• Home
  • »
  • News
  • »
  • national-international
  • »
  • Bridge Collapse: ತೂಗು ಸೇತುವೆ ಕುಸಿದು 32ಕ್ಕೂ ಹೆಚ್ಚು ಜನರು ಸಾವು, ನೂರಾರು ಮಂದಿ ನೀರುಪಾಲು!

Bridge Collapse: ತೂಗು ಸೇತುವೆ ಕುಸಿದು 32ಕ್ಕೂ ಹೆಚ್ಚು ಜನರು ಸಾವು, ನೂರಾರು ಮಂದಿ ನೀರುಪಾಲು!

ತೂಗು ಸೇತುವೆ ಕುಸಿತ

ತೂಗು ಸೇತುವೆ ಕುಸಿತ

ಭಾನುವಾರ ರಜಾದಿನ ಆಗಿರುವುದರಿಂದ ಅಲ್ಲಿ ಜನ ದಟ್ಟಣೆ ಜಾಸ್ತಿ ಇತ್ತು ಎನ್ನಲಾಗಿದೆ. ಅವಘಡದಲ್ಲಿ 100ಕ್ಕೂ ಹೆಚ್ಚು ಮಂದಿ ನೀರುಪಾಲಾಗಿದ್ದಾರೆ ಎಂದು ವರದಿಯಾಗಿದೆ. ಈ ಪೈಕಿ 32ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರಬಹುದು ಅಂತ ವರದಿಯಾಗಿದೆ.

  • News18 Kannada
  • Last Updated :
  • Gujarat, India
  • Share this:

ಮೊರ್ಬಿ, ಗುಜರಾತ್: ತೂಗು ಸೇತುವೆಯೊಂದು ಕುಸಿದು (Cable bridge collapsed) ದೊಡ್ಡ ದುರಂತವೊಂದು ಸಂಭವಿಸಿದೆ. ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ (Gujarat's Morbi district) ತೂಗು ಸೇತುವೆ ಕುಸಿದು, ತುಂಬಿ ಹರಿಯುತ್ತಿರುವ ನದಿಗೆ (River) ನೂರಾರು ಮಂದಿ ಬಿದ್ದಿದ್ದಾರೆ. ಈ ಪೈಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ 32ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ (Death) ಎನ್ನಲಾಗಿದೆ. ಮೊರ್ಬಿ ಪ್ರದೇಶದ ಮಚ್ಚು ನದಿಯ (Machu river) ದಡದಲ್ಲಿ ನಿರ್ಮಿಸಲಾಗಿದ್ದ ತೂಗು ಸೇತುವೆ ಇಂದು ಸಂಜೆ ಕುಸಿದಿದೆ. ಭಾನುವಾರ ರಜಾದಿನ (Sunday is a holiday) ಆಗಿರುವುದರಿಂದ ಅಲ್ಲಿ ಜನ ದಟ್ಟಣೆ ಜಾಸ್ತಿ ಇತ್ತು ಎನ್ನಲಾಗಿದೆ. ಅವಘಡದಲ್ಲಿ 100ಕ್ಕೂ ಹೆಚ್ಚು ಮಂದಿ ನೀರುಪಾಲಾಗಿದ್ದಾರೆ ಎಂದು ವರದಿಯಾಗಿದೆ. ಈ ಪೈಕಿ 32ಕ್ಕೂ ಹೆಚ್ಟು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 


32ಕ್ಕೂ ಹೆಚ್ಚು ಮಂದಿ ಸಾವಿನ್ನಪ್ಪಿರುವ ಶಂಕೆ


ಗುಜರಾತ್‌ನ ಮೊರ್ಬಿಯಲ್ಲಿ ಮಚ್ಚು ನದಿಯ ತೂಗು ಸೇತುವೆ ಭಾನುವಾರ ಕುಸಿದು 32 ಜನರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿ ಮಾಡಿದೆ. ಸೇತುವೆಯು ಸುಮಾರು ಒಂದು ಶತಮಾನದಷ್ಟು ಹಳೆಯದಾಗಿದೆ ಮತ್ತು ನವೀಕರಣದ ನಂತರ ಇತ್ತೀಚೆಗೆ ಮತ್ತೆ ತೆರೆಯಲಾಗಿತ್ತು. ಆದರೆ ಇಂದು ಭಾನುವಾರ ಆಗಿದ್ದರಿಂದ ಹೆಚ್ಚಿನ ಜನರು ಇಲ್ಲಿ ವಿಹಾರಕ್ಕೆ ಅಂತ ಬಂದಿದ್ದರು. ಈ ವೇಳೆ ದುರಂತ ಸಂಭವಿಸಿದೆ.ಬ್ರಿಟೀಷರ ಕಾಲದಲ್ಲಿ ಕಟ್ಟಿಸಲಾಗಿದ್ದ ಸೇತುವೆ


ಸೇತುವೆಯ ಮೇಲೆ ನಿಂತಿರುವ ಜನರ ಭಾರವನ್ನು ತಡೆದುಕೊಳ್ಳಲು ಸಾಧ್ಯವಾಗದೆ ಕುಸಿದಿದೆ. ಬ್ರಿಟಿಷ್ ಇಂಜಿನಿಯರಿಂಗ್‌ನ ಒಂದು ಅದ್ಭುತವೆಂದು ಪರಿಗಣಿಸಲ್ಪಟ್ಟ ಸ್ವಾತಂತ್ರ್ಯಪೂರ್ವ ಕೇಬಲ್-ಸ್ಟೇಡ್ ಸೇತುವೆಯನ್ನು ಜುಲ್ಟೋ ಪೂಲ್ ಎಂದು ಕರೆಯಲಾಗುತ್ತಿತ್ತು ಮತ್ತು ಇದು ಮೊರ್ಬಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿತ್ತು. ಸೇತುವೆಯು ಸ್ಥಳೀಯ ಪಿಕ್ನಿಕ್ ತಾಣವಾಗಿದ್ದು ಇಂದು ಹೆಚ್ಚಿನ ಜನ ಸೇರಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.


ಇದನ್ನೂ ಓದಿ: Narendra Modi: ಜಾಹೀರಾತಿನಲ್ಲಿ ನರೇಂದ್ರ ಮೋದಿಗೆ ಆಯ್ತಾ ಅಪಮಾನ? ಜೋರಾಯ್ತು #BoycottCadbury ಅಭಿಯಾನ!


500ಕ್ಕೂ ಹೆಚ್ಚು ಜನ ನಾಪತ್ತೆಯಾಗಿರುವ ಶಂಕೆ!


ಇನ್ನು ಸ್ಥಳೀಯ ಸುದ್ದಿ ವಾಹಿನಿಗಳ ವರದಿ ಪ್ರಕಾರ ಸೇತುವೆ ದುರಂತದಲ್ಲಿ 500ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ. ಇದೀಗ ಅಗ್ನಿಶಾಮಕದಳ, ಪೊಲೀಸರು ಹಾಗೂ ಇತರೇ ತಂಡದಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.ಮುಂದುವರೆದ ರಕ್ಷಣಾ ಕಾರ್ಯಾಚರಣೆ


ಪ್ರದೇಶವು ಯಾವುದೇ ವಿದ್ಯುತ್ ಸಂಪರ್ಕವನ್ನು ಹೊಂದಿಲ್ಲ - ಇದು ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಕಷ್ಟಕರವಾಗಿಸುವ ಅಂಶವಾಗಿದೆ.


ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ


ಇನ್ನು ಘಟನೆಗೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಗಾಯಾಳುಗಳಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಅವರು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರೊಂದಿಗೆ ಮಾತನಾಡಿದ್ದಾರೆ. ಇನ್ನು ರಕ್ಷಣಾ ಕಾರ್ಯಾಚರಣೆಗಾಗಿ ತಂಡ ಸೇರಿದಂತೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಮೃತರ ಕುಟುಂಬಕ್ಕೆ 2 ಲಕ್ಷ ರೂ., ಗಾಯಗೊಂಡವರಿಗೆ 50,000 ರೂ ಪರಿಹಾರ ಘೋಷಿಸಿದ್ದಾರೆ.


ಇದನ್ನೂ ಓದಿ: Actress Samantha: ಸಮಂತಾರನ್ನು ಕಾಡುತ್ತಿರುವ ಈ ವಿಚಿತ್ರ ಕಾಯಿಲೆ ಬಗ್ಗೆ ಗೊತ್ತಾ? ವ್ಯಕ್ತಿಯನ್ನೇ ಕುಗ್ಗಿಸುತ್ತಾ ಮೈಯೋಸಿಟಿಸ್?


ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ


ಸೇತುವೆ ಕುಸಿತದ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ ಸೂಚಿಸಿದ್ದಾರೆ. ಗುಜರಾತ್‌ನ ಮೋರ್ಬಿಯಲ್ಲಿ ನಡೆದ ದುರಂತ ನನ್ನನ್ನು ಚಿಂತೆಗೀಡು ಮಾಡಿದೆ. ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳು ವೇಗವಾಗಿ ನಡೆಯಲಿ ಎಂದು ಆಶಿಸುತ್ತೇನೆ ಅಂತ ಟ್ವೀಟ್ ಮಾಡಿದ್ದಾರೆ.

Published by:Annappa Achari
First published: