ಬಾಂಗ್ಲಾದೇಶದ ಯುವತಿ ಮೇಲೆ ನಮ್ಮ ಕರ್ನಾಟಕದಲ್ಲೇ ಅಮಾನವೀಯವಾಗಿ ಹಿಂಸಿಸಿ, ಗ್ಯಾಂಗ್ ರೇಪ್ ಮಾಡಿ ಇಡೀ ಕೃತ್ಯವನ್ನು ಚಿತ್ರೀಕರಿಸಿದ ಭಯಾನಕ ಘಟನೆ ಕಣ್ಣ ಮುಂದಿರುವಾಗಲೇ ಮತ್ತೊಂದು ರೇಪ್ ಕೇಸ್ ಸುದ್ದಿಯಾಗಿದೆ. ಅತ್ಯಾಚಾರದಂತ ಪೈಶಾಚಿಕ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೋರ್ಟ್ ಐಸಿಹಾತಿಕ ತೀರ್ಪನ್ನು ನೀಡಿದೆ. ಮನೆಗಳಿಗೆ ನುಗ್ಗಿ ಅಮಾಯಕ ಮಹಿಳೆಯರ ಮೇಲೆ ಅತ್ಯಾಚಾರವೆಸಗುತ್ತಿದ್ದ ಕಾಮುಕ ಕ್ರಿಮಿಗೆ ಬರೋಬ್ಬರಿ ಒಂದು ಸಾವಿರ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ದೊಡ್ಡ ಪ್ರಮಾಣದ ಶಿಕ್ಷೆ ನೀಡುವ ಮೂಲಕ ಅತ್ಯಾಚಾರದ ವಿರುದ್ಧ ಕಠಿಣ ನಿಲುವನ್ನು ಕೋರ್ಟ್ ತಳೆದಿದೆ.
ದಕ್ಷಿಣ ಆಫ್ರಿಕಾದ ಕೋರ್ಟ್ ಇಂಥಹದೊಂದು ಕಠಿಣ ಶಿಕ್ಷೆಯ ಮೂಲಕ ವಿಶ್ವದ ಗಮನ ಸೆಳೆದಿದೆ. ಸರಣಿ ಅತ್ಯಾಚಾರಿ 33 ವರ್ಷದ ಸೆಲ್ಲೋ ಅಬ್ರಾಂ ಮಪುನ್ಯಾಗೆ ಬರೋಬ್ಬರಿ 1,088 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಸೆಲ್ಲೋ ಹಲವು ವರ್ಷಗಳಿಂದ ಮನೆಗಳಿಗೆ ನುಗ್ಗಿ ಮಹಿಳೆಯರ ಮೇಲೆ ಅತ್ಯಾಚಾರವೆಸಗುತ್ತಿದ್ದ. ಸರಣಿ ರೇಪಿಸ್ಟ್ನಿಂದ ಮಹಿಳೆಯರು ಒಂಟಿಯಾಗಿ ಮನೆಗಳಲ್ಲಿ ಇರಲು ಹೆದರುತ್ತಿದ್ದರು. ಬರೋಬ್ಬರಿ 35 ಯುವತಿಯರು, ಮಹಿಳೆಯರ ಮೇಲೆ ಸೆಲ್ಲೋ ಅತ್ಯಾಚಾರವೆಸಗಿರುವುದು ಸಾಬೀತಾಗಿದೆ. ಮನೆಗೆ ನುಗ್ಗಿ ರೇಪ್ ಮಾಡುತ್ತಿದ್ದ ಕಾಮುಕ ನಂತರ ಮನೆಗಳಲ್ಲಿದ್ದ ಹಣ-ಆಭರಣ, ವಸ್ತುಗಳನ್ನು ಕದ್ದೊಯ್ಯುತ್ತಿದ್ದ. ಹೀಗಾಗಿ 36 ರಾಬರಿ ಪ್ರಕರಣಗಳಲ್ಲೂ ಸೆಲ್ಲೋ ಅಪರಾಧಿ ಎಂಬುವುದು ಸಾಬೀತಾಗಿದೆ.
ಒಟ್ಟಾರೆ 71 ಪ್ರಕರಣಗಳಲ್ಲಿ ಅಪರಾಧ ಸಾಬೀತಾದ ಹಿನ್ನೆಲೆ ಒಟ್ಟಾರೆ 1,088 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸೆಲ್ಲೋ ಸಾಯುವವರೆಗೂ ಜೈಲು ಕಂಬಿಗಳ ಹಿಂದೆಯೇ ಬಂಧಿಯಾಗಿ ಬದುಕಬೇಕು. ಜೈಲಿನಲ್ಲೇ ಸಾಯಬೇಕು. ಸೆಲ್ಲೋಗೆ ಭಾರೀ ಪ್ರಮಾಣದ ಶಿಕ್ಷೆ ಪ್ರಕಟವಾಗುತ್ತಿದಂತೆ ನೊಂದ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ನಮ್ಮಲ್ಲಿಯೂ ದೆಹಲಿಯ ನಿರ್ಭಯಾ ಮೇಲೆ ಅತ್ಯಾಚಾರವೆಸಗಿದ ಕಾಮುಕರನ್ನು ನೇಣಿಗೆ ಏರಿಸಲಾಗಿತ್ತು. ಹೈದ್ರಾಬಾದ್ನಲ್ಲಿ ಪಶು ವೈದ್ಯೆ ಮೇಲೆ ಪೈಶಾಚಿಕ ಕೃತ್ಯವೆಸಗಿದ್ದ ನಾಲ್ವರಿಗೆ ಗುಂಡಿಕ್ಕಲಾಯಿತು. ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಆರೋಪಿಗಳು ಯತ್ನಿಸಿದಾಗ ಪೊಲೀಸರು ಫೈರ್ ಮಾಡಿದ್ದರು.
ಇದನ್ನೂ ಓದಿ: ವಿಡಿಯೋ ಕಾನ್ಫರೆನ್ಸ್ ವೇಳೆ ಕಾಫಿ ಕಪ್ನಲ್ಲಿ ಮೂತ್ರ ವಿಸರ್ಜಿಸಿದ ಸಂಸದ.. ಮೀಟಿಂಗ್ನಲ್ಲಿದ್ದವರಿಗೆ ಶಾಕ್!
ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 1,73,790 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,77,29,247ಕ್ಕೆ ಏರಿಕೆ ಆಗಿದೆ. ಶುಕ್ರವಾರ ಒಂದೇ ದಿನ ಕೊರೋನಾ 3,617 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,22,512ಕ್ಕೆ ಏರಿಕೆ ಆಗಿದೆ. ಈವರೆಗೆ 2,51,78,011 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 22,28,724 ಆಕ್ಟಿವ್ ಕೇಸುಗಳಿವೆ. ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡವರ ಸಂಖ್ಯೆ 20 ಕೋಟಿ ದಾಟಿದೆ. ಈವರೆಗೆ 20,89,02,445 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ದೇಶದಲ್ಲಿ ಸದ್ಯ ಗುಣಮುಖ ಆದದವರ ಪ್ರಮಾಣ ಶೇಕಡಾ 90.80ಕ್ಕೆ ಏರಿಕೆ ಆಗಿದೆ. ವಾರದ ಪಾಸಿಟಿವಿಟಿ ದರ ಶೇಕಡಾ 9.84ಕ್ಕೆ ಇಳಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ