ಲೈಂಗಿಕ ಸಂಭೋಗಕ್ಕೆ ಅಸಮರ್ಥನಾದರೂ 90 ರೇಪ್-ಮರ್ಡರ್ ಮಾಡಿದ ಅಮೆರಿಕದ 78 ವರ್ಷದ ಕಿರಾತಕ

ನಾಲ್ಕೈದು ದಶಕಗಳ ಹಿಂದೆ ನಡೆದ ತನ್ನ ಅಪರಾಧ ಕೃತ್ಯದ ಸೂಕ್ಷ್ಮ ಮಾಹಿತಿ ಹಾಗೂ ತಾನು ರೇಪ್ ಮಾಡಿದ ಮಹಿಳೆಯ ಇಂಚಿಂಚೂ ಮಾಹಿತಿಯನ್ನು ಈತ ವಿವರಿಸುವುದನ್ನು ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

Vijayasarthy SN | news18
Updated:November 27, 2018, 11:36 PM IST
ಲೈಂಗಿಕ ಸಂಭೋಗಕ್ಕೆ ಅಸಮರ್ಥನಾದರೂ 90 ರೇಪ್-ಮರ್ಡರ್ ಮಾಡಿದ ಅಮೆರಿಕದ 78 ವರ್ಷದ ಕಿರಾತಕ
ಸ್ಯಾಮುಯೆಲ್ ಲಿಟಲ್
Vijayasarthy SN | news18
Updated: November 27, 2018, 11:36 PM IST
ಬೆಂಗಳೂರು(ನ. 27): ಈತನೊಬ್ಬ ವಿಕೃತ ಕಾಮಿ. ಹೆಸರು ಸ್ಯಾಮುಯೆಲ್ ಲಿಟಲ್. ವಯಸ್ಸು 78 ವರ್ಷ. ಈತ 1970ರಿಂದ ಅಮೆರಿಕದ 14 ರಾಜ್ಯಗಳಲ್ಲಿ ಬರೋಬ್ಬರಿ 90 ಮಹಿಳೆಯರನ್ನು ರೇಪ್ ಮಾಡಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಯಾವ ಕೇಸ್​ನಲ್ಲೂ ಸಿಕ್ಕಿಬಿದ್ದಿಲ್ಲ. ಈಗ ಅರಳುಮರಳು ವಯಸ್ಸಿನಲ್ಲಿ ತಾನಾಗೇ ಬಂದು ಪೊಲೀಸರಿಗೆ ಶರಣಾಗಿ ತನ್ನೆಲ್ಲಾ ಕರ್ಮಕಾಂಡಗಳನ್ನ ಬಾಯಾರೆ ಬಿಚ್ಚಿಟ್ಟಿದ್ದಾನೆ. ಈತ ಕೊಡುತ್ತಿರುವ ವಿವರಣೆ ಕೇಳಿ ಸ್ವತಃ ಪೊಲೀಸರೇ ಬೆಚ್ಚಿಬೀಳುತ್ತಿದ್ದಾರೆ.

40 ವರ್ಷದ ಹಿಂದೆ ತಾನು ಎಸಗಿದ ಪಾತಕದ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನ ಈತ ನೀಡುತ್ತಾನೆ. ತಾನು ರೇಪ್ ಮಾಡಿದ ಮಹಿಳೆಯ ಮುಖಚರ್ಯೆಯನ್ನು ಬಹಳ ಸ್ಪಷ್ಟವಾಗಿ ವಿವರಿಸುತ್ತಾನೆ. ಆಕೆಯ ದೇಹಕ್ಕೆ ತಾನು ಏನೇನೆಲ್ಲಾ ಮಾಡಿದೆ ಎಂದು ನಿನ್ನೆ ಮೊನ್ನೆ ನಡೆದ ಘಟನೆಯಂತೆ ತಿಳಿಸುತ್ತಾನೆ. ಎಲ್ಲಾ 90 ಪ್ರಕರಣಗಳಲ್ಲೂ ಸ್ಯಾಮುಯೆಲ್ ಲಿಟಲ್ ಇಷ್ಟೇ ಸ್ಪಷ್ಟ ವಿವರಗಳನ್ನ ಕೊಡುತ್ತಾನೆ. ಈತ ಕೊಡುವ ಮಾಹಿತಿ ಆಧರಿಸಿ ಪೊಲೀಸರು ಹಳೆಯ ಕೇಸ್​ಫೈಲ್​ಗಳನ್ನ ತೆಗೆದು ತಾಳೆ ಮಾಡಿ ನೋಡಿದಾಗ ನಿಜ ಎಂಬುದು ಗೊತ್ತಾಗಿದೆ. ಅಷ್ಟು ಡೀಟೈಲ್ ಆಗಿ ಈತ ಅಪರಾಧ ಪ್ರಸಂಗಗಳನ್ನು ವಿವರಿಸುವುದನ್ನು ಕಂಡು ಪೊಲೀಸರಿಗೆ ಆವಾಕ್ಕಾಗದೇ ಬೇರೆ ವಿಧಿ ಇಲ್ಲ.

ಸ್ಯಾಮುಯೆಲ್ ಲಿಟಲ್ ತನ್ನ ಅಪರಾಧ ಕೃತ್ಯಗಳನ್ನ ಬಹಳ ಗರ್ವದಿಂದ ಹೇಳಿಕೊಳ್ಳುತ್ತಾನೆ. ತನ್ನನ್ನು ರೇಪಿಸ್ಟ್ ಎಂದು ಹೇಳಿದರೆ ಈತನಿಗೆ ಅಸಾಧ್ಯ ಕೋಪ ಬರುತ್ತದೆ. ತನಗೆ ಲೈಂಗಿಕ ಅಶಕ್ತತೆ ಇದೆ. ತಾನು ರೇಪ್ ಮಾಡಲು ಸಾಧ್ಯವೇ ಇಲ್ಲ. ತಾನು ಅತ್ಯಾಚಾರಿ ಹೇಗಾಗುತ್ತೇನೆ ಎಂದು ಪೊಲೀಸರನ್ನೇ ಈತ ಪ್ರಶ್ನಿಸುತ್ತಾನೆ.

ಲಿಟ್ಲ್ ಮಹಾಶಯನಿಗೆ ನಿಮಿರುವಿಕೆ ದೌರ್ಬಲ್ಯ ಇರುವುದು ನಿಜ. ಆದರೆ, ಈತ ರೇಪ್ ಮಾಡಿದ್ದಾದರೂ ಹೇಗೆ ಎಂಬ ಪ್ರಶ್ನೆ ಸಹಜ. ಈತ ಮಹಿಳೆಯರನ್ನು ಅತ್ಯಾಚಾರ ಎಸಗುತ್ತಿದ್ದ ಕ್ರಮವೇ ಬೇರೆ. ಮೂಲತಃ ಬಾಕ್ಸರ್ ಆಗಿದ್ದ ಈತನದ್ದು ಸದೃಢ ಮೈಕಟ್ಟು. ಮಹಿಳೆಯ ಮುಖಕ್ಕೆ ಪಂಚ್ ಕೊಟ್ಟು ನಿತ್ರಾಣಗೊಳಿಸುತ್ತಿದ್ದ. ನಂತರ ಅವರನ್ನು ಬೆತ್ತಲೆಗೊಳಿಸಿ ಕುತ್ತಿಗೆ ಹಿಸುಕಿ ವಿಲವಿಲ ಒದ್ದಾಡಿಸುತ್ತಾ ಅದರಲ್ಲೇ ಲೈಂಗಿಕ ವಿಕೃತ ಆನಂದ ಪಡೆಯುತ್ತಿದ್ದ. ನಂತರ ಅದೇ ಉದ್ರೇಕದಲ್ಲಿ ಹಸ್ತಮೈಥುನ ಮಾಡಿಕೊಂಡು ಮಹಿಳೆಯ ಮೇಲೆ ವೀರ್ಯ ಚೆಲ್ಲುತ್ತಿದ್ದನಂತೆ.

ಅಂದಹಾಗೆ, 78ರ ಹರೆಯದಲ್ಲಿ ಸ್ಯಾಮುಯೆಲ್ ಲಿಟ್ಲ್ ತಾನಾಗೇ ಬಂದು ಪೊಲೀಸರಿಗೆ ತನ್ನ ಅಪರಾಧಗಳ ಬಗ್ಗೆ ಹೇಳಿಕೊಳ್ಳುವ ಗ್ರಹಚಾರ ಯಾಕೆ ಬಂತು? ಪೊಲೀಸರ ಪ್ರಕಾರ, ಈ ಮುದುಕನಿಗೆ ಈಗ ಖ್ಯಾತಿಯ ಹುಚ್ಚು ಹಿಡಿದಿದೆ. ಅಂದರೆ, ಎಲ್ಲರ ಗಮನ ಸೆಳೆಯುವ ಆಸೆ ಈತನಲ್ಲಿದೆ. ತನ್ನ ರೇಪ್ ಕೃತ್ಯಗಳನ್ನ ಈತ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದೂ ಇದಕ್ಕೆಯೇ ಎಂದು ಅಮೆರಿಕದ ಪೊಲೀಸರು ಹೇಳುತ್ತಾರೆ.

ಸಾಯುವ ವಯಸ್ಸಲ್ಲಿರುವ ಸ್ಯಾಮುಯೆಲ್ ಲಿಟ್ಲ್ ತನ್ನ ಮಿಕ್ಕ ಜೀವನವನ್ನು ಜೈಲಿನಲ್ಲೇ ಕೊಳೆಯುವುದು ನಿಶ್ಚಿತ. ಜೈಲಿನೊಳಗೆ ಇತರ ಕೈದಿಗಳೊಂದಿಗೆ ತನ್ನ ಪಾಪಕೃತ್ಯಗಳನ್ನ ಹಾಗೂ ವಿಕೃತಿಗಳನ್ನ ಬಣ್ಣಿಸಿ ಅವರ ಮನಸ್ಸನ್ನೂ ಹಾಳು ಮಾಡಿಬಿಡುತ್ತಾರೋ ಗೊತ್ತಿಲ್ಲ.
First published:November 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...