HOME » NEWS » National-international » SETBACK FOR CONGRESS AS 2 GUJARAT MLAS RESIGN GNR

ಗುಜರಾತ್​​ನಲ್ಲಿ ಗರಿಗೆದರಿದ ರಾಜಕೀಯ: ರಾಜ್ಯಸಭಾ ಚುನಾವಣೆಗೆ ಮುನ್ನವೇ ಇಬ್ಬರು ಕಾಂಗ್ರೆಸ್​ ಶಾಸಕರು ರಾಜೀನಾಮೆ

ಇನ್ನು, ಗುಜರಾತ್​​ನ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿಯಿಂದ 3, ಕಾಂಗ್ರೆಸ್​ನಿಂದ ಇಬ್ಬರು ಅಭ್ಯರ್ಥಿಗಳು ಕಣಕ್ಕಿಳಿದಿದ್ಧಾರೆ. ಈ ಹೊತ್ತಲೆ ಕಾಂಗ್ರೆಸ್​ ಶಾಸಕರು ರಾಜೀನಾಮೆ ನೀಡಿದರ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಪಕ್ಷದ ನಾಯಕರು ಆರೋಪಿಸಿದ್ಧಾರೆ.

news18-kannada
Updated:June 4, 2020, 9:39 PM IST
ಗುಜರಾತ್​​ನಲ್ಲಿ ಗರಿಗೆದರಿದ ರಾಜಕೀಯ: ರಾಜ್ಯಸಭಾ ಚುನಾವಣೆಗೆ ಮುನ್ನವೇ ಇಬ್ಬರು ಕಾಂಗ್ರೆಸ್​ ಶಾಸಕರು ರಾಜೀನಾಮೆ
ಕಾಂಗ್ರೆಸ್​
  • Share this:
ನವದೆಹಲಿ(ಜೂ.04): 2020 ರಾಜ್ಯಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್​ ಆಗಿದೆ. ಇಡೀ ದೇಶಾದ್ಯಂತ ಇದೇ ತಿಂಗಳು ಜೂನ್ 19ನೇ ತಾರೀಕಿನಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. ಕೇಂದ್ರ ಚುನಾವಣೆ ಆಯೋಗ ಮೇಲ್ಮನೆ ಚುನಾವಣೆ ಘೋಷಿಸುತ್ತಿದ್ದಂತೆಯೇ ಗುಜರಾತ್​​ನಲ್ಲಿ ರಾಜಕೀಯ ಗರಿಗೆದರಿದೆ. ಇದೀಗ ಚುನಾವಣೆಗೆ ಮುನ್ನವೇ ಇಬ್ಬರು ಗುಜರಾತ್ ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮುಖೇನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಶಾಕ್​​ ನೀಡಿದ್ಧಾರೆ.

ರಾಜ್ಯಸಭಾ ಚುನಾವಣೆಗೆ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಗುಜರಾತ್​​ ಕಾಂಗ್ರೆಸ್​ ಶಾಸಕರು ಅಕ್ಷಯ್ ಪಟೇಲ್ ಮತ್ತು ಜಿತು ಚೌಧರಿ.  ಗುಜರಾತ್ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿರನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದ್ದಾರೆ. ಹೀಗಾಗಿ ಗುಜರಾತ್​ ಕಾಂಗ್ರೆಸ್​ನಲ್ಲಿ ಮತ್ತೆ ರಾಜಕೀಯ ಬೇಗುದಿ ಶುರುವಾಗಿದೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸ್ಪೀಕರ್​​​ ತ್ರಿವೇದಿ, ನಾನು ಕಾಂಗ್ರೆಸ್​ ಶಾಸಕರ ರಾಜೀನಾಮೆ ಪತ್ರ ಅಂಗೀಕರಿಸಿದ್ದೇನೆ. ಪಟೇಲ್ ವಡೋದರಾದ ಕರ್ಜನ್​​ ಕ್ಷೇತ್ರದ ಶಾಸಕ ಮತ್ತು ಚೌಧರಿ ವಲ್ಸಾದ್‌ನ ಕಪ್ರದ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಮುಂದಿನ ನಿರ್ಧಾರದವರೆಗೂ ಇಬ್ಬರು ಶಾಸಕರಾಗಿ ಮುಂದುವರಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಮಾರ್ಚ್​​ನಲ್ಲಿ ಐವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರು. ಇದೀಗ ಮತ್ತೆ ಇಬ್ಬರು ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯ ಗುಜರಾತ್​​ನ 182 ಮಂದಿ ಶಾಸಕರ ಪೈಕಿ ಆಡಳಿತರೂಢ ಬಿಜೆಪಿ 103, ಕಾಂಗ್ರೆಸ್ 66 ಶಾಸಕರನ್ನು ಹೊಂದಿದೆ.

ಇದನ್ನೂ ಓದಿ: ‘10 ವರ್ಷ 2,550 ವಿದೇಶಿ ಜಮಾತ್​​ ಸದಸ್ಯರಿಗೆ ಭಾರತ ಪ್ರವೇಶ ನಿಷೇಧ‘ - ಕೇಂದ್ರ ಗೃಹ ಇಲಾಖೆ

ಇನ್ನು, ಗುಜರಾತ್​​ನ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿಯಿಂದ 3, ಕಾಂಗ್ರೆಸ್​ನಿಂದ ಇಬ್ಬರು ಅಭ್ಯರ್ಥಿಗಳು ಕಣಕ್ಕಿಳಿದಿದ್ಧಾರೆ. ಈ ಹೊತ್ತಲೆ ಕಾಂಗ್ರೆಸ್​ ಶಾಸಕರು ರಾಜೀನಾಮೆ ನೀಡಿದರ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಪಕ್ಷದ ನಾಯಕರು ಆರೋಪಿಸಿದ್ಧಾರೆ.
Youtube Video
First published: June 4, 2020, 9:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories