ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಶೀಘ್ರದಲ್ಲಿಯೇ ಅರ್ಜಿ; ಸೆರಾಂ ಸಂಸ್ಥೆ
ಕೋವಿಶೀಲ್ಡ್ ಬಗ್ಗೆ ಮೋದಿಗೆ ಮಾಹಿತಿ ನೀಡಲಾಗಿದೆ. ಡ್ರಗ್ ಕಂಟ್ರೋಲರ್ಗೆ ಡಾಟಾ ರವಾನೆ ಮಾಡಲಾಗಿದ್ದು, ಎಲ್ಲಾ ಹಂತದ ಪ್ರಯೋಗಗಳ ವರದಿ ಬರಲಿದೆ ಎಂದರು
news18-kannada Updated:November 28, 2020, 9:16 PM IST

ಸೆರಾಂ ಸಂಸ್ಥೆಯಲ್ಲಿ ಪ್ರಧಾನಿ ಮೋದಿ
- News18 Kannada
- Last Updated: November 28, 2020, 9:16 PM IST
ಪುಣೆ (ನ.28): ಕೋವಿಡ್ ವಿರುದ್ಧ ಅಭಿವೃದ್ಧಿ ಪಡಿಸಲಾಗಿರುವ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆನ್ನು ಶೀಘ್ರದಲ್ಲಿಯೇ ನಡೆಸಲಾಗುವುದು ಎಂದು ಪುಣೆ ಮೂಲದ ಸೆರಾಂ ಸಂಸ್ಥೆ ತಿಳಿಸಿದೆ. ಸೆರಾಂ ಸಂಸ್ಥೆ ಸಂಯೋಜನೆಯಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಫಾರ್ಮಾ ಸಂಸ್ಥೆ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಎಮರ್ಜೆನ್ಸಿ ಲೈಸೆನ್ಸ್ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೆರಡು ವಾರದಲ್ಲಿ ಈ ಕುರಿತು ಅರ್ಜಿ ಸಲ್ಲಿಸಲಾಗುವುದು ಎಂದರು. ಪ್ರಸ್ತುತ ನಮ್ಮಲ್ಲಿ ಎಷ್ಟು ಖರೀದಿಸುತ್ತಿದ್ದೇವೆ ಎಂಬುದನ್ನು ಸರ್ಕಾರಕ್ಕೆ ಲಿಖಿತ ರೂಪದಲ್ಲಿ ತಿಳಿಸಿಲ್ಲ. ಆದರೆ, ಜುಲೈ 2021ರ ವೇಳೆಗೆ 300-400 ಮಿಲಿಯನ್ ಡೋಸ್ ಬೇಕಾಗಬಹುದು. ಇನ್ನು ಎರಡು ವಾರದಲ್ಲಿ ಅರ್ಜಿ ಸಲ್ಲಿಸುವ ಕುರಿತು ಪ್ರಕ್ರಿಯೆ ನಡೆಯಲಿದೆ ಎಂದರು
ಕೊರೋನಾ ವೈರಸ್ ಲಸಿಕೆ ಮತ್ತು ಉತ್ಪಾದನಾ ಪ್ರಕ್ರಿಯೆ ಕುರಿತ ವೈಯಕ್ತಿಕ ಪರಿಶೀಲನೆಯನ್ನು ಇಂದು ಪ್ರಧಾನಿ ನಡೆಸಿದರು. ದೇಶದ ವಿವಿಧ ಉನ್ನತ ಲಸಿಕೆ ಕೇಂದ್ರಗಳಿಗೆ ಭೇಟಿ ನೀಡಿದರು. ಈ ಭೇಟಿ ಲಸಿಕೆ ಸಿದ್ಧತೆ ಸವಾಲುಗಳು ಮತ್ತು ಮಾರ್ಗಸೂಚಿಯ ದೃಷ್ಟಿಕೋನದಿಂದ ಸಹಾಯವಾಗಲಿದೆ ಎಂದು ಅವರು ತಿಳಿಸಿದರು. ಮೊದಲು ಗುಜರಾತ್ನ ಕ್ಯಾಡಿಲಾ ಝೈಡುಸ್ ಫಾರ್ಮ್ಗೆ ಭೇಟಿ ನೀಡಿದರು. ಬಳಿಕ ಹೈದ್ರಾಬಾದ್ನ ಭಾರತ್ ಬಯೋಟೆಕ್ಗೆ ಭೇಟಿ ನೀಡಿದ ಅವರು ಕೋವಾಕ್ಸಿನ್ ಕುರಿತು ಮಾಹಿತಿ ಪಡೆದರು. ಕೊನೆಯದಾಗಿ ಪುಣೆಗಯ ಸೆರಾಂ ಸಂಸ್ಥೆಗೆ ಭೇಟಿ ನೀಡಿದರು. ಇದನ್ನು ಓದಿ: ವಿಶ್ವದಲ್ಲಿಯೇ ಅತಿದೊಡ್ಡ ಹಿಂದೂ ದೇವಾಲಯಗಳಿವು
ಈ ವೇಳೆ ಮಾತನಾಡಿದ ಸೆರಾಂ ಸಂಸ್ಥೆ ಸಿಇಓ ಪೂನಾವಾಲಾ, ಭಾರತದಲ್ಲಿ ನಮ್ಮ ಲಸಿಕೆ ಮೊದಲು ಹಂಚಿಕೆಯಾಗಲಿದೆ. ಲಸಿಕೆ ಬಗ್ಗೆ ಸಮಗ್ರ ಮಾಹಿತಿ ಪಡೆದಿದ್ದಾರೆ. ಕೋವಿಶೀಲ್ಡ್ ಬಗ್ಗೆ ಮೋದಿಗೆ ಮಾಹಿತಿ ನೀಡಲಾಗಿದೆ. ಡ್ರಗ್ ಕಂಟ್ರೋಲರ್ಗೆ ಡಾಟಾ ರವಾನೆ ಮಾಡಲಾಗಿದ್ದು, ಎಲ್ಲಾ ಹಂತದ ಪ್ರಯೋಗಗಳ ವರದಿ ಬರಲಿದೆ ಎಂದರು. ಭಾರತದ ಕೋವ್ಯಾಕ್ಸಿನ್ 3ನೇ ಹಂತದಲ್ಲಿದೆ. ಇದರ ಜೊತೆಗೆ ಆದಷ್ಟು ಬೇಗದಲ್ಲಿಯೇ ಆಕ್ಸ್ಫರ್ಡ್ ಲಸಿಕೆ ತಯಾರಿ ಪೂರ್ಣಗೊಳ್ಳಲಿದೆ. ಏಪ್ರಿಲ್ ವೇಳೇ 100 ಮಿಲಿಯನ್ ಆಕ್ಸ್ಫರ್ಡ್ ಲಸಿಕೆ ತಯಾರಾಗಲಿದೆ. ಪ್ರಸ್ತುತ ಸದ್ಯ 40 ಮಿಲಿಯನ್ ಆಕ್ಸ್ಫರ್ಡ್ ಲಸಿಕೆ ಸಿದ್ಧವಿದೆ. ಫೆಬ್ರವರಿ ವೇಳೆಗೆ ಪೂರ್ಣ ಪ್ರಮಾಣದ ಲಸಿಕೆ ಸಿಗಲಿದ್ದು, ಭಾರತಕ್ಕೆ ನಮ್ಮ ಲಸಿಕೆ ಮೊದಲು ಪೂರೈಕೆ ಮಾಡಲಾಗುವುದು. ಇದರ ಜೊತೆಗೆ ಝೈಡುಸ್ ಲಸಿಕೆ 2ನೇ ಹಂತ ಪೂರ್ಣವಾಗಿದೆ. ಕೋವಿಶೀಲ್ಡ್ ಲಸಿಕೆ 3ನೇ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಲಸಿಕೆಯ ಪರಿಣಾಮಕಾರಿತ್ವ ಮತ್ತು ಸುರಕ್ಷತೆ ಬಗ್ಗೆ ಭರವಸೆಯನ್ನು ಅವರು ನೀಡಿದರು. ಪ್ರಯೋಗದ ಸಮಯದಲ್ಲೂ ಲಸಿಕೆಯ ಪರಿಣಾಮಕಾರಿತ್ವಕ್ಕೆ ಹೆಚ್ಚು ಒತ್ತು ನೀಡಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗುಂಪುಗಳ ಮೇಲೆ ಈ ಲಸಿಕೆ ಪ್ರಯೋಗದ ಕುರಿತು ತಯಾರಿ ನಡೆಸಲಾಗಿದೆ. ಸೆರಾಂ ಸಂಸ್ಥೆಯಿಂದ ಪ್ರಯೋಗ ನಡೆಸುತ್ತಿರುವ ಕೋವಿಶೀಲ್ಡ್ ಲಸಿಕೆಯ ಪ್ರಗತಿ ಕುರಿತು ಪ್ರಧಾನಿ ಚರ್ಚಿಸಿದ್ದಾರೆ ಎಂದರು.
ಕೊರೋನಾ ವೈರಸ್ ಲಸಿಕೆ ಮತ್ತು ಉತ್ಪಾದನಾ ಪ್ರಕ್ರಿಯೆ ಕುರಿತ ವೈಯಕ್ತಿಕ ಪರಿಶೀಲನೆಯನ್ನು ಇಂದು ಪ್ರಧಾನಿ ನಡೆಸಿದರು. ದೇಶದ ವಿವಿಧ ಉನ್ನತ ಲಸಿಕೆ ಕೇಂದ್ರಗಳಿಗೆ ಭೇಟಿ ನೀಡಿದರು. ಈ ಭೇಟಿ ಲಸಿಕೆ ಸಿದ್ಧತೆ ಸವಾಲುಗಳು ಮತ್ತು ಮಾರ್ಗಸೂಚಿಯ ದೃಷ್ಟಿಕೋನದಿಂದ ಸಹಾಯವಾಗಲಿದೆ ಎಂದು ಅವರು ತಿಳಿಸಿದರು. ಮೊದಲು ಗುಜರಾತ್ನ ಕ್ಯಾಡಿಲಾ ಝೈಡುಸ್ ಫಾರ್ಮ್ಗೆ ಭೇಟಿ ನೀಡಿದರು. ಬಳಿಕ ಹೈದ್ರಾಬಾದ್ನ ಭಾರತ್ ಬಯೋಟೆಕ್ಗೆ ಭೇಟಿ ನೀಡಿದ ಅವರು ಕೋವಾಕ್ಸಿನ್ ಕುರಿತು ಮಾಹಿತಿ ಪಡೆದರು. ಕೊನೆಯದಾಗಿ ಪುಣೆಗಯ ಸೆರಾಂ ಸಂಸ್ಥೆಗೆ ಭೇಟಿ ನೀಡಿದರು.