ಗುಜರಾತ್​​ನಲ್ಲಿ ಮುಂದುವರೆದ ಹಿಂಸಾಚಾರ: ಲುಂಗಿ ಉಟ್ಟಿದ್ದ 7 ಬಿಹಾರಿಗಳ ಮೇಲೆ ಸ್ಥಳೀಯರಿಂದ ಹಲ್ಲೆ..

ಹಲ್ಲೆಗೊಳಗಾದ ಎಂಜಿನಿಯರ್ ಶತ್ರುಘ್ನ ಯಾದವ್, ಇತರೆ 6 ಮಂದಿ ಬಿಹಾರಿಗಳು ವಡೋದರಾದ ಪ್ರಾಥಮಿಕ ಶಾಲೆಯೊಂದರ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಕ್ಯಾತೆ ತೆಗೆದು ಸ್ಥಳೀಯರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

Ganesh Nachikethu | news18
Updated:October 17, 2018, 8:46 PM IST
ಗುಜರಾತ್​​ನಲ್ಲಿ ಮುಂದುವರೆದ ಹಿಂಸಾಚಾರ: ಲುಂಗಿ ಉಟ್ಟಿದ್ದ 7 ಬಿಹಾರಿಗಳ ಮೇಲೆ ಸ್ಥಳೀಯರಿಂದ ಹಲ್ಲೆ..
ಬಿಹಾರಿಗಳು
  • Advertorial
  • Last Updated: October 17, 2018, 8:46 PM IST
  • Share this:
ನ್ಯೂಸ್​​-18 ಕನ್ನಡ

ನವದೆಹಲಿ(ಅ.17): ಗುಜರಾತ್​​ನಲ್ಲಿ ಮತ್ತೆ ವಲಸಿಗರ ಮೇಲೆ ಹಲ್ಲೆ ಮುಂದುವರೆದಿದೆ. ಸಿಮಾ ಎಂಬ ನಗರದಲ್ಲಿ ಬಿಹಾರ ಮೂಲದ ಸಿವಿಲ್​​ ಇಂಜಿನಿಯರ್​​ ಸೇರಿದಂತೆ 7 ಮಂದಿ ವಲಸೆ ಕಾರ್ಮಿಕರ ಮೇಲೆ ಸ್ಥಳೀಯರು ದಾಳಿ ನಡೆಸಿದ್ಧಾರೆ. ಮಧ್ಯರಾತ್ರಿ ಲುಂಗಿ ಉಟ್ಟು ದಾಂದಲೆ ನಡೆಸುತ್ತಿದ್ದ ಕಾರಣಕ್ಕೆ ಬಿಹಾರಿಗಳ ಮೇಲೆ ಸ್ಥಳೀಯರು ಹಲ್ಲೆ ಮಾಡಿದ್ಧಾರೆ ಎಂದು ಪೊಲೀಸ್​​ ಮೂಲಗಳು ತಿಳಿಸಿವೆ.

ಮಧ್ಯರಾತ್ರಿ ವೇಳೆ ಸಮಾ ಎಂಬ ನಗರದಲ್ಲಿ ಲುಂಗಿ ಉಟ್ಟಿದ್ದ 7 ಮಂದಿ ಬಿಹಾರಿಗಳು ಅನುಚಿತವಾಗಿ ವರ್ತಿಸಿದ್ದರು. ಅವರ ದಾಂದಲೇ ಮಿತಿ ಮೀರಿತ್ತು. ಎಷ್ಟೇ ಹೇಳಿದರೂ ನಮ್ಮ ಮಾತು ಕೇಳದೆ, ಸ್ಥಳೀಯರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು. ಹೀಗಾಗಿ ಬುದ್ದಿ ಹೇಳುವ ಸಲುವಾಗಿ ಹಲ್ಲೆ ಮಾಡಿದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ಧಾರೆ.

ಬಿಹಾರಿಗಳ ಮೇಲೆ ಹಲ್ಲೆ ನಡೆಸಿದ ಮೂವರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೇಯೂರ್ ಪರ್ಮಾರ್ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.  ಅಲ್ಲದೇ ಹಲ್ಲೆಗೊಳಗಾದ ಎಂಜಿನಿಯರ್ ಶತ್ರುಘ್ನ ಯಾದವ್, ಇತರೆ 6 ಮಂದಿ ಬಿಹಾರಿಗಳು ವಡೋದರಾ ಮುನ್ಸಿಪಲ್ ಕಾರ್ಪೊರೇಶನ್‌‌ಗೆ ಸೇರಿದ ಪ್ರಾಥಮಿಕ ಶಾಲೆಯೊಂದರ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಗುಜರಾತ್​​ ಹಿಂಸಾಚಾರ: ವಲಸಿಗರ ಮೇಲೆ ಹಲ್ಲೆ, ‘ಠಾಕೂರ್​​ ಸೇನೆ’ ಕೈವಾಡವಿಲ್ಲ ಎಂದು ಅಲ್ಪೇಶ್​​ ಸ್ಪಷ್ಟನೆ..

ವಡೋದರಾದ ಪ್ರಾಥಮಿಕ ಶಾಲೆಯೊಂದರ ಮುಂಭಾಗ ನಿಂತಿದ್ದ ಬಿಹಾರಿಗಳನ್ನು ಯಾಕೇ ಲುಂಗಿ ಉಟ್ಟಿದ್ದೀರಿ? ಎಂದು ಮೂವರು ಪ್ರಶ್ನಿಸಿದ್ದರು ಎನ್ನಲಾಗಿದೆ. ಈ ವೇಳೆ ಬಿಹಾರಿಗಳು ನಿಮಗ್ಯಾಕೇ ಉತ್ತರಿಸಬೇಕು? ಎಂದು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಏಕಾಏಕಿ ದಾಳಿ ನಡೆಸಿದ್ದಾರಂತೆ. ಬಳಿಕ ಇಂಜಿನಿಯರ್​​ ಕೂಡಲೇ ಸ್ಥಳೀಯ ಪೊಲೀಸ್​​ ಠಾಣೆಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ಧಾರೆ ಎನ್ನುತ್ತಿವೆ ಮೂಲಗಳು.

ಇನ್ನು ಸುದ್ದಿ ತಿಳಿದು ಪೊಲೀಸರು ಆಗಮಿಸುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇಂಜಿನಿಯರ್​​ ಯಾದವ್​​ ಬೈಕನ್ನು ಕೂಡ ಮೂವರು ಸುಟ್ಟು ಹಾಕಿ ನಗರದಿಂದ ಕಾಲಿ ಮಾಡುವಂತೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಾವು ಪೊಲೀಸರಿಗೆ ತಿಳಿಸಿದೆವು ಎಂದು ಯಾದವ್​​ ತಮ್ಮ ಅಳಲು ತೋಡಿಕೊಂಡಿದ್ದಾರೆ.ಈ ಸಂಬಂಧ ಮಾತಾಡಿದ ಸಮಾ ಪೊಲೀಸ್ ಇನ್ಸಪೆಕ್ಟರ್, ಹಿಂದೆ ವಲಸಿಗರ ವಿರುದ್ಧ ನಡೆದಿದ್ದ ದಾಳಿಗೂ, ಇಂದು ಬಿಹಾರಿಗಳ ಮೇಲೆ ನಡೆದ ಹಲ್ಲೆಗೂ ಯಾವುದೇ ಸಂಬಂಧವಿಲ್ಲ. ಲುಂಗಿಯನ್ನುಟ್ಟು ಕೆಟ್ಟದಾಗಿ ಕೂರುವ ಕಾರಣಕ್ಕೆ ಸ್ಥಳೀಯರ ಮತ್ತು ಬಿಹಾರಿಗಳ ನಡುವೇ ವಾಗ್ವಾದ ನಡೆದಿದೆ. ಈ ವೇಳೆ ಅಚಾನಕ್​​ ಆಗಿ ಎರಡು ಗುಂಪುಗಳ ನಡುವೇ ಘರ್ಷನೆಯಾಗಿದೆ ಎಂದು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ: ಜೀವ ಉಳಿಸಿಕೊಳ್ಳಲು ಗುಜರಾತ್​ನಿಂದ ಕಾಲ್ಕಿತ್ತ 50,000ಕ್ಕೂ ಹೆಚ್ಚು ಉತ್ತರ ಭಾರತೀಯರು

ಈ ಹಿಂದೆ ಬಿಹಾರ ಮೂಲದ ವ್ಯಕ್ತಿಯೋರ್ವ ಠಾಕೂರ್​​ ಸಮುದಾಯಕ್ಕೆ ಸೇರಿದ ಅಪ್ರಪ್ತೆ ಬಾಲಕಿ ಮೇಲೆ ಬರ್ಬರವಾಗಿ ಅತ್ಯಚಾರವೆಸಗಿದ್ದ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಉತ್ತರ ಭಾರತೀಯ ವಲಸಿಗರ ಮೇಲೆ ವ್ಯಾಪಕ ದಾಳಿ ನಡೆದಿತ್ತು. ಈ ದಾಳಿ ಹಿಂದೆ ಠಾಕೂರ್​​ ಸೇನೆಯ ಕೈವಾಡವಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೇ ಈ ಹಿಂಸಾಚರಕ್ಕೆ ಕಾಂಗ್ರೆಸ್​​ ಶಾಸಕ ಅಲ್ಪೇಶ್​​ ಠಾಕೂರ್​​ ಕುಮ್ಮಕ್ಕು ನೀಡುತ್ತಿದ್ಧಾರೆ ಎನ್ನಲಾಗಿತ್ತು.

----------
ಆನೇಕಲ್:ಮಹಿಳೆಗೆ ಚಾಕುವಿನಿಂದ ಇರಿತ: ಆಸ್ಪತ್ರೆಗೆ ದಾಖಲು
First published:October 17, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ