• Home
 • »
 • News
 • »
 • national-international
 • »
 • ಮತ್ತೆ ಕ್ಯಾತೆ ತೆಗೆದ ಇರಾನ್?; ಅಮೆರಿಕ ರಾಯಭಾರಿ ಕಚೇರಿ ಸಮೀಪ ರಾಕೆಟ್ ದಾಳಿ

ಮತ್ತೆ ಕ್ಯಾತೆ ತೆಗೆದ ಇರಾನ್?; ಅಮೆರಿಕ ರಾಯಭಾರಿ ಕಚೇರಿ ಸಮೀಪ ರಾಕೆಟ್ ದಾಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟೈಗ್ರೀಸ್​ ನದಿ ಸಮೀಪ ದೊಡ್ಡದಾದ ಶಬ್ದ ಕೇಳಿಬಂದಿದೆ. ಈ ಭಾಗದಲ್ಲಿ ಅಮೆರಿಕ ಸೇರಿ ಹಲವು ರಾಷ್ಟ್ರಗಳ ರಾಯಭಾರಿ ಕಚೇರಿಗಳಿವೆ. ಅಮೆರಿಕವನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎನ್ನಲಾಗಿದೆ.

 • Share this:

  ಬಾಗ್ದಾದ್ (ಜ.27)​: ಇರಾನ್ ರಕ್ಷಣಾ ಮುಖ್ಯಸ್ಥ ಖಾಸಿಂ ಸೊಲೈಮನಿಯನ್ನು ಅಮೆರಿಕ ಹತ್ಯೆ ಮಾಡಿದ ನಂತರ ಎರಡೂ ದೇಶಗಳ ನಡುವೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು. ಇದು ಕೊಂಚ ತಣ್ಣಗಾಗುತ್ತಿರುವ ಮಧ್ಯೆಯೇ ಬಾಗ್ದಾದ್​ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಸಮೀಪ ರಾಕೆಟ್​ ದಾಳಿ ನಡೆದಿದೆ.


  ಟೈಗ್ರೀಸ್​ ನದಿ ಸಮೀಪ ದೊಡ್ಡದಾದ ಶಬ್ದ ಕೇಳಿಬಂದಿದೆ. ಈ ಭಾಗದಲ್ಲಿ ಅಮೆರಿಕ ಸೇರಿ ಹಲವು ರಾಷ್ಟ್ರಗಳ ರಾಯಭಾರಿ ಕಚೇರಿಗಳಿವೆ. ಅಮೆರಿಕವನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎನ್ನಲಾಗಿದೆ.


  ಭಾರೀ ಭದ್ರತೆ ಇರುವ ಪ್ರದೇಶದಲ್ಲಿ ಭಾನುವಾರ ಒಂದು ಕ್ಷಿಪಣಿ​ ಬಂದಪ್ಪಳಿಸಿತ್ತು. ಇದಾದ ಬೆನ್ನಲ್ಲೇ ಸತತವಾಗಿ ನಾಲ್ಕು ರಾಕೆಟ್​ಗಳು ಈ ಭಾಗದಲ್ಲಿ ಬಿದ್ದಿವೆ. ಆದರೆ, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.


  ಇದನ್ನೂ ಓದಿ: ಮಾನವ ಸಹಜ ತಪ್ಪು ಗ್ರಹಿಕೆಯಿಂದ ಉಕ್ರೇನ್ ವಿಮಾನ ಹೊಡೆದೆವು: ಇರಾನ್ ತಪ್ಪೊಪ್ಪಿಗೆ


  ಈ ವರ್ಷದ ಆರಂಭದಲ್ಲಿ ಬಾಗ್ದಾದ್​​ ವಿಮಾನ ನಿಲ್ದಾಣದಲ್ಲಿ ಅಮೆರಿಕ ರಾಕೆಟ್​ ದಾಳಿ ನಡೆಸಿತ್ತು. ಈ ವೇಳೆ ಖಾಸಿಂ ಸೊಲೈಮನಿ ಮೃತಪಟ್ಟಿದ್ದ. ಈತನನ್ನು ಅಮೆರಿಕ ತನ್ನ ಬದ್ಧ ವೈರಿ ಎಂದೇ ಪರಿಗಣಿಸಿತ್ತು. ಈತ ಇರಾನ್​ ಸಶಸ್ತ್ರ ಹೋರಾಟ ನಿಯಂತ್ರಿಸುತ್ತಿದ್ದ. ಸೊಲೈಮನಿ ಇರಾನ್​ ಗುಪ್ತಚರ ಇಲಾಖೆಯ ಮುಖ್ಯಸ್ಥ ಕೂಡ ಹೌದು. ಹೀಗಾಗಿ ಈತನನ್ನು ಹತ್ಯೆ ಮಾಡಲಾಗಿತ್ತು. ಇದಾದ ನಂತರ ಬಾಗ್ದಾದ್​ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಸಮೀಪ ದಾಳಿಯಾಗಿತ್ತು.

  Published by:Rajesh Duggumane
  First published: