ಮುಸ್ಲಿಮರಿಗೆ ಹಲವು ದೇಶಗಳಿವೆ; ಹಿಂದೂಗಳಿಗೆ ಒಂದೂ ಇಲ್ಲ: ನಿತಿನ್ ಗಡ್ಕರಿ

ಪಂಚದಲ್ಲಿ ಯಾವುದೇ ಒಂದು ದೇಶ ಹಿಂದೂಗಳಿಗೆ ಎಂದು ಸೀಮಿತವಾಗಿಲ್ಲ. ಈ ಮುಂಚೆ ನೇಪಾಳ ಹಿಂದೂ ರಾಷ್ಟ್ರವಾಗಿತ್ತು. ಆದರೆ ಈಗ ಯಾವುದೇ ಒಂದು ದೇಶ ಕೂಡ ಹಿಂದೂ ರಾಷ್ಟ್ರವಾಗಿ ಉಳಿದಿಲ್ಲ. ಹೀಗಾದರೆ ಹಿಂದೂ, ಸಿಖ್​ರು ಎಲ್ಲಿಗೆ ಹೋಗಬೇಕು

Seema.R | news18-kannada
Updated:December 18, 2019, 2:27 PM IST
ಮುಸ್ಲಿಮರಿಗೆ ಹಲವು ದೇಶಗಳಿವೆ; ಹಿಂದೂಗಳಿಗೆ ಒಂದೂ ಇಲ್ಲ: ನಿತಿನ್ ಗಡ್ಕರಿ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ
  • Share this:
ನವದೆಹಲಿ (ಡಿ.18): ವಿವಾದಾತ್ಮಕ ಪೌರತ್ವ ಕಾಯ್ದೆ ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆ ಕಿಚ್ಚು ಹೆಚ್ಚಾಗಿದೆ. ಈ ನಡುವೆ ಕಾಯ್ದೆ ಕುರಿತು ಮಾತನಾಡಿರುವ ಕೇಂದ್ರ ಸಚಿವ ನಿತಿನ್​ ಗಡ್ಕರಿ, ವಿಶ್ವದಲ್ಲಿ ಯಾವುದೇ ಒಂದು ದೇಶ ಹಿಂದೂಗಳಿಗೆ ಸೀಮಿತವಾಗಿಲ್ಲದ್ದರಿಂದ ಈ ಕಾನೂನಿನ ಅವಶ್ಯಕತೆ ಇದೆ ಎಂದಿದ್ದಾರೆ.

ನ್ಯೂಸ್​ 18 ಇಂಡಿಯಾ ಚೌಪಲ್​ನಲ್ಲಿ ಮಾತನಾಡಿದ ಅವರು, ಸರ್ಕಾರದ ನಡೆಯನ್ನು ಸಮರ್ಥಿಸಿ ಕೊಂಡರು. ಪ್ರಪಂಚದಲ್ಲಿ ಯಾವುದೇ ಒಂದು ದೇಶ ಹಿಂದೂಗಳಿಗೆ ಎಂದು ಸೀಮಿತವಾಗಿಲ್ಲ. ಈ ಮುಂಚೆ ನೇಪಾಳ ಹಿಂದೂ ರಾಷ್ಟ್ರವಾಗಿತ್ತು. ಆದರೆ ಈಗ ಯಾವುದೇ ಒಂದು ದೇಶ ಕೂಡ ಹಿಂದೂ ರಾಷ್ಟ್ರವಾಗಿ ಉಳಿದಿಲ್ಲ. ಹೀಗಾದರೆ ಹಿಂದೂ, ಸಿಖ್​ರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಮುಸ್ಲಿಂರಿಗೆ ಅನೇಕ ರಾಷ್ಟ್ರಗಳಿವೆ. ಅವರು ಎಲ್ಲಿಗೆ ಹೋದರು ಅವರಿಗೆ ನಾಗರಿಕತ್ವ ಸಿಗಲಿದೆ. ಕಾಯ್ದೆ ಕುರಿತು ವಿಪಕ್ಷಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದರು.

ನಮ್ಮ ದೇಶದ ಮುಸ್ಲಿಂ ನಾಗರಿಕರ ವಿರುದ್ಧ ನಾವಿಲ್ಲ. ಕೆಲವು ರಾಜಕೀಯ ಪಕ್ಷಗಳು ಅಲ್ಪ ಸಂಖ್ಯಾತರ ಬಗ್ಗೆ ಭಯ ಹುಟ್ಟಿಸುವ ಕೆಲಸ ಮಾಡುತ್ತಿವೆ. ರಾಜಕೀಯ ತಾರತಮ್ಯದ ವಿರುದ್ಧ ನಮ್ಮ ಸರ್ಕಾರವಿದೆ ಎಂಬ ಭರವಸೆ ನಾನು ನೀಡಬಲ್ಲೆ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕಾರ, ಡಿ.31,2014ರ ಮುಂದೆ ಅಪ್ಘಾನಿಸ್ಥಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಬಂದಂತಹ ಕೆಲವು ನಿರ್ದಿಷ್ಟ ಅಕ್ರಮ ವಲಸಿಗರಾದ ಹಿಂದೂ, ಸಿಖ್​, ಬೌದ್ಧರು, ಜೈನ್​, ಪಾರ್ಸಿ ಅಥವಾ ಕ್ರಿಶ್ಚಿಯನ್​ ಧರ್ಮಿಯರು ಇದರಿಂದ ಭಾರತದ ಪೌರತ ಪಡೆಯಲು ಅರ್ಹರಾಗುತ್ತಾರೆ.

ಈ ಕಾನೂನಿನ ಅಡಿ ನೈಸರ್ಗಿಕರಣದ ಮೂಲಕ ನಾಗರಿಕತ್ವಕ್ಕೆ ಅರ್ಜಿ ಸಲ್ಲಿಸಬಹುದು. ಇನ್ನು ಭಾರತದ ವಾಸಿಗಳು ಎಂದು ವ್ಯಾಸಂಗ ದೃಢಿಕರಿಸಲು ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಕಳೆದ 12 ತಿಂಗಳು ಕಾರ್ಯ ನಿರ್ವಹಿಸಿರಬೇಕು. ಅಥವಾ 14 ತಿಂಗಳು ಭಾರತದಲ್ಲಿ ವಾಸವಾಗಿರಬೇಕು ಎಂಬ ನಿಯಮವಿದೆ. ನೈಸರ್ಗಿಕ ವಿಂಗಡನೆಗೆ ಈ ಗುಂಪಿನ ನಿವಾಸಿಗಳೆಂದು ಸಾಬೀತು ಪಡಿಸಲು 11 ವರ್ಷದ ಬದಲು 5 ವರ್ಷ ಮಾಹಿತಿ ನೀಡಬೇಕಿದೆ ಎಂದರು.

ಇದನ್ನು ಓದಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ತಡೆ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ಏತನ್ಮಾಧ್ಯೆ ಸುಪ್ರೀಂಕೋರ್ಟ್​ ಈ ಕಾಯ್ದೆಗೆ ತಡೆ ನೀಡಲು ಸಾಧ್ಯವಿಲ್ಲ. ಆದರೆ, ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್​ ನಾಯಕರಾದ ಜೈ ರಾಮ್​ ರಮೇಶ್​, ಅಸ್ಸಾಂ ಗಣ ಪರಿಷದ್​ ಮತ್ತು ಇಂಡಿಯನ್​ ಯೂನಿಯನ್​ ಮುಸ್ಲಿಂ ಲೀಗ್​ ಸೇರಿದಂತೆ ವಿವಿಧ ಸಂಸ್ಥೆಗಳು ಸುಪ್ರೀಂಕೋರ್ಟ್​ ಅರ್ಜಿ ಸಲ್ಲಿಸಿದ್ದರು.
First published:December 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ