ಪಾಕ್​ ಮಾಜಿ ಕ್ರಿಕೆಟಿಗ ಇಮ್ರಾನ್​ ಖಾನ್​ಗೆ ಭಾರತದಲ್ಲೂ ಮಕ್ಕಳಿದ್ದಾರೆ; ಮಾಜಿ ಹೆಂಡತಿಯಿಂದಲೇ ಆರೋಪ


Updated:July 12, 2018, 8:21 PM IST
ಪಾಕ್​ ಮಾಜಿ ಕ್ರಿಕೆಟಿಗ ಇಮ್ರಾನ್​ ಖಾನ್​ಗೆ ಭಾರತದಲ್ಲೂ ಮಕ್ಕಳಿದ್ದಾರೆ; ಮಾಜಿ ಹೆಂಡತಿಯಿಂದಲೇ ಆರೋಪ

Updated: July 12, 2018, 8:21 PM ISTನ್ಯೂಸ್​-18 ಕನ್ನಡ

ನವದೆಹಲಿ(ಜುಲೈ.12): ಪಾಕಿಸ್ತಾನದಲ್ಲಿ ಚುನಾವಣೆ ಸಮೀಪಿಸುತ್ತಿದಂತೆಯೇ ಪಾಕಿಸ್ತಾನ ಕ್ರಿಕೆಟ್​ ತಂಡದ ನಿವೃತ್ತ ಆಟಗಾರ ಮತ್ತು ಪಿಟಿಐ ಪಕ್ಷದ ನಾಯಕ ಇಮ್ರಾನ್​ ಖಾನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತನ್ನ ಮಾಜಿ ಹೆಂಡತಿ, ಪತ್ರಕರ್ತೆ ರೆಹಮಾ​ ಖಾನ್​ ಅವರ ಪುಸ್ತಕ ಕೊನೆಗೂ ಬಿಡುಗಡೆಯಾಗಿದ್ದು, ಪಾಕಿಸ್ತಾನದ ಪ್ರಸ್ತುತ ರಾಜಕಾರಣ ಸೇರಿದಂತೆ ಪ್ರಮುಖವಾಗಿ ಇಮ್ರಾನ್​ ಖಾನ್​ ಖಾಸಗೀ ಬದುಕಿನ ಹಲವು ಗುಟ್ಟುಗಳನ್ನು ಬೆತ್ತಲಾಗಿಸಿದ್ದಾರೆ.

ಇಮ್ರಾನ್​ ಖಾನ್​ ಖಾಸಗಿ ಜೀವನ ಹಾಗೂ ಅವರಿಗಿದ್ದ ಕೆಟ್ಟ ಚಾಳಿಗಳ ಬಗ್ಗೆ ಸ್ಪೋಟಕ ಮಾಹಿತಿಯನ್ನು ರೆಹಮಾ ಬಿಚ್ಚಿಟ್ಟಿದ್ದಾರೆ. ಪ್ರಮುಖವಾಗಿ ತನ್ನ ಸ್ವಾರ್ಥಕ್ಕಾಗಿ ಯಾರನ್ನೆಲ್ಲಾ ಬಳಸಿಕೊಂಡಿದ್ದರು, ಯಾವ ರೀತಿಯ ವಿವಾದಗಳಲ್ಲಿ ಸಿಲುಕಿಕೊಂಡಿದ್ದರು ಎಂಬ ಬಗ್ಗೆ ಬರೆದಿದ್ದಾರೆ ಎನ್ನುತ್ತಿವೆ ಮೂಲಗಳು.

ಡ್ರಗ್ಸ್​ ಸೇವನೆ: ಕ್ರಿಕೆಟ್ ಜಗತ್ತಿನ ಖ್ಯಾತ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಹೆಸರು ಮಹಿಳೆಯರ ಜತೆಗಿನ ಸಂಬಂಧ ಮತ್ತು ಡ್ರಗ್ಸ್​ ವಿಚಾರದಲ್ಲಿ ಭಾರೀ ಸದ್ದು ಮಾಡಿತ್ತು. ಹಲವಾರು ಸಿನಿಮಾ ನಟಿಯರೊಂದಿಗೆ ಅವರು ಅಕ್ರಮ ಸಂಬಂಧ ಹೊಂದಿದ್ದಾರೆಂದು ಹೇಳಲಾಗಿತ್ತು. ಇದೆಲ್ಲದರ ಹೊರತಾಗಿ ತನ್ನ ಮಾಜಿ ಪತ್ನಿ ಅವರ ಬಗ್ಗೆ ಬಿಚ್ಟಿಟ್ಟ ಅಂಶಗಳು ಎಲ್ಲರಲ್ಲಿಯೂ ಅಚ್ಚರಿ ಮೂಡಿಸುವಂತಿದೆ.

ಇಮ್ರಾನ್​ ಬಗ್ಗೆ ತಂಡದ ಸಹ ಆಟಾಗಾರರೇ ಡ್ರಗ್ಸ್​ ಸೇವನೆ ಬಗ್ಗೆ ಹಲವು ಬಾರಿ ಹೇಳಿದ್ದರು. ನಮ್ಮ ಮದುವೆಯಾದ ಬಳಿಕ ಇಮ್ರಾನ್​ ಒಮ್ಮೆ ಬಾತ್​ ರೂಮ್​ನಲ್ಲಿ ಡ್ರಗ್ಸ್​ ಸೇವನೆ ಮಾಡುವ ವೇಳೆ ಸಿಕ್ಕಿಬಿದ್ದಿದ್ದ. ನನಗೆ ಅವರ ಖಾಸಗಿ ಜೀವನದ ಬಗ್ಗೆ ತಕಾರರಿಲ್ಲ ಆದರೆ, ಎಷ್ಟು ಭಾರಿ ಡ್ರಗ್ಸ್​ ವಿಚಾರದಲ್ಲಿ ವಿವಾದಕ್ಕೀಡಾದರು ತನ್ನ ಚಾಳಿಯನ್ನು ನಿಲ್ಲಿಸಲಿಲ್ಲ ಎಂದು ಆರೋಪಿಸಿದ್ದಾರೆ.
Loading...

ಇದೆ ವೇಳೆ ಡ್ರಗ್ಸ್​ ಸೇವಿಸಿದ ಮತ್ತಿನಲ್ಲಿ ಹಲವು ವಿಚಾರಗಳನ್ನು ಇಮ್ರಾನ್​ ಖಾನ್​ ತಮ್ಮ ಬಳಿ ಹಂಚಿಕೊಳ್ಳುತ್ತಿದ್ದರು ಎಂದು ರೆಹಮಾ ಹೇಳಿದ್ದಾರೆ. ಬಳಿಕ ಯಾರ ಬಗ್ಗೆ ಏನೆಲ್ಲಾ ಆರೋಪ ಮಾಡಿದ್ದರು ಎಂಬುದನ್ನು ಮರೆತು ಬಿಡುತ್ತಿದ್ದರು. ನಾವು ಮರಳಿ ಕೇಳಿದರೆ ಸಮರ್ಥಿಸಿಕೊಳ್ಳುತ್ತಿದ್ದರು ಎಂಬುದನ್ನು ಸಂದರ್ಭನುಸಾರವಾಗಿ ವಿವರಿಸಿದ್ದಾರೆ.ಭಾರತದಲ್ಲಿ ಇಮ್ರಾನ್​ಗೆ ಮಕ್ಕಳು: ಇನ್ನು ಇಮ್ರಾನ್​ ಖಾನ್ ಕೆಲವು​ ಭಾರತೀಯ ಮಹಿಳೆಯರನ್ನು ವಿವಾಹವಾಗಿದ್ದರು. ಅಲ್ಲದೇ ಇಮ್ರಾನ್​ ಖಾನ್​ಗೆ ಭಾರತದಲ್ಲಿ ಮಕ್ಕಳಿದ್ದಾರೆ ಎಂದು ನನ್ನ ಬಳಿ ಹೇಳಿದ್ದರು ಎಂದು ರೆಹಮಾ ಆರೋಪಿಸಿದ್ದಾರೆ. ಅವರಲ್ಲಿ ಒಬ್ಬನಿಗೆ 34 ವರ್ಷವಾಗಿದೆ ಎನ್ನುತ್ತಿವೆ ಪುಸ್ತಕದ ಮೂಲಗಳು.


ಈ ಹಿಂದೆ ರೆಹಮಾ ಇಮ್ರಾನ್​ ಖಾನ್​ ಬಗ್ಗೆಯ ರೀತಿಯಲ್ಲಿಯೇ​ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸೀಂ ಅಕ್ರಂ ಖಾಸಗಿ ಬದುಕಿನ ಬಗ್ಗೆಯೂ ಸ್ಫೋಟಕ ಮಾಹಿತಿ ಹೊರಹಾಕಿದ್ದರು. ರೆಹಮಾ ತಮ್ಮದೇ ಹೆಸರಿನಲ್ಲಿ ಪುಸ್ತಕ ಹೊರ ತಂದಿದ್ದಾರೆ.  ಆ ಪುಸ್ತಕದಲ್ಲಿ ವಾಸೀಂ ಅಕ್ರಮ್​ ದಿವಂಗತ ಪತ್ನಿಯ ಖಾಸಗಿ ಬದುಕಿನ ಬಗ್ಗೆ ಉಲ್ಲೇಖ ಮಾಡಿದ್ದಾರೆ.
ವಾಸೀಂ ಅಕ್ರಂ ತನ್ನ ಲೈಂಗಿಕ ಕಾಮನೆಗಳನ್ನು ಈಡೇರಿಸಿಕೊಳ್ಳಲು ದಿವಂಗತ ಪತ್ನಿಯನ್ನು ಬಳಸಿಕೊಂಡಿದ್ದರು. ಅಕ್ರಂ ಓರ್ವ ಕಪ್ಪು ವ್ಯಕ್ತಿಯನ್ನು ಬಳಸಿಕೊಂಡು ತನ್ನ ಕಣ್ಣೆದುರೇ ಆತನೊಂದಿಗೆ ತನ್ನ ಪತ್ನಿಯನ್ನು ಲೈಂಗಿಕ ಕ್ರಿಯೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು ಎಂಬ ಗಂಭೀರ ಆರೋಪವನ್ನು ರೆಹಮಾ ಮಾಡಿದ್ದಾರೆ.

ಪತ್ರಕರ್ತೆಯಾಗಿದ್ದ ರೆಹಮಾ ಖಾನ್ ಅವರನ್ನು ತೆಹ್ರಕ್-ಇ-ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್​ ಖಾನ್​ ಜನವರಿ 2015ರಲ್ಲಿ 2ನೇ ವಿವಾಹವಾಗಿದ್ದರು. ಆ ಬಳಿಕ ಅದೇ ವರ್ಷದ ಅಕ್ಟೋಬರ್’ನಲ್ಲಿ ವಿಚ್ಚೇದನ ನೀಡಿದ್ದರು. ಇದಕ್ಕೂ ಮೊದಲು ಇಮ್ರಾನ್ 1995ರಲ್ಲಿ ಜೆಮಿಮಾ ಗೋಲ್ಡ್’ಸ್ಮಿತ್ ಅವರನ್ನು ವರಿಸಿದ್ದರು.

2004ರಲ್ಲಿ ಇಮ್ರಾನ್ 9 ವರ್ಷಗಳ ದಾಂಪತ್ಯ ಬದುಕಿಗೆ ಅಂತ್ಯ ಹಾಡಿ, 2015ರಲ್ಲಿ ರೆಹಾಮ್ ಖಾನ್​ರನ್ನು ವಿವಾಹವಾಗಿದ್ದರು. ಆ ಬಳಿಕ 2018ರ ಆರಂಭದಲ್ಲಿ ಧಾರ್ಮಿಕ ಗುರು ಬುಶ್ರಾ ನೇಮಕ ಅವರನ್ನು ವರಿಸಿದ್ದಾರೆ. ಈ ಎಲ್ಲದರ ಬಗ್ಗೆಯೂ ರೆಹಮಾ ಖಾನ್​ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ ಎನ್ನುತ್ತಿವೆ ಮೂಲಗಳು.First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...