HOME » NEWS » National-international » SEVEN YEAR OLD IS HIGHEST PAID YOUTUBER OF 2018

ಒಂದೇ ವರ್ಷದಲ್ಲಿ ಯೂಟ್ಯೂಬ್ ನಿಂದ 160 ಕೋಟಿ ಸಂಪಾದಿಸಿದ ಏಳು ವರ್ಷದ ಬಾಲಕ

ಫೋರ್ಬ್ಸ್​ ಇತ್ತೀಚೆಗೆ ಬಿಡುಗಡೆ ಮಾಡಿರುವ 2018 ರ ಯೂಟ್ಯೂಬ್​ ಸ್ಟಾರ್ ಆಗಿ ರಯಾನ್ ಹೊರ ಹೊಮ್ಮಿದ್ದು, 12 ತಿಂಗಳಲ್ಲಿ 160 ಕೋಟಿಗಳಿಸಿದ್ದಾನೆ.

zahir | news18
Updated:December 4, 2018, 7:11 PM IST
ಒಂದೇ ವರ್ಷದಲ್ಲಿ ಯೂಟ್ಯೂಬ್ ನಿಂದ 160 ಕೋಟಿ ಸಂಪಾದಿಸಿದ ಏಳು ವರ್ಷದ ಬಾಲಕ
ryan
  • News18
  • Last Updated: December 4, 2018, 7:11 PM IST
  • Share this:
ಸಾಮಾನ್ಯವಾಗಿ ಏಳು ವಯಸ್ಸಿನ ಮಕ್ಕಳು ಏನು ಮಾಡುತ್ತಾರೆ? ಆಟವಾಡುತ್ತಾರೆ, ಶಾಲೆ ಹೋಗುತ್ತಾರೆ, ಸಣ್ಣ ಪುಟ್ಟ ತರಲೆಗಳು..ಹೀಗೆ ಅವರದ್ದೇಯಾದ ಲೋಕದಲ್ಲಿ ಮುಳುಗಿರುತ್ತಾರೆ. ಆದರೆ ಇವೆಲ್ಲಕ್ಕಿಂತ ರಯಾನ್ ಸ್ವಲ್ಪ ಭಿನ್ನ. ಯಾಕೆಂದರೆ ಏಳನೇ ವಯಸ್ಸಿನಲ್ಲೇ ಇವನು ಕೋಟಿ ಒಡೆಯ. ಅಚ್ಚರಿಯಾದರೂ ನೀವು ನಂಬಲೇಬೇಕು. ಹೌದು, ರಯಾನ್ ಒಂದು ವರ್ಷಕ್ಕೆ ಬರೋಬ್ಬರಿ 22 ಮಿಲಿಯನ್ ಡಾಲರ್ ಸಂಪಾದಿಸಿದ್ದಾನೆ. ಅದು ಕೂಡ ಆಟವಾಡುತ್ತಾ ಪಾಠ ಮಾಡುತ್ತಾ ಎಂಬುದು ವಿಶೇಷ. ಕೇವಲ 12 ತಿಂಗಳಲ್ಲಿ 160 ಕೋಟಿಗಳಿಸಿರುವ ರಯಾನ್ ಫೋರ್ಬ್ಸ್​ ಬಿಡುಗಡೆ ಮಾಡಿರುವ 2018 ರ ಯೂಟ್ಯೂಬ್​ ಸ್ಟಾರ್ ಆಗಿ ಹೊರ ಹೊಮ್ಮಿದ್ದಾನೆ.

ಅಷ್ಟಕ್ಕೂ ಯೂಟ್ಯೂಬ್​ನಲ್ಲಿ ರಯಾನ್ ಮಾಡಿದ್ದಾದರೂ ಏನು?

ಎಲ್ಲ ಮಕ್ಕಳಂತೆ ರಯಾನ್ ಗೊಂಬೆಗಳೊಂದಿಗೆ, ಟ್ರೈನು, ಕಾರುಗಳೊಂದಿಗೆ ಆಟವಾಡುತ್ತಾ, ಹೊಸ ಹೊಸ ಆಟಿಕೆಗಳನ್ನು ಹೇಗೆ ಬಳಸಬೇಕೆಂದು ವೀಡಿಯೊ ಮುಂದೆ ವಿವರಿಸುತ್ತಾನೆ. ಇದೆಲ್ಲವನ್ನು ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ಅಪ್ಲೋಡ್​ ಮಾಡುತ್ತಿರುತ್ತಾನೆ. ಇದಕ್ಕಾಗಿ 2015 ರಲ್ಲಿ ರಯಾನ್ ಟಾಯ್ಸ್​ ರಿವ್ಯೂ ಹೆಸರಿನ ಯೂಟ್ಯೂಬ್​ ಚಾನೆಲ್​ನ್ನು ಕ್ರಿಯೇಟ್ ಮಾಡಿದ್ದು, ಈಗಾಗಲೇ ಈ ಚಾನೆಲ್​ 1,73,17,533 ಚಂದಾದಾರರನ್ನು ಹೊಂದಿದೆ. ರಯಾನ್ ಹಾಕುವ ವೀಡಿಯೊಗಳಿಗೆ ಅನೇಕ ಕಂಪೆನಿಗಳು ಜಾಹೀರಾತನ್ನು ನೀಡುತ್ತಿದ್ದು, ಈ ಮೂಲಕವೇ ರಯಾನ್ 21 ಮಿಲಿಯನ್ ಡಾಲರ್ ಗಳಿಸಿದ್ದಾನೆ.

ರಯಾನ್ ಜನಪ್ರಿಯತೆ ಹೇಗಿದೆ ಅಂದರೆ ವಿಶ್ವ ಪ್ರಸಿದ್ಧ ವಾಲ್​ಮಾರ್ಟ್​ ಕಂಪೆನಿ ರಯಾನ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ವಾಲ್​ಮಾರ್ಟ್​ನ 2500 ಸ್ಟೋರ್​ಗಳಲ್ಲಿ 'ರಯಾನ್ ವರ್ಲ್ಡ್'​ ಹೆಸರಿನಲ್ಲಿ ಆಟಿಕೆಗಳನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಮಕ್ಕಳು ರಯಾನ್​ಗೆ ಇಷ್ಟವಾಗಿರುವ ಆಟಿಕೆಗಳನ್ನು ಕೊಂಡುಕೊಳ್ಳಬಹುದು.

ಇದನ್ನೂ ಓದಿ: ರಿಯಲ್ ಹೀರೋ: 300 ಮಂದಿ ವಿಕಲಚೇತನರ ಕನಸಿಗೆ ಹೆಗಲು ಕೊಟ್ಟ 14 ರ ಬಾಲಕ..!

ರಯಾನ್ ಹಾಕುವ ವೀಡಿಯೊ ರಿವ್ಯೂಗಳನ್ನು ಲಕ್ಷಾಂತರ ಜನರು ವೀಕ್ಷಿಸುತ್ತಾರೆ. ಹೊಸ ಆಟಿಕೆಗಳ ಕುರಿತಾದ ಮಾಹಿತಿಗಳನ್ನು ಪಡೆಯುತ್ತಾರೆ. ಕೇವಲ ಮೂರು ವರ್ಷಗಳ ಹಿಂದೆ ಪ್ರಾರಂಭಿಸಿದ ಯೂಟ್ಯೂಬ್ ಚಾನೆಲ್ ಅತೀ ಕಡಿಮೆ ಅವಧಿಯಲ್ಲಿ ಸೆನ್ಸೇಶನಲ್ ಆಗಿದೆ. ಇದೀಗ 7 ವಯಸ್ಸಿನ ಪುಟಾಣಿ ಗಳಿಸುತ್ತಿರುವ ಸಂಪಾದನೆಯನ್ನು ಕಂಡು ಇಡೀ ವಿಶ್ವವೇ ರಯಾನ್​ನತ್ತ ತಿರುಗಿ ನೋಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಯಾನ್​ ವೈರಲ್ ಆಗಿಬಿಟ್ಟಿದ್ದಾನೆ. ಈ ಕುರಿತು ಪ್ರತಿಯೊಬ್ಬರೂ ಟ್ವೀಟ್ ಮಾಡುವ ಮೂಲಕ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.











ಫೋರ್ಬ್ಸ್​ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಯೂಟ್ಯೂಬ್ ಸ್ಟಾರ್ಸ್ ಪಟ್ಟಿ
ರಯಾನ್ ಟಾಯ್ಸ್ ರಿವ್ಯೂ- 22 ಮಿಲಿಯನ್ ಡಾಲರ್
ಜೇಕ್ ಪಾಲ್ - 21.5 ಮಿಲಿಯನ್ ಡಾಲರ್
ಡ್ಯೂಡ್ ಪರ್ಫೆಕ್ಟ್ - 20 ಮಿಲಿಯನ್ ಡಾಲರ್
ಡಾನ್ ಟಿಡಿಎಂ - 18.5 ಮಿಲಿಯನ್ ಡಾಲರ್
ಜೆಫ್ರೀ ಸ್ಟಾರ್ - 18 ಮಿಲಿಯನ್ ಡಾಲರ್

First published: December 4, 2018, 7:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories