• Home
 • »
 • News
 • »
 • national-international
 • »
 • Chhattisgarh Gas Leak - ಛತ್ತೀಸ್​ಗಡದಲ್ಲಿ ಅನಿಲ ಸೋರಿಕೆ ದುರಂತ: 7 ಕಾರ್ಮಿಕರು ಆಸ್ಪತ್ರೆಗೆ; ಮೂವರ ಸ್ಥಿತಿ ಚಿಂತಾಜನಕ

Chhattisgarh Gas Leak - ಛತ್ತೀಸ್​ಗಡದಲ್ಲಿ ಅನಿಲ ಸೋರಿಕೆ ದುರಂತ: 7 ಕಾರ್ಮಿಕರು ಆಸ್ಪತ್ರೆಗೆ; ಮೂವರ ಸ್ಥಿತಿ ಚಿಂತಾಜನಕ

ರಾಯಗಡ ಆಸ್ಪತ್ರೆಯಲ್ಲಿನ ದೃಶ್ಯ

ರಾಯಗಡ ಆಸ್ಪತ್ರೆಯಲ್ಲಿನ ದೃಶ್ಯ

ರಾಯಗಡ್ ನಗರದ ಪೇಪರ್ ಮಿಲ್​ನಲ್ಲಿ ಈ ಅವಘಡ ಸಂಭವಿಸಿದೆ. ಗ್ಯಾಸ್ ಸೇವನೆಯಿಂದ ಮಿಲ್​ನ ಏಳು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.

 • News18
 • Last Updated :
 • Share this:

  ನವದೆಹಲಿ(ಮೇ 07): ಆಂಧ್ರದ ವಿಶಾಖಪಟ್ಟಣಂನಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆತಾಗಿ ಸಾಕಷ್ಟು ಸಾವುನೋವು ತಂದ ದುರಂತ ಸಂಭವಿಸಿದ ಬೆನ್ನಲ್ಲೇ ಛತ್ತೀಸ್​ಗಡದಲ್ಲೂ ಅನಿಲ ಸೋರಿಕೆ ದುರಂತ ಸಂಭವಿಸಿರುವುದು ವರದಿಯಾಗಿದೆ. ರಾಯಗಡ್ ನಗರದ ಪೇಪರ್ ಮಿಲ್​ನಲ್ಲಿ ಈ ಅವಘಡ ಸಂಭವಿಸಿದೆ. ಗ್ಯಾಸ್ ಸೇವನೆಯಿಂದ ಮಿಲ್​ನ ಏಳು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಹೋರಾಟದಲ್ಲಿದ್ಧಾರೆ ಎಂದು ರಾಯಗಡ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ತಿಳಿಸಿದ್ಧಾರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

  ಇಂದು ಮುಂಜಾನೆ ಈ ದುರಂತ ಸಂಭವಿಸಿದೆ. ಪೇಪರ್ ಮಿಲ್​ನಲ್ಲಿದ್ದ ಟ್ಯಾಂಕನ್ನ ಸ್ವಚ್ಛಗೊಳಿಸುವಾಗ ಅನಿಲ ಸೋರಿಕೆಯಾಗಿ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಆದರೆ, ದುರ್ಘಟನೆ ಸಂಭವಿಸಿದರೂ ಮಿಲ್​ನ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿಲ್ಲ. ಅಸ್ವಸ್ಥಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿದಾಗ ಆ ವಿಚಾರ ತಮಗೆ ತಿಳಿಯಿತು ಎಂದು ಪೊಲೀಸ್ ಅಧಿಕಾರಿ ಹೇಳಿದ್ಧಾರೆ.

  ಇದನ್ನೂ ಓದಿ: ವೈಜಾಗ್ ಗ್ಯಾಸ್ ದುರಂತ: ಆಂಧ್ರ ಮತ್ತು ಕೇಂದ್ರ ಸರ್ಕಾರಗಳಿಗೆ ಮಾನವ ಹಕ್ಕು ಆಯೋಗ ನೋಟೀಸ್

  ಪೊಲೀಸರು ಇದೀಗ ಮಿಲ್ ಮಾಲೀಕರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಕೂಡ ದಾಖಲಿಸಲಾಗುತ್ತಿದೆ.

  ಇವತ್ತು ಗುರುವಾರ ಬೆಳ್ಳಂಬೆಳಗ್ಗೆಯೇ ದೇಶದ ಎರಡು ಕಡೆ ಅನಿಲ ದುರಂತಗಳು ಸಂಭವಿಸಿದಂತಾಗಿದೆ. ಆಂಧ್ರದ ವಿಶಾಖಪಟ್ಟಣನಲ್ಲಿ ಎಲ್.ಜಿ. ಪಾಲಿಮರ್ಸ್ ಎಂಬ ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಪ್ರಮಾಣದ ಸ್ಟೈರೀನ್ ಅನಿಲ ಸೋರಿಕೆಯಾಗಿ ಸುತ್ತಮುತ್ತಲ ಪ್ರದೇಶಗಳ ಜನರನ್ನು ಅಸ್ವಸ್ಥಗೊಳಿಸಿದೆ. ಈ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದು, 5 ಸಾವಿರಕ್ಕೂ ಹೆಚ್ಚು ಜನರ ಆರೋಗ್ಯ ಏರುಪೇರು ಮಾಡಿದೆ.

  First published: