ಇಡಿ ಬಂಧನದ ಭೀತಿಯಲ್ಲಿ ಚಿದಂಬರಂ; ಸುಪ್ರೀಂ ಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ತನಿಖೆಗೆ ಧಕ್ಕೆಯಾಗಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Vijayasarthy SN | news18
Updated:September 5, 2019, 12:43 PM IST
ಇಡಿ ಬಂಧನದ ಭೀತಿಯಲ್ಲಿ ಚಿದಂಬರಂ; ಸುಪ್ರೀಂ ಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಪಿ. ಚಿದಂಬರಮ್
  • News18
  • Last Updated: September 5, 2019, 12:43 PM IST
  • Share this:
ನವದೆಹಲಿ(ಸೆ. 05): ಐಎನ್​ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಸಿಲುಕಿ ಸಿಬಿಐ ಕಸ್ಟಡಿಯಲ್ಲಿರುವ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪಿ. ಚಿದಂಬರಮ್ ಅವರನ್ನು ಜಾರಿ ನಿರ್ದೇಶನಾಲಯದಿಂದಲೂ ವಿಚಾರಣೆಗೊಳಪಡುವ ಸಾಧ್ಯತೆ ಹೆಚ್ಚಿದೆ. ಇಡಿ ಬಂಧನದಿಂದ ರಕ್ಷಣೆ ಕೋರಿ ಪಿ ಚಿದಂಬಮ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಂದು ಸುಪ್ರೀಂ ಕೊರ್ಟ್ ವಜಾಗೊಳಿಸಿದೆ. ಈಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಯಾವಾಗ ಬೇಕಾದರೂ ಚಿದಂಬರಮ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬಹುದಾಗಿದೆ.

ಚಿದಂಬರಮ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಅನುಮತಿ ಕೊಡುವಂತೆ ಜಾರಿ ನಿರ್ದೇಶನಾಲಯ ಮಾಡಿಕೊಂಡ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಇವತ್ತು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಪೀಠದ ನ್ಯಾಯಾಧೀಶರು, ಈ ಹೊತ್ತಿನಲ್ಲಿ ಚಿದಂಬಮ್ ಅವರಿಗೆ ನಿರೀಕ್ಷಣಾ ಜಾಮೀನು ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ತೀರ್ಮಾನಿಸಿದರು.

ಇದನ್ನೂ ಓದಿ: NRC ಪಟ್ಟಿಯಿಂದ ಹೊರಗುಳಿದ 19 ಲಕ್ಷ ‘ವಿದೇಶಿಗ’ರನ್ನು ಕೂಡಿಡಲು ಅಸ್ಸಾಮ್​ನಲ್ಲಿ ನಿರ್ಮಾಣವಾಗುತ್ತಿದೆ 11 ಡಿಟೆನ್ಷನ್ ಸೆಂಟರ್ಸ್

ನಿರೀಕ್ಷಣಾ ಜಾಮೀನು ಕೊಡಲೇಬೇಕೆಂದಿಲ್ಲ. ಆರ್ಥಿಕ ಅಪರಾಧದ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನನ್ನು ವಿಶೇಷ ಸಂದರ್ಭದಲ್ಲಿ ಮಾತ್ರ ನೀಡಬಹುದಾಗಿದೆ. ತನಿಖೆಯ ಆರಂಭಿಕ ಹಂತಗಳಲ್ಲೇ ನಿರೀಕ್ಷಣಾ ಜಾಮೀನು ನೀಡಿದರೆ ತನಿಖೆಯ ಕಾರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ನಿರೀಕ್ಷಣಾ ಜಾಮೀನು ನೀಡಲಾಗುವುದಿಲ್ಲ. ಚಿದಂಬರಮ್ ಬಯಸಿದರೆ ಅವರು ಟ್ರಯಲ್ ಕೋರ್ಟ್​ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಿ ಎಂದು ನ್ಯಾಯಮೂರ್ತಿಗಳು ಬೇರೊಂದು ಮಾರ್ಗದ ಅವಕಾಶವನ್ನು ತೋರಿಸಿದರು.

ಇದನ್ನು ಓದಿ: ಪೆಲ್ಲೆಟ್​​​ ಗನ್​ ದಾಳಿಯಿಂದ ಯುವಕ ಸಾವು; ಹಳೆ ಶ್ರೀನಗರ ಭಾಗದಲ್ಲಿ ಮತ್ತೆ ನಿರ್ಬಂಧ

ಇದೇ ವೇಳೆ, ಚಿದಂಬರಮ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸುವಾಗ ತೀರ್ಪು ಬರೆದ ರೀತಿಯ ಬಗ್ಗೆಯೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಬೇಸರಪಟ್ಟರು. ದೆಹಲಿ ಹೈಕೋರ್ಟ್ ಪೀಠವು ಚಿದಂಬರಮ್ ಅರ್ಜಿ ವಜಾಗೊಳಿಸುವಾಗ ಇ.ಡಿ. ತನಿಖಾ ಸಂಸ್ಥೆ ನೀಡಿದ್ದ ನೋಟೀಸ್​ನ ಅಂಶಗಳನ್ನೇ ಯಥಾವತ್ತಾಗಿ ನಕಲು ಮಾಡಿ ತನ್ನ ತೀರ್ಪಿನಲ್ಲಿ ಸೇರಿಸಿತ್ತು. ಈ ವಿಚಾರವನ್ನು ಚಿದಂಬರಮ್ ಪರ ವಕೀಲರು ಸುಪ್ರೀಂ ಕೋರ್ಟ್​ನ ವಿಚಾರಣೆ ವೇಳೆ ಪ್ರಸ್ತಾಪ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು.ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಚಿದಂಬರಮ್ ಅವರು ಕಳೆದ 15 ದಿನಗಳಿಂದಲೂ ಸಿಬಿಐ ಕಸ್ಟಡಿಯಲ್ಲೇ ಇದ್ದಾರೆ. ಇದೀಗ ಅವರನ್ನು ಇಡಿ ಯಾವುದೇ ಕ್ಷಣದಲ್ಲಾದರೂ ತನ್ನ ಕಸ್ಟಡಿಗೆ ತೆಗೆದುಕೊಳ್ಳುವ ನಿರೀಕ್ಷೆ ಇದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading