ಪಿ ಚಿದಂಬರಂಗೆ ಸುಪ್ರೀಂಕೋರ್ಟ್​ನಲ್ಲಿ ಹಿನ್ನಡೆ; ಅರ್ಜಿ ವಜಾಗೊಳಿಸಿದ ಸರ್ವೋಚ್ಚ ನ್ಯಾಯಾಲಯ

ಬುಧವಾರ ಸಿಬಿಐ ಬಂಧನಕ್ಕೆ ಬಳಗಾಗಿದ್ದ ಅವರು  ತಮ್ಮನ್ನು ಬಂಧಿಸಿರುವ ಬಗ್ಗೆಯೂ ಚಿದಂಬರಂ ಸುಪ್ರೀಂನಲ್ಲಿ ಆಕ್ಷೇಪ ಸಲ್ಲಿಸಿದ್ದಾರೆ. ಈ ಪ್ರಕರಣ ಕುರಿತು ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ ಈ ಅರ್ಜಿ ಅಮಾನ್ಯವಾಗಿದೆ ಎಂದು ತಿಳಿಸಿದೆ.

Seema.R | news18-kannada
Updated:August 26, 2019, 2:37 PM IST
ಪಿ ಚಿದಂಬರಂಗೆ ಸುಪ್ರೀಂಕೋರ್ಟ್​ನಲ್ಲಿ ಹಿನ್ನಡೆ; ಅರ್ಜಿ ವಜಾಗೊಳಿಸಿದ ಸರ್ವೋಚ್ಚ ನ್ಯಾಯಾಲಯ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ (ಆ.26): ಐಎನ್​ಎಕ್ಸ್​ ಹಗರಣ ಸಂಬಂಧ ಸಿಬಿಐ ಬಂಧನದಲ್ಲಿರುವ ಮಾಜಿ ಸಚಿವ ಪಿ ಚಿದಂಬರಂಗೆ ಸುಪ್ರೀಂಕೋರ್ಟ್​ನಲ್ಲಿ ಭಾರೀ ಹಿನ್ನೆಡೆಯಾಗಿದೆ. ಈ ಹಿಂದೆ ಪ್ರಕರಣ ಸಂಬಂಧ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್​ ನಿರಾಕರಿಸಿತ್ತು. ಇದೀಗ ಸುಪ್ರೀಂಗೆ ಸಲ್ಲಿಸಿದ್ದ ಅವರ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. 

ಶುಕ್ರವಾರ ಸಿಬಿಐ ಬಂಧನಕ್ಕೆ ಒಳಗಾಗಿದ್ದ ಅವರು  ತಮ್ಮನ್ನು ಬಂಧಿಸಿರುವ ಬಗ್ಗೆಯೂ ಚಿದಂಬರಂ ಸುಪ್ರೀಂನಲ್ಲಿ ಆಕ್ಷೇಪ ಸಲ್ಲಿಸಿದ್ದಾರೆ. ಈ ಪ್ರಕರಣ ಕುರಿತು ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ ಈ ಅರ್ಜಿ ಅಮಾನ್ಯವಾಗಿದೆ ಎಂದು ತಿಳಿಸಿದೆ.ಈ ಕುರಿತು ಮಾತನಾಡಿದ ಹಿರಿಯ ವಕೀಲ ಕಪಿಲ್​ ಸಿಬಾಲ್​, ಕಳೆದ ಶುಕ್ರವಾರ ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾ. ಭಾನುಮತಿ ನೇತೃತ್ವದ ತಂಡ ಪ್ರಕರಣದ ವಿಚಾರಣೆಯನ್ನು ಸೋಮವಾರ ನಡೆಸುವುದಾಗಿ ತಿಳಿಸಿತ್ತು. ಆದರೆ ಕೋರ್ಟ್​ ಈ ಪ್ರಕರಣದ ವಿಚಾರಣೆಯನ್ನು ಇಂದಿನ ಪಟ್ಟಿಗೆ ಸೇರಿಸಿರಲಿಲ್ಲ ಎಂದರು.ಇದನ್ನು ಓದಿ: ಅಮರಾವತಿ ಬದಲು ಬೇರೆ ನಾಲ್ಕು ನಗರಗಳನ್ನು ಆಂಧ್ರಪ್ರದೇಶ ರಾಜಧಾನಿ ಮಾಡಲು ಸಿಎಂ ಜಗನ್​ ಚಿಂತನೆ

ಇಂದಿಗೆ  ಚಿದಂಬರಂ ಅವರ ಐದು ದಿನದ ಬಂಧನದ ಅವಧಿ ಇಂದು ಮುಗಿಯಲಿದ್ದು, ವಿಶೇಷ ನ್ಯಾಯಾಲಯದಲ್ಲಿಈ ಅವಧಿಯನ್ನು ಮುಂದುವರೆಸುವಂತೆ ಕೋರುವ ಸಾಧ್ಯತೆ ದೆ. ಇಡಿ ಕೂಡ ಅವರ ಬಂಧನಕ್ಕೆ ಕಾದು ಕುಳಿತಿದ್ದು, ಈ ಸಂಬಂಧ ಅರ್ಜಿಯನ್ನು ಸಲ್ಲಿಸಿದೆ. ಇಡಿ ಬಂಧನದಿಂದ ರಕ್ಷಣೆಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಇಂದು ಆಲಿಸುತ್ತಿದೆ,

First published:August 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading