HOME » NEWS » National-international » SEVA INTERNATIONAL HELPS TO NON RESIDENT INDIANS IN CRITICAL SITUATION HTV LG

ಕಷ್ಟಕಾಲದಲ್ಲಿ ದೇಶಕ್ಕೆ ನೆರವಾಗಿದೆ ಅನಿವಾಸಿ ಭಾರತೀಯರ ಸೇವಾ ಇಂಟರ್​​ನ್ಯಾಷನಲ್​ ಸಂಸ್ಥೆ

ಕೆಲ ದಿನಗಳಿಂದೀಚೆಗೆ ಭಾರತದಲ್ಲಿ ಅತಿಯಾಗಿ ಆಕ್ಸಿಜನ್ ಕೊರತೆ ಉಂಟಾಗಿ, ನೂರಾರು ಜನ ಕೊರೋನಾ ಸೋಂಕಿತರು ಮೃತಪಟ್ಟರು. ಈ ಸಮಸ್ಯೆಯನ್ನು ಮನಗಂಡ ಸೇವಾ ಇಂಟರ್‌ನ್ಯಾಶನಲ್ ಸದಸ್ಯರು ಅಮೆರಿಕಾದಲ್ಲಿ ತಾವೇ ಖುದ್ದಾಗಿ ಹಣ ಕೂಡಿಟ್ಟು ಬರೋಬ್ಬರಿ 2184 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಭಾರತಕ್ಕೆ ಕಳುಹಿಸಿದ್ದಾರೆ.

news18-kannada
Updated:May 5, 2021, 10:02 AM IST
ಕಷ್ಟಕಾಲದಲ್ಲಿ ದೇಶಕ್ಕೆ ನೆರವಾಗಿದೆ ಅನಿವಾಸಿ ಭಾರತೀಯರ ಸೇವಾ ಇಂಟರ್​​ನ್ಯಾಷನಲ್​ ಸಂಸ್ಥೆ
ಸೇವಾ ಇಂಟರ್​​ನ್ಯಾಷನಲ್​ ಸಂಸ್ಥೆ
  • Share this:
ಭಾರತೀಯರು ಎಲ್ಲಿಗೇ ಹೋದರೂ ಅವರ ದೇಶಪ್ರೇಮ ಕಡಿಮೆ ಆಗೋದಿಲ್ಲ ಅನ್ನೋದಕ್ಕೆ ಹಲವು ಉದಾಹರಣೆಗಳಿವೆ. ಈಗ ಕೋವಿಡ್ ಎರಡನೇ ಅಲೆಯಿಂದ ದೇಶದಾದ್ಯಂತ ನಾನಾ ರೀತಿಯ ಸಮಸ್ಯೆಗಳು ಉಲ್ಬಣವಾಗಿವೆ. ಈ ಕಷ್ಟಕಾಲದಲ್ಲೂ ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸೈಲೆಂಟಾಗಿ ನಾನಾ ಬಗೆಯ ಸೇವೆಗಳಲ್ಲಿ ತೊಡಗಿದ್ದಾರೆ.

ಹೌದು, ಅಮೆರಿಕಾದ ಅನಿವಾಸಿ ಭಾರತೀಯರು ಸೇರಿ ಸೃಷ್ಟಿಸಿರುವ ಸಂಸ್ಥೆ ಸೇವಾ ಇಂಟರ್‌ನ್ಯಾಶನಲ್, ಹಲವು ಸಾಮಾಜಿಕ ಕೆಲಸಗಳ ಮೂಲಕ ಗುರುತಿಸಿಕೊಂಡಿದೆ. 2006ರಲ್ಲಿ ಗುಜರಾತ್‌ನ ಭುಜ್‌ನಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದ ಸಾಕಷ್ಟು ಹಾನಿ ಸಂಭವಿಸಿತ್ತು. ಆಗ ಸಹಾಯ ಹಸ್ತ ಚಾಚುವ ಮೂಲಕ ಭಾರತಕ್ಕೆ ಎಂಟ್ರಿ ಕೊಟ್ಟ ಸೇವಾ ಇಂಟರ್‌ನ್ಯಾಶನಲ್ ಇದುವರೆಗೂ ಹಲವಾರು ಬಾರಿ ಹಲವೆಡೆ ಜನಪರ ಕೆಲಸಗಳನ್ನು ಮಾಡಿದೆ. ಶಿಕ್ಷಣ ಹಾಗೂ ನೈರ್ಮಲ್ಯಗಳ ವಿಭಾಗದತ್ತ ಹೆಚ್ಚು ಗಮನ ಹರಿಸಿರುವ ಸೇವಾ ಇಂಟರ್‌ನ್ಯಾಶನಲ್ ಸಂಸ್ಥೆ, ಹಲವು ಊರುಗಳಿಗೆ ಹಾಗೂ ಸರ್ಕಾರಿ ಶಾಲೆಗಳಿಗೆ ಶೌಚಾಲಯ ನಿರ್ಮಿಸಿಕೊಟ್ಟಿದೆ.

ಕಳೆದ ವರ್ಷವೂ ಕೊರೊನಾ ಮೊದಲ ಅಲೆಯ ಸಂದರ್ಭದಲ್ಲೂ ಆಹಾರದ ಕಿಟ್‌ಗಳನ್ನು ಪೂರೈಸಿದ್ದ ಸೇವಾ ಇಂಟರ್‌ನ್ಯಾಶನಲ್, 300ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ಹಾಗೂ ನೂರಾರು ಬಡಜನರಿಗೆ ಆಹಾರದ ಕಿಟ್‌ಅನ್ನು ನೀಡಿತ್ತು. ಹಾಗೇ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳಲು ಬಸ್, ರೈಲು‌ಗಳಲ್ಲಿ ಸೇರಿದ್ದ ನೂರಾರು ಜನರಿಗೆ ಫುಡ್ ಕಿಟ್ ಹಾಗೂ ಸ್ನ್ಯಾಕ್ಸ್ ಕಿಟ್‌ಗಳನ್ನು ನೀಡಿ ಧೈರ್ಯ ತುಂಬಿತ್ತು. ಈಗ ಕೊರೋನಾ ಎರಡನೇ ಅಲೆಯ ತೀವ್ರತೆಗೆ ಅನುಗುಣವಾಗಿ ನಾನಾ ರೀತಿಯಲ್ಲಿ ಭಾರತೀಯರ ಸಹಾಯಕ್ಕೆ ನಿಂತಿದೆ.



ನಿಮ್ಮ ಬಿಪಿ, ಹೃದಯದ ಬಡಿತ ಕಾಫಿ ಮೇಲಿನ ಆಸೆಯನ್ನು ಪ್ರಚೋದಿಸುತ್ತದೆ; ಸಂಶೋಧನೆಯಿಂದ ಬಹಿರಂಗ

ಕೆಲ ದಿನಗಳಿಂದೀಚೆಗೆ ಭಾರತದಲ್ಲಿ ಅತಿಯಾಗಿ ಆಕ್ಸಿಜನ್ ಕೊರತೆ ಉಂಟಾಗಿ, ನೂರಾರು ಜನ ಕೊರೋನಾ ಸೋಂಕಿತರು ಮೃತಪಟ್ಟರು. ಈ ಸಮಸ್ಯೆಯನ್ನು ಮನಗಂಡ ಸೇವಾ ಇಂಟರ್‌ನ್ಯಾಶನಲ್ ಸದಸ್ಯರು ಅಮೆರಿಕಾದಲ್ಲಿ ತಾವೇ ಖುದ್ದಾಗಿ ಹಣ ಕೂಡಿಟ್ಟು ಬರೋಬ್ಬರಿ 2184 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಭಾರತಕ್ಕೆ ಕಳುಹಿಸಿದ್ದಾರೆ. ಮಾತ್ರವಲ್ಲ ಸ್ವಯಂಸೇವಕ ತಂಡಗಳನ್ನು ಮಾಡಿಕೊಂಡು ಭಾರತದ ಹಲವು ನಗರಗಳಲ್ಲಿ ಸೈಲೆಂಟಾಗಿ ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲೂ ಕೊರೋನಾ ಕುರಿತು ಜನಜಾಗೃತಿ ಮೂಡಿಸುತ್ತಿರುವ ಸೇವಾ ಇಂಟರ್‌ನ್ಯಾಶನಲ್ ಸಂಸ್ಥೆಯವರು ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜೊತೆಗೂಡಿ ಲಸಿಕೆಯನ್ನೂ ಕೊಡಿಸುತ್ತಿದ್ದಾರೆ. ಒಂದೊಂದೇ ವಾರ್ಡ್​​ನಲ್ಲಿ ಬಿಪಿಎಲ್ ಕಾರ್ಡ್ ಇರುವವರ ಮನೆಗಳನ್ನು ಗುರುತಿಸಿ, ಅಂತಹ ಮನೆಗಳಿಗೆ ಖುದ್ದು ತಾವೂ ಭೇಟಿ ಕೊಟ್ಟು, ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಲವು ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಅಕ್ಕಿ, ಗೋಧಿ ಹಿಟ್ಟು, ಸಕ್ಕರೆ, ಬೇಳೆ, ಈರುಳ್ಳಿ, ತೆಂಗಿನಕಾಯಿ ಸೇರಿದಂತೆ ಒಂದು ಕುಟುಂಬಕ್ಕೆ ಒಂದು ವಾರಕ್ಕೆ ಬೇಕಾದ ಆಹಾರದ ಕಿಟ್‌ಗಳನ್ನೂ ಮಾಡಿ, ಬಡವರ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಸೇವಾ ಇಂಟರ್‌ನ್ಯಾಶನಲ್. ಮಾತ್ರವಲ್ಲ ನಗರದ ಹಲವೆಡೆಗಳಲ್ಲಿ ಬಡವರಿಗೆ ಆಹಾರ ಪೊಟ್ಟಣಗಳನ್ನೂ ನೀಡುತ್ತಿದೆ. ಇನ್ನು ಹೋಮ್ ಐಸೊಲೇಷನ್‌ನಲ್ಲಿರುವ ಕೊರೊನಾ ಸೋಂಕಿತರಿಗೆ ಮೆಡಿಕಲ್ ಕಿಟ್‌ಗಳನ್ನು ಪೂರೈಸುವ ಕೆಲಸವನ್ನೂ ಮಾಡುತ್ತಿದೆ ಸೇವಾ ಇಂಟರ್‌ನ್ಯಾಷನಲ್ ತಂಡ.

ಹೀಗೆ ಅನಿವಾಸಿ ಭಾರತೀಯರು ಕಷ್ಟಕಾಲದಲ್ಲಿ ಭಾರತದಲ್ಲಿ ಸೈಲೆಂಟ್ ಆಗಿ ತಮ್ಮದೇ ರೀತಿಯಲ್ಲಿ ಹಲವು ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಆ ಮೂಲಕ ಕೊರೊನಾ ಸೋಂಕಿನ ವಿರುದ್ಧ ಭಾರತ ಸಾರಿರುವ ಸಮರಕ್ಕೆ ತಾವೂ ಕೈಜೋಡಿಸಿರುವುದು ವಿಶೇಷವೇ ಸರಿ. ಆದಷ್ಟು ಬೇಗ ಈ ಕೊರೊನಾ ಮಹಾಮಾರಿಯ ಆಟಕ್ಕೆ ಬ್ರೇಕ್ ಬೀಳಲಿ ಎಂಬುದೇ ಸದ್ಯ ಎಲ್ಲರ ಆಶಯವಾಗಿದೆ.
Published by: Latha CG
First published: May 5, 2021, 10:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories