23 ಗ್ರ್ಯಾಂಡ್ ಸ್ಲಾಮ್ ಗೆದ್ದ ಟೆನಿಸ್ ದಂತಕಥೆ Serena Williams ನಿವೃತ್ತಿ ಘೋಷಣೆ!

ವರ್ಷದ ಅಂತಿಮ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯಾದ ಯುಎಸ್ ಓಪನ್ ನಂತರ ಟೆನಿಸ್ ತ್ಯಜಿಸಲು ಯೋಚಿಸುತ್ತಿರುವುದಾಗಿ ವಿಲಿಯಮ್ಸ್ ಹೇಳಿದ್ದಾರೆ. ಸೆರೆನಾ 1999 ರಲ್ಲಿ ಮೊದಲ ಬಾರಿಗೆ ಯುಎಸ್ ಓಪನ್ ಪಂದ್ಯಾವಳಿಯನ್ನು ಗೆದ್ದಿದ್ದರು.

 ಸೆರೆನಾ ವಿಲಿಯಮ್ಸ್

ಸೆರೆನಾ ವಿಲಿಯಮ್ಸ್

  • Share this:
ವಾಷಿಂಗ್ಟನ್(ಆ. 09): 23 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಸೆರೆನಾ ವಿಲಿಯಮ್ಸ್ (US tennis great Serena Williams) ಶೀಘ್ರದಲ್ಲೇ ಟೆನಿಸ್‌ನಿಂದ ನಿವೃತ್ತಿ (Serena Williams Retirement) ಹೊಂದಲಿದ್ದಾರೆ. ಈ ಅನುಭವಿ ಆಟಗಾರ್ತಿ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ನೀಡಿದ್ದಾರೆ. ವರ್ಷದ ಅಂತಿಮ ಗ್ರ್ಯಾಂಡ್ ಸ್ಲಾಮ್(Grand Slam) ಪಂದ್ಯಾವಳಿಯಾದ ಯುಎಸ್ ಓಪನ್ ನಂತರ ಟೆನಿಸ್ ತ್ಯಜಿಸಲು ಯೋಚಿಸುತ್ತಿರುವುದಾಗಿ ವಿಲಿಯಮ್ಸ್ ಹೇಳಿದ್ದಾರೆ. ಸೆರೆನಾ 1999 ರಲ್ಲಿ ಮೊದಲ ಬಾರಿಗೆ ಯುಎಸ್ ಓಪನ್ ಪಂದ್ಯಾವಳಿಯನ್ನು ಗೆದ್ದರು.

ವಿಲಿಯಮ್ಸ್ ಬಹಳ ದಿನಗಳಿಂದ ತನ್ನ ಹಳೆಯ ಶೈಲಿಯಲ್ಲಿ ಟೆನಿಸ್ ಆಡುತ್ತಿಲ್ಲ. ಆಕೆ ನಿರಂತರವಾಗಿ ಟೆನಿಸ್ ಪಂದ್ಯಾವಳಿಗಳನ್ನೂ ಆಡುತ್ತಿರಲಿಲ್ಲ. "ನಿವೃತ್ತಿ ಎಂಬ ಪದ ನನಗೆ ಇಷ್ಟವಿಲ್ಲ. ನಾನು ಅದನ್ನು ಜೀವನದ ವಿಕಾಸ ಎಂದು ಕರೆಯುತ್ತೇನೆ. ನಾನು ಮುಂದಿನ ಹೆಜ್ಜೆಯ ಬಗ್ಗೆ ಯೋಚಿಸುತ್ತಿದ್ದೇನೆ. ಜೀವನದಲ್ಲಿ ನಾವು ಬೇರೆ ದಿಕ್ಕಿನಲ್ಲಿ ಚಲಿಸಲು ನಿರ್ಧರಿಸುವ ಸಮಯ ಬರುತ್ತದೆ" " ಎಂದು 40 ವರ್ಷದ ಟೆನಿಸ್ ದಂತಕಥೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ನಲ್ಲಿ ಹೇಳಿದರು.

ಇದನ್ನೂ ಓದಿ: Serena Williams: ಕೋಚ್ ಜೊತೆ ಟೆನ್ನಿಸ್​​ ಆಡಿದ ಸೆರೆನಾ ವಿಲಿಯಮ್ಸ್ ಮಗಳು!: ವಿಡಿಯೋ ವೈರಲ್

'ಕೌಂಟ್‌ಡೌನ್ ಈಗ ಪ್ರಾರಂಭವಾಗುತ್ತದೆ'

ವಿಲಿಯಮ್ಸ್ ತಮ್ಮ ಪೋಸ್ಟ್​ನಲ್ಲಿ, "ನೀವು ಯಾವುದನ್ನಾದರೂ ತುಂಬಾ ಪ್ರೀತಿಸಿದ ವಿಚಾರದಿಂದ ದೂರವಿರುವ ಸಮಯ ಬಂದರೆ ಅದು ಬಹಳ ಕಠಿಣವಾಗಿರುತ್ತದೆ. ಈಗ ಇದಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ನಾನು ತಾಯಿಯಾಗಿ, ನನ್ನ ಆಧ್ಯಾತ್ಮಿಕ ಗುರಿ ಮತ್ತು ಅಂತಿಮವಾಗಿ ವಿಭಿನ್ನ ರೋಮಾಂಚನಕಾರಿ ಸೆರೆನಾ ರೂಪುಗೊಳಿಸುವ ಬಹಗ್ಗೆ ನಿಗಾ ವಹಿಸಬೇಕು. ಮುಂದಿನ ಕೆಲವು ವಾರಗಳಲ್ಲಿ ನಾನು ಅದನ್ನು ಆನಂದಿಸಲಿದ್ದೇನೆ" ಎಂದಿದ್ದಾರೆ.

ಇದನ್ನೂ ಓದಿ: ವೀನಸ್ ಹಾಗೂ ಸೆರೆನಾ ವಿಲಿಯಮ್ಸ್ ಅವರ ಅಪರೂಪದ ಚಿತ್ರಗಳು

ಸೆರೆನಾ ಕೆನಡಾ ಓಪನ್‌ನಲ್ಲಿ ಆಡುತ್ತಿದ್ದಾರೆ

ಸೆರೆನಾ ಈ ವರ್ಷದ ವಿಂಬಲ್ಡನ್ ಓಪನ್‌ಗೆ ಪ್ರವೇಶಿಸಿದರು, ಆದರೆ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಫ್ರಾನ್ಸ್‌ನ ಹಾರ್ಮನಿ ಟಾನ್ ಅವರನ್ನು ಸೋಲಿಸಿದರು. ಸೆರೆನಾ ಸದ್ಯ ಕೆನಡಾ ಓಪನ್‌ನಲ್ಲಿ ಆಡುತ್ತಿದ್ದಾರೆ. ಎರಡನೇ ಸುತ್ತು ತಲುಪಿದ್ದಾಳೆ. ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ 6-3, 6-4 ಸೆಟ್‌ಗಳಿಂದ ಸ್ಪೇನ್‌ನ ನೂರಿಯಾ ಡಯಾಜ್ ಅವರನ್ನು ಸೋಲಿಸಿದರು.

ಸೆರೆನಾಗೆ ಗ್ರ್ಯಾಂಡ್ ಸ್ಲಾಮ್ ಗೆಲುವುಗ್ರ್ಯಾಂಡ್ ಸ್ಲಾಮ್ಗೆದ್ದಿದ್ದು ಯಾವಾಗ?
ಆಸ್ಟ್ರೇಲಿಯನ್ ಓಪನ್2003, 2005, 2007, 2009, 2010, 2015, 2017
ಫ್ರೆಂಚ್ ಓಪನ್2002, 2013, 2015
ವಿಂಬಲ್ಡನ್ 2002, 2003, 2009, 2010, 2012, 2015, 2016
US ಓಪನ್1999, 2002, 2008, 2012, 2013, 2014
Published by:Precilla Olivia Dias
First published: