ಉತ್ತರ ಪ್ರದೇಶ ಉನ್ನಾವ್ ದುರಂತ: ಕರ್ತವ್ಯ ಲೋಪ ಆರೋಪದ ಮೇಲೆ 7 ಪೊಲೀಸರ ಅಮಾನತು

“ಕರ್ತವ್ಯ ಲೋಪ ತೋರಿದ್ದಕ್ಕೆ ಉನ್ನಾವ್​ನ ಬಿಹಾರ್ ಪೊಲೀಸ್ ಠಾಣಾಧಿಕಾರಿ ಅಜಯ್ ಕುಮಾರ್ ತ್ರಿಪಾಠಿ ಹಾಗೂ ಇತರ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ” ಎಂದು ಉ.ಪ್ರ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಾಸ್ತಿ ತಿಳಿಸಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

news18
Updated:December 9, 2019, 8:04 AM IST
ಉತ್ತರ ಪ್ರದೇಶ ಉನ್ನಾವ್ ದುರಂತ: ಕರ್ತವ್ಯ ಲೋಪ ಆರೋಪದ ಮೇಲೆ 7 ಪೊಲೀಸರ ಅಮಾನತು
ಉ.ಪ್ರ. ಪೊಲೀಸ್
  • News18
  • Last Updated: December 9, 2019, 8:04 AM IST
  • Share this:
ಲಕ್ನೋ(ಡಿ. 09): ಉನ್ನಾವ್ ಅತ್ಯಾಚಾರ ಸಂತ್ರಸ್ತೆಗೆ ಆರೋಪಿಗಳೇ ಬೆಂಕಿ ಹಚ್ಚಿ ಕೊಂದ ಘಟನೆ ಸಂಬಂಧ ಏಳು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಸಂತ್ರಸ್ತೆಗೆ ರಕ್ಷಣೆ ಕೊಡಲು ಕರ್ತವ್ಯ ಲೋಪ ತೋರಿದ ಆರೋಪದ ಮೇಲೆ ಉತ್ತರ ಪ್ರದೇಶ ಸರ್ಕಾರ ಈ ಏಳು ಪೊಲೀಸರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ.

“ಕರ್ತವ್ಯ ಲೋಪ ತೋರಿದ್ದಕ್ಕೆ ಉನ್ನಾವ್​ನ ಬಿಹಾರ್ ಪೊಲೀಸ್ ಠಾಣಾಧಿಕಾರಿ ಅಜಯ್ ಕುಮಾರ್ ತ್ರಿಪಾಠಿ ಹಾಗೂ ಇತರ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ” ಎಂದು ಉ.ಪ್ರ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಾಸ್ತಿ ತಿಳಿಸಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಅಪ್ಪ, ದಯವಿಟ್ಟು ನನ್ನ ಕಾಪಾಡು; ಬೆಂಕಿ ದುರಂತದಲ್ಲಿ ಸಾಯುವ ಮುನ್ನ ಮನೆಯವರಿಗೆ ಮಾಡಿದ ಕೊನೇ ಕರೆಗಳು...

23 ವರ್ಷದ ರೇಪ್ ಸಂತ್ರಸ್ತೆಯು ನ್ಯಾಯಾಲಯಕ್ಕೆ ಹೋಗಿ ಬರುವಾಗ ಐದು ಜನರು ಹಲ್ಲೆ ಎಸಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಬೆಂಕಿ ಜ್ವಾಲೆ ಮೈ ಸುಡುತ್ತಿರುವಂತೆಯೇ ಆಕೆ ಒಂದು ಕಿಲೋಮೀಟರ್​ವರೆಗೂ ಹೋಗಿ ಪೊಲೀಸರ ಸಹಾಯ ಪಡೆದಿದ್ದಳು. ಆದರೆ, ಬದುಕಲು ಬಹಳ ಕಷ್ಟಪಟ್ಟ ಆ ಮಹಿಳೆ ಜೀವನ್ಮರಣ ಹೋರಾಟದಲ್ಲಿ ಸಾವನ್ನಪ್ಪಿದರು. ಆಕೆಯ ದೇಹದ ಶೇ. 90 ಭಾಗ ಸುಟ್ಟು ಹೋಗಿತ್ತು. ಈ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಆಕೆಯ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಅವರ ಕುಟುಂಬದವರು ಹಠ ಹಿಡಿದಿದ್ದರು. ಉತ್ತರ ಪ್ರದೇಶ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇಲೆ ಆಕೆಯ ಅಂತ್ಯಸಂಸ್ಕಾರ ನಿನ್ನೆ ಆಯಿತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 9, 2019, 8:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading