• Home
 • »
 • News
 • »
 • national-international
 • »
 • Chhattisgarh: ಛತ್ತೀಸ್​ಗಢದಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ; 7 ಕಾರ್ಮಿಕರು ಸಾವು

Chhattisgarh: ಛತ್ತೀಸ್​ಗಢದಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ; 7 ಕಾರ್ಮಿಕರು ಸಾವು

ಛತ್ತೀಸ್​ಗಢದಲ್ಲಿ ಅಪಘಾತಕ್ಕೀಡಾದ ಕಾರು

ಛತ್ತೀಸ್​ಗಢದಲ್ಲಿ ಅಪಘಾತಕ್ಕೀಡಾದ ಕಾರು

ಒಡಿಶಾದಲ್ಲಿ ಅಪಘಾತಕ್ಕೀಡಾಗಿರುವ ಬಸ್​ನಲ್ಲಿ ಸುಮಾರು 70 ಜನರು ಪ್ರಯಾಣಿಸುತ್ತಿದ್ದರು. ಇಂದು ಬೆಳಗ್ಗೆ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟವರಿಗೆ ಒಡಿಶಾ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಿಸಿದೆ.

 • Share this:

  ನವದೆಹಲಿ (ಸೆ. 5): ಛತ್ತೀಸ್​ಗಢದಲ್ಲಿ ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ 7 ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನು 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಛತ್ತೀಸ್​ಗಢದ ರಾಯ್ಪುರದ ಚೆರಿ ಖೇಡಿಯಲ್ಲಿ ಇಂದು ಈ ಘಟನೆ ನಡೆದಿದೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಒಡಿಶಾದ ಗಂಜಮ್​ನಿಂದ ಗುಜರಾತ್​ನ ಸೂರತ್​ಗೆ ಬಸ್ ಪ್ರಯಾಣಿಸುತ್ತಿದ್ದಾಗ ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ ಎಂದು ರಾಯ್ಪುರದ ಎಸ್​ಎಸ್​ಪಿ ಅಜಯ್ ಯಾದವ್ ತಿಳಿಸಿದ್ದಾರೆ.


  ಅಪಘಾತಕ್ಕೀಡಾಗಿರುವ ಬಸ್​ನಲ್ಲಿ ಸುಮಾರು 70 ಜನರು ಪ್ರಯಾಣಿಸುತ್ತಿದ್ದರು. ಇಂದು ಬೆಳಗ್ಗೆ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟವರಿಗೆ ಒಡಿಶಾ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಿಸಿದೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಪಘಾತದಲ್ಲಿ ತೊಂದರೆಗೀಡಾದವರ ಕುಟುಂಬಗಳಿಗೆ ನೆರವು ನೀಡುವ ಭರವಸೆ ನೀಡಿದ್ದಾರೆ.  ಈ ದುರಂತದಲ್ಲಿ 59 ಪ್ರಯಾಣಿಕರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಜಮ್​ನಿಂದ ಗುಜರಾತ್​ಗೆ ಪ್ರಯಾಣಿಸುತ್ತಿದ್ದ ಬಸ್​ ಅಪಘಾತಕ್ಕೀಡಾಗಿ ಈ ದುರಂತ ಸಂಭವಿಸಿದೆ.


  ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ...

  Published by:Sushma Chakre
  First published: