HOME » NEWS » National-international » SEX DOKHA AFTER DAUGHTER SEXUAL ASSAULTING WIFE KILLED CUT UP AND COOKED HER HUSBAND RMD

ಲೈಂಗಿಕ ಕಿರುಕುಳ ವಿಚಾರ; ಗಂಡನನ್ನು ಬರ್ಬರವಾಗಿ ಕೊಂದು ಕುಕ್ಕರ್​ನಲ್ಲಿ ಬೇಯಿಸಿದ ಹೆಂಡತಿ

ಗಂಡನ ಶವವನ್ನು ಹೇಗೆ ವಿಲೇವಾರಿ ಮಾಡಬೇಕು ಎನ್ನುವ ಪ್ರಶ್ನೆ ಆಕೆಯನ್ನು ಕಾಡಿತ್ತು. ನಂತರ ಬೇಯಿಸಿದ ಶವದಿಂದಲೇ ಆಕೆ ಅಡುಗೆ ಸಿದ್ಧಪಡಿಸಿದ್ದಳು.

news18-kannada
Updated:October 26, 2020, 11:08 PM IST
ಲೈಂಗಿಕ ಕಿರುಕುಳ ವಿಚಾರ; ಗಂಡನನ್ನು ಬರ್ಬರವಾಗಿ ಕೊಂದು ಕುಕ್ಕರ್​ನಲ್ಲಿ ಬೇಯಿಸಿದ ಹೆಂಡತಿ
ಕೊಲೆ ಮಾಡಿದ ಮಹಿಳೆ
  • Share this:
ಮಗಳಿಗೆ ಕಿರುಕುಳ ನೀಡಿದರೆ ತಾಯಿ ಆದವಳು ಎಲ್ಲಾದರೂ ಸಹಿಸುವುದುಂಟೇ? ಮಗಳಿಗೆ ಕಿರುಕುಳ ನೀಡಿದ್ದು ತನ್ನ ಗಂಡನೇ ಅಂದಮೇಲೆ ಎಲ್ಲಾದರೂ ಸಹಿಸುವುದುಂಟೇ? ಈ ವಿಚಾರ ಗೊತ್ತಾದ ತಕ್ಷಣವೇ ಗಂಡನನ್ನು ಬರ್ಬರವಾಗಿ ಕೊಂದು ಆತನನ್ನು ಕುಕ್ಕರ್​ನಲ್ಲಿ ಇಟ್ಟು ಬೇಯಿಸಿಬಿಟ್ಟಿದ್ದಾಳೆ. ಈ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆ ನಡೆದಿದ್ದು ಪಾಕಿಸ್ತಾನದಲ್ಲಿ.

ಜೈನಾಬ್​ ಬೀಬಿ ಬಂಧಿತೆ. ಈಕೆಗೆ ಈ ಮೊದಲು ಒಂದು ಮದುವೆ ಆಗಿತ್ತು. ಮೊದಲ ಗಂಡನಿಂದ ಮಗಳು ಕೂಡ ಹುಟ್ಟಿದ್ದಳು. ಇಬ್ಬರೂ ಬೇರೆ ಆದ ನಂತರದಲ್ಲಿ ಈಕೆ ಅಹ್ಮದ್​ ಅಬ್ಬಾಸ್​ನನ್ನು ಮದುವೆ ಆಗಿದ್ದಳು. ಮೊದಲ ಮದುವೆ ವೇಳೆ ಹುಟ್ಟಿದ ಮಗುವಿಗೆ ಅಹ್ಮದ್​ ಅಬ್ಬಾಸ್​ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದನ್ನು ಸಹಿಸದ ಜೈನಾಬ್​ ಆತನನ್ನು ಕೊಂದು ಹಾಕಿದ್ದಾಳೆ. ಕೈಗೆ ಸಿಕ್ಕ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಅಷ್ಟಾದರೂ ಆಕೆಯ ರೋಷ ತಣಿದಿಲ್ಲ. ನಂತರ ಹೆಣವನ್ನು ಚಿಕ್ಕದಾಗಿ ಕೊಚ್ಚಿ ಕುಕ್ಕರ್​ನಲ್ಲಿ ಬೇಸಿದ್ದಾಳೆ.

ಗಂಡನ ಶವವನ್ನು ಹೇಗೆ ವಿಲೇವಾರಿ ಮಾಡಬೇಕು ಎನ್ನುವ ಪ್ರಶ್ನೆ ಆಕೆಯನ್ನು ಕಾಡಿತ್ತು. ನಂತರ ಬೇಯಿಸಿದ ಶವದಿಂದಲೇ ಆಕೆ ಅಡುಗೆ ಸಿದ್ಧಪಡಿಸಿದ್ದಳು. ಅಲ್ಲದೆ, ಮಾಡಿದ ಅಡುಗೆ ಹೆಚ್ಚಾಗಿದೆ ಎಂದು ಆಕೆ ಬೀದಿ ನಾಯಿಗಳಿಗೆ ಹಂಚಿದ್ದಳು. ಪೊಲೀಸರ ತನಿಖೆ ವೇಳೆಯಲ್ಲಿ ಅಸಲಿ ವಿಚಾರ ಬಯಲಾಗಿದೆ. ಸದ್ಯ ಈಕೆ ಪೊಲೀಸರ ಮುಂದೆ ಎಲ್ಲವನ್ನೂ ಬಾಯ್ಬಿಟ್ಟಿದ್ದಾಳೆ. ಹೀಗಾಗಿ, ನ್ಯಾಯಾಲಯ ಈಕೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
Published by: Rajesh Duggumane
First published: October 23, 2020, 3:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories