HOME » NEWS » National-international » SERIES OF THREE STRONG QUAKES ROCK NEW ZEALAND TRIGGERING SMALL TSUNAMI SNVS

Tsunami - ನ್ಯೂಜಿಲೆಂಡ್ ಬಳಿ ಮೂರು ಬಾರಿ ಪ್ರಬಲ ಭೂಕಂಪ; ಕಡಲತೀರಕ್ಕೆ ಅಪ್ಪಳಿಸಿದ ಸುನಾಮಿ

Earth Quakes - ನ್ಯೂಜಿಲೆಂಡ್​ನ ಪೂರ್ವಭಾಗದ ನಾರ್ತ್ ಐಲೆಂಡ್ ದ್ವೀಪದ ಬಳಿ 7.2, 7.4 ಮತ್ತು 8.1 ತೀವ್ರತೆಯ ಸರಣಿ ಭೂಕಂಪಗಳು ಸಂಭವಿಸಿದ್ದು, ಅದರ ಪರಿಣಾಮವಾಗಿ 10 ಅಡಿ ಎತ್ತರದ ಸುನಾಮಿ ಅಲೆಗಳು ಕಡಲತೀರವನ್ನ ಅಪ್ಪಳಿಸಿವೆ.

news18
Updated:March 5, 2021, 7:59 AM IST
Tsunami - ನ್ಯೂಜಿಲೆಂಡ್ ಬಳಿ ಮೂರು ಬಾರಿ ಪ್ರಬಲ ಭೂಕಂಪ; ಕಡಲತೀರಕ್ಕೆ ಅಪ್ಪಳಿಸಿದ ಸುನಾಮಿ
ನ್ಯೂಜಿಲೆಂಡ್ ಜನರು
  • News18
  • Last Updated: March 5, 2021, 7:59 AM IST
  • Share this:
ನವದೆಹಲಿ(ಮಾ. 05): ನ್ಯೂಜಿಲೆಂಡ್ ದೇಶದ ಪೂರ್ವಭಾಗದಲ್ಲಿರುವ ನಾರ್ತ್ ಐಲೆಂಡ್ ದ್ವೀಪದ ಬಳಿ ಒಂದಾದ ಮೇಲೊಂದು ಮೂರು ಪ್ರಬಲ ಭೂಕಂಪಗಳು ಸಂಭವಿಸಿವೆ. ಒಂದು ಭೂಕಂಪವಂತೂ ರಿಕ್ಟರ್ ಮಾಪಕದಲ್ಲಿ 8.1 ತೀವ್ರತೆ ಹೊಂದಿತ್ತು. ಅದರ ಪರಿಣಾಮವಾಗಿ ಪೂರ್ವ ಕಡಲ ತೀರದಾದ್ಯಂತ ಸಣ್ಣ ಸುನಾಮಿ ಅಲೆ ಅಪ್ಪಳಿಸಿತು ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಮೊದಲ ಭೂಕಂಪವಾದಾಗಲೇ ಕಡಲ ತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿತ್ತು. ಹೀಗಾಗಿ ಸುನಾಮಿಯಿಂದ ಯಾವುದೇ ಜೀವಹಾನಿಯಾದ ವರದಿಯಾಗಿಲ್ಲ. ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, 8.1 ತೀವ್ರತೆಯ ಭೂಕಂಪದಿಂದ ಉದ್ಭವಿಸಿದ ಸುನಾಮಿ ಸುಮಾರು 10 ಅಡಿ ಎತ್ತರ ಇತ್ತೆನ್ನಲಾಗಿದೆ.

ಎಂಟು ಗಂಟೆ ಅಂತರದಲ್ಲಿ ಒಂದೇ ಪ್ರದೇಶದ ಬಳಿ ಮೂರು ಬಾರಿ ಭೂಕಂಪನವಾಗಿದೆ. ಮೊದಲಿಗೆ 7.2, ನಂತರ 7.4 ಹಾಗೂ ಬಳಿಕ 8.1 ತೀವ್ರತೆಯಲ್ಲಿ ಸರಣಿ ಭೂಕಂಪಕ್ಕೆ ಕಿವೀಸ್ ನಾಡು ಬೆಚ್ಚಿಬಿದ್ದಿತು. ಈ ಭೂಕಂಪದಿಂದ ಸಾವು ನೋವು ಸಂಭವಿಸಿದ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ಇದನ್ನೂ ಓದಿ: Tejasvi Surya: ಪಶ್ಚಿಮ ಬಂಗಾಳದ 200ಕ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು; ಸಂಸದ ತೇಜಸ್ವಿ ಸೂರ್ಯ

ಇದಕ್ಕಿಂತಲೂ ಕಡಿಮೆ ತೀವ್ರತೆಯ ಭೂಕಂಪ ಈ ಹಿಂದೆ ನ್ಯೂಜಿಲೆಂಡ್​ನಲ್ಲಿ ಸಂಭವಿಸಿದ್ದಾಗ ನೂರಾರು ಮಂದಿ ಸಾವನ್ನಪ್ಪಿದ್ದರು. ಇಂಡೋನೇಷ್ಯಾದಲ್ಲಿ ಸಂಭವಿಸಿದ 8.2 ತೀವ್ರತೆಯ ಭೂಕಂಪದಿಂದ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ದೊಡ್ಡ ಸುನಾಮಿಯನ್ನೇ ಸೃಷ್ಟಿಸಿ ಲಕ್ಷಾಂತರ ಜನರನ್ನ ಬಲಿಪಡೆದಿತ್ತು.
Published by: Vijayasarthy SN
First published: March 5, 2021, 7:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories