದಲ್ಲವೇ. ಅದಕ್ಕೆ ನಾನು ಈ ರೀತಿ ಮಾಡುತ್ತಿದ್ದೇನೆ,” ಎಂದು ತಂದೆ ಹೇಳಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಒಂದು ಬಾರಿ ಅತ್ಯಾಚಾರ ಮಾಡಿದ ನಂತರ ಆಕೆಯನ್ನು ರೂಂನಲ್ಲಿ ಕೂಡಿಡಲಾಗಿತ್ತು. ಈ ವೇಳೆ ಆಕೆ ಅಲ್ಲಿಂದ ಪಾರಾಗಿ ಸಂಬಂಧಿಕರ ಮನೆಗೆ ಹೋಗಿ ಅಡಗಿ ಕೂತಿದ್ದಳು. ಅಲ್ಲಿಗೆ ಬಂದ ತಂದೆ ಆಕೆಯನ್ನು ಮನೆಗೆ ಕರೆದೊಯ್ದು ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾನೆ.

ಇನ್ನು, ತಾಯಿ ಈ ಆರೋಪವನ್ನು ಅಲ್ಲ ಗಳೆದಿದ್ದಾಳೆ. ಸ್ಥಳೀಯ ಯುವಕನನ್ನು ಈಕೆ ಪ್ರೀತಿ ಮಾಡುತ್ತಿದ್ದಾಳೆ. ಇದಕ್ಕೆ ನಾವು ವಿರೋಧಿಸಿದ್ದೆವು. ಇದಕ್ಕೆ ಸೇಡು ತೀರಿಸಿಕೊಳ್ಳಲು ಹೀಗೆ ಕಥೆ ಕಟ್ಟಿದ್ದಾಳೆ ಎಂದು ತಾಯಿ ಆರೋಪಿಸಿದ್ದಾಳೆ.
Published by: Rajesh Duggumane
First published: September 18, 2020, 2:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading