ಬಿಜೆಪಿ ಜತೆ ಸ್ನೇಹ ಬಿಟ್ಟಿದ್ದೇವೆ, ಹಿಂದುತ್ವ ಬಿಟ್ಟಿಲ್ಲ: ರಾಮ ಮಂದಿರಕ್ಕೆ ರೂ 1 ಕೋಟಿ ನೀಡಿದ ಉದ್ಧವ್​ ಠಾಕ್ರೆ

ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಇತ್ತೀಚೆಗಷ್ಟೇ ಬರೆದುಕೊಂಡಿದ್ದ ಉದ್ಧವ್​ ಠಾಕ್ರೆ ಶ್ರೀರಾಮ ಮತ್ತು ಹಿಂದುತ್ವ ಯಾವ ಒಂದು ಪಕ್ಷದ ಆಸ್ತಿಯಲ್ಲ ಎಂದಿದ್ದರು. ಈ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದರು.

news18-kannada
Updated:March 7, 2020, 4:24 PM IST
ಬಿಜೆಪಿ ಜತೆ ಸ್ನೇಹ ಬಿಟ್ಟಿದ್ದೇವೆ, ಹಿಂದುತ್ವ ಬಿಟ್ಟಿಲ್ಲ: ರಾಮ ಮಂದಿರಕ್ಕೆ ರೂ 1 ಕೋಟಿ ನೀಡಿದ ಉದ್ಧವ್​ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ
  • Share this:
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಶನಿವಾರ ಅಯೋಧ್ಯೆಗೆ ಭೇಟಿ ನೀಡಿ, ರಾಮ ಮಂದಿರ ನಿರ್ಮಾಣಕ್ಕೆ ರೂ. 1 ಕೋಟಿ ಹಣವನ್ನು ನೀಡಿದ್ದಾರೆ. ಬಿಜೆಪಿಯೊಂದಿಗಿನ ಸಂಬಂಧದ ಕುರಿತು ಮಾತನಾಡಿದ ಅವರು, ನಾವು ಬಿಜೆಪಿಯಿಂದ ಬೇರೆಯಾಗಿದ್ದೇವೆ ಹೊರತು ಹಿಂದುತ್ವದಿಂದ ಅಲ್ಲ ಎಂದಿದ್ದಾರೆ.

ತಂದೆ ಬಾಳಾ ಸಾಹೇಬ್​ ಠಾಕ್ರೆಯವರ ಕೊಡುಗೆಗಳನ್ನು ನೆನಪಿಸಿಕೊಂಡ ಅವರು, ಕೊರೋನಾ ವೈರಸ್ ಕಾರಣದಿಂದ ಸರಯೂ ನದಿಯ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ನಾನು ಅಯೋಧ್ಯೆಗೆ ಬೇಟಿ ನೀಡುತ್ತಿರುತ್ತೇನೆ ಎಂದರು.

ಸದ್ಯ ಎನ್​ಸಿಪಿ ಮತ್ತು ಕಾಂಗ್ರೆಸ್​ ಜತೆಗೂಡಿ ಸರ್ಕಾರ ನಡೆಸುತ್ತಿರುವ ಶಿವಸೇನೆ ಪಕ್ಷದ ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಶಿವಸೇನೆ ಈಗಲೂ ಹಿಂದುತ್ವವನ್ನೇ ಪ್ರತಿಪಾದಿಸುತ್ತದೆ ಎಂದು ಉದ್ಧವ್​ ಇದೇ ಸಂದರ್ಭದಲ್ಲಿ ತಿಳಿಸಿದರು.

ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಇತ್ತೀಚೆಗಷ್ಟೇ ಬರೆದುಕೊಂಡಿದ್ದ ಉದ್ಧವ್​ ಠಾಕ್ರೆ ಶ್ರೀರಾಮ ಮತ್ತು ಹಿಂದುತ್ವ ಯಾವ ಒಂದು ಪಕ್ಷದ ಆಸ್ತಿಯಲ್ಲ ಎಂದಿದ್ದರು. ಈ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದರು.

ಅಲ್ಲದೇ, ಎನ್​ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಮಹಾಘಟಬಂಧನದ ಸರ್ಕಾರ 100 ದಿನಗಳನ್ನು ಪೂರೈಸಿದೆ. ಇದು ಮೈತ್ರಿ ಸರ್ಕಾರ 100 ದಿನಗಳನ್ನು ಪೂರೈಸುವುದಿಲ್ಲ ಎನ್ನುತ್ತಿದ್ದವರಿಗೆ ಪಾಠ ಎಂದು ಸಾಮ್ನಾ ಪತ್ರಿಕೆಯಲ್ಲಿ ತಿಳಿಸಲಾಗಿತ್ತು.

ಯಾರ ಸರ್ಕಾರ 80 ಗಂಟೆಗಳನ್ನು ಪೂರೈಸಲಿಲ್ಲವೋ ಅವರು ಠಾಕ್ರೆ ಸರ್ಕಾರ 100 ದಿನಗಳನ್ನು ಪೂರೈಸುವುದಿಲ್ಲ ಎನ್ನುತ್ತಾರೆ. ನಾವು 100 ದಿನಗಳನ್ನು ಪೂರೈಸುವುದರ ಜೊತೆಗೆ ಈ ದಿನಗಳಲ್ಲಿ ನಮ್ಮ ಕೆಲಸದ ಮೂಲಕ ಜನರ ಮನಸಲ್ಲಿ ನಂಬಿಕೆಯನ್ನು ಹುಟ್ಟಿಸಿದ್ದೇವೆ ಎಂದು ಪತ್ರಿಕೆ ಹೇಳಿದೆ. ಇದು ನೇರವಾಗಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೇ ಹೇಳಿರುವುದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಠಾಕ್ರೆ ಅವರಿಗೆ ಅಯೋಧ್ಯೆ ರಾಮ ಮಂದಿರದಲ್ಲಿ ಅದ್ಭುತವಾಗಿ ಸ್ವಾಗತಿಸಬೇಕು.  ಏಕೆಂದರೆ ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಪತ್ರಿಕೆ ಹೇಳಿದೆ.ಪ್ರಭು ಶ್ರೀ ರಾಮನ ಮೇಲಿರುವ ಭಕ್ತಿಯಿಂದ ಉದ್ಧವ್​ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಬೇರೆ ಬೇರೆ ಸಿದ್ಧಾಂತವನ್ನು ಹೊಂದಿರುವ ಪಕ್ಷಗಳು ಸೇರಿ ನಡೆಸುತ್ತಿವೆ. ಅದನ್ನು ಠಾಕ್ರೆ ಮುನ್ನಡೆಸುತ್ತಿದ್ದಾರೆ ಎಂದು ಶಿವಸೇನೆ ಹೇಳಿದೆ.
ಠಾಕ್ರೆ ಅಯೋಧ್ಯೆ ಭೇಟಿಯ ಬಗ್ಗೆ ಪ್ರತಿಪಕ್ಷಗಳಿಂದ ಹಲವಾರು ಪ್ರಶ್ನೆಗಳು ಉದ್ಭವಿಸಿದವು. ಸರ್ಕಾರ ಯಾವ ಪಕ್ಷದ ಬೆಂಬಲದಿಂದ ನಡೆಯುತ್ತಿದೆ ಎಂಬುದು ಮುಖ್ಯವಲ್ಲ, ಉದ್ಧವ್ ಠಾಕ್ರೆ ಮತ್ತು ಶೀವಸೇನೆಯ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಮುಖ್ಯ. ರಾಮ ಮತ್ತು ಹಿಂದುತ್ವ ಯಾವ ಒಂದು ಪಕ್ಷದ ಸೊತ್ತಲ್ಲ ಎಂದಿದೆ.

ಆರ್​ಎಸ್​ಎಸ್​ ಮುಖಂಡ ಸುರೇಶ್ ಭೈಯ್ಯಾಜಿ ಜೋಶಿ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಹಿಂದೂ ಸಮುದಾಯ ಎಂದರೆ ಬಿಜೆಪಿಯಲ್ಲ, ಬಿಜೆಪಿಯನ್ನು ವಿರೋಧಿಸುವವರು ಹಿಂದುತ್ವವನ್ನು ವಿರೋದಿಸುತ್ತಾರೆ ಎಂದಲ್ಲ. ಹಾಗೆಯೇ ಅಯೋಧ್ಯ ಎಲ್ಲರಿಗೂ ಸೇರಿದ್ದು ಎಂದಿದ್ದಾರೆ.

ಅಯೋಧ್ಯೆಯಲ್ಲಿ ರಾಜಕೀಯ ಮತ್ತು ಸಾಂಸ್ಕೃತಿಕ ಕಲಹಕ್ಕೆ ತೆರೆ ಬಿದ್ದಿದೆ. ಇದಕ್ಕೆ ಸುಪ್ರೀಂ ಕೋರ್ಟ್​ಗೆ ಅದೆಷ್ಟು ಧನ್ಯವಾದ ಹೇಳಿದರು ಸಾಲದು. ಏಕೆಂದರೆ ರಾಮ ಜನ್ಮ ಭೂಮಿ ಮತ್ತು ಭಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದಿದೆ.

2019 ನವೆಂಬರ್​ನ ಸುಪ್ರೀಂ ಕೋರ್ಟ ತೀರ್ಪಿನ ಬಗ್ಗೆ ಮಾತನಾಡಿದ ಸೇನೆ, ಅಯೋಧ್ಯೆ ರಾಮನಿಗೆ ಸೇರಬೇಕು ಎಂಬುದನ್ನು ಸಾಬೀತು ಮಾಡಲು ದೇಶಕ್ಕೆ ದಶಕಗಳೇ ಬೇಕಾದವು ಎಂದಿದೆ.

ಆ ಯುದ್ಧದಲ್ಲಿ ಹಲವಾರು ಜನರು ಮುಂದೆ ಬರಲಿಲ್ಲ, ಆದರೆ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಮಾತ್ರ ಬೆಟ್ಟದಂತೆ ಅಯೋಧ್ಯೆ ಹೋರಾಟಗಾರರ ಬೆಂಬಲಕ್ಕೆ ನಿಂತಿದ್ದರು ಎಂದು ಪತ್ರಿಕೆ ಹೇಳಿದೆ.

ಬಾಳಾ ಠಾಕ್ರೆ ರಾಮ ಮಂದಿರ ನಿರ್ಮಾಣದ ಬಗ್ಗೆ ಪ್ರಪಂಚದ ಹಿಂದೂಗಳಲ್ಲಿ ನಂಬಿಕೆ ಬರುವಂತೆ ಮಾಡಿದರು ಎಂದು ಸೇನೆ ಹೇಳಿದೆ. ಅಲ್ಲದೇ ಶಿವಸೇನೆ ಕಾರ್ಯಕರ್ತರಿಂದ ಮಸೀದಿ ಧ್ವಂಸವಾಗಿದ್ದರೆ ಠಾಕ್ರೆ ಹೆಮ್ಮೆಪಡುತ್ತಿದ್ದರು.

ಆ ಬೆಳಕಿನಲ್ಲಿ ಹಿಂದೂ ಸಂಸ್ಕೃತಿಯು ಬೆಳಗುತ್ತಿತ್ತು. ಅಲ್ಲದೇ ದೇಶದ ರಾಜಕೀಯವನ್ನು ಬದಲಾಯಿಸುವಲ್ಲಿ ಹಿಂದೂ ಹೃದಯ ಸಾಮ್ರಾಟ (ಬಾಳಾ ಠಾಕ್ರೆ) ಅವರ ಕೊಡುಗೆಗಳು ರಾಮನ ಕೊಡುಗೆಯಂತೆ ಎಂಬುದನ್ನು ಯಾರೂ ಅಲ್ಲಗಳೆಯಬಾರದು ಎಂದು ಸೇನೆ ಹೇಳಿದೆ.

ನಾವು ಹಲವಾರು ಭಾರಿ ಅಯೋಧ್ಯೆಯ ನೆನಪಿನಾಳದಲ್ಲಿ ಭಾಳಾಠಾಕ್ರೆಯವರ ಇರುವಿಕೆಯನ್ನು ಅನುಭವಿಸಿದ್ದೇವೆ. ಈಗ ಉದ್ಧವ್ ಕೂಡ ಅದೇ ನಂಬಿಕೆಯೊಂದಿಗೆ ಹೋಗಿದ್ದಾರೆ. ಅವರು ಅಧಿಕಾರ ಇಲ್ಲದೇ ಇದ್ದಾಗಲೂ ಅಲ್ಲಿಗೆ ತೆರಳಿದ್ದಾರೆ. ಈಗ ಮುಖ್ಯಮಂತ್ರಿಯಾದ ಮೇಲೂ ಅದೇ ಭಕ್ತಿಯಿಂದ ತೆರಳಿದ್ದಾರೆ. ಶ್ರೀರಾಮ ಎಲ್ಲರಿಗೂ ಒಂದೇ ಎಂದಿದ್ದಾರೆ.

ಇದನ್ನೂ ಓದಿ: ಭಾರತದ ಹೊರತು ಎಲ್ಲರನ್ನೂ ಬರಮಾಡಿಕೊಳ್ಳುವ ದೇಶ ಯಾವುದಿದೆ?; ಸಿಎಎ ವಿರೋಧಿಗಳಿಗೆ ಸಚಿವ ಜೈಶಂಕರ್ ಪ್ರಶ್ನೆ

ರಾಮಮಂದಿರಕ್ಕಾಗಿ ಹೋರಾಟವನ್ನು ರಚಿಸುವಲ್ಲಿ ಮತ್ತು ಯುವಕರನ್ನು ಹುರಿದುಂಬಿಸುವಲ್ಲಿ ಠಾಕ್ರೆ ಅಗಾಧವಾದ ಕೆಲಸ ಮಾಡಿದ್ದಾರೆ. ಜತೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಆಗಸದಲ್ಲಿ ವರ್ಣರಂಜಿತ ಬೆಳಕಿನ ಸಂಚಾರವಾಗುತ್ತಿದೆ, ಕೋಟ್ಯಂತರ ಹಿಂದೂಗಳ ದಶಕಗಳ ಕನಸಿಗೆ ಮೆರಗು ಸಿಗುತ್ತದೆ ಎಂದು ಭಾಳಾ ಠಾಕ್ರೆ ನಂಬಿದ್ದರು ಎಂದು ಸಾಮ್ನಾ ತಿಳಿಸಿದೆ.

ಇದನ್ನೂ ಓದಿ: ಕೊರೋನಾ ವೈರಸ್ ಎದುರಿಸಲು ಸರ್ಕಾರ ಸಿದ್ಧವಾಗಿದೆ, ಸುಖಾಸುಮ್ಮನೆ ಆತಂಕ ಸೃಷ್ಟಿಸಬೇಡಿ; ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್

ಮಹಾರಾಷ್ಟ್ರ ರಾಮ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಹಾದಿಯಲ್ಲಿ ನಡೆಯುತ್ತಿದೆ. ರಾಮರಾಜ್ಯ ಎಂದರೆ ಜನರಿಗೆ ನೀಡಿರುವ ಭರವಸೆಗಳನ್ನು ಪೂರೈಸುವುದು. ಇದನ್ನೇ ಮಹಾತ್ಮ ಗಾಂಧಿ ಸಹ ಬಯಸಿದ್ದು ಹಾಗೂ ಮಹಾರಾಷ್ಟ್ರ ಸರ್ಕಾರ ಇದೇ ಸಿದ್ಧಾಂತವನ್ನು ಪಾಲಿಸುತ್ತಿದೆ. ಇದೇ ಹಾದಿಯಲ್ಲಿ ತನ್ನ ಕೆಲಸವನ್ನು ಸರ್ಕಾರ ಮುಂದುವರೆಸುತ್ತದೆ. ಅಂತಿಮವಾಗಿ ಶ್ರೀರಾಮ ನಮ್ಮ ಬೆಂಬಲಕ್ಕೆ ಇದ್ದಾನೆ ಎಂದು ಸೇನೆ ಹೇಳಿದೆ.

ಇದನ್ನೂ ಓದಿ: ಠಾಗೋರ್ ಹಾಡಿಗೆ ಅಶ್ಲೀಲ ರೂಪ ಕೊಟ್ಟು ಅಸಭ್ಯವಾಗಿ ವರ್ತಿಸಿದ ಘಟನೆ: ನೈತಿಕ ಹೊಣೆಹೊತ್ತು ಉಪಕುಲಪತಿ ರಾಜೀನಾಮೆ

ಠಾಕ್ರೆ ಮುಖ್ಯಮಂತ್ರಿಯಾಗಿ ಕಚೇರಿಯಲ್ಲಿ ಶುಕ್ರವಾರ 100ದಿನಗಳನ್ನು ಪೂರ್ಣಗೊಳಿಸಿದ್ದಾರೆ. ಶಿವಸೇನೆಗೆ ಎನ್​ಸಿಪಿ ಮತ್ತು ಕಾಂಗ್ರೆಸ್ ಬೆಂಬಲ ನೀಡಿದ ಸಮಯದಲ್ಲಿ ಅವರು ಕಚೇರಿಯಲ್ಲಿ ಮುಖ್ಯಮಂತ್ರಿಯಾಗಿ ಸರ್ಕಾರವನ್ನು ನಡೆಸುವ ಕನಸನ್ನು ಕಳೆದ ನವೆಂಬರ್ 28ರಂದು ಕಂಡಿದ್ದರು ಎಂದು ಹೇಳಿದೆ.

ಹಿರಿಯ ಶಿವಸೇನೆ ಮುಖಂಡ ಸಂಜಯ್ ರಾವತ್ ಸರಯು ನದಿ ತೀರದಲ್ಲಿ ನಡೆಯುವ ಆರತಿ ಕಾರ್ಯಕ್ರಮದಲ್ಲಿ ಠಾಕ್ರೆ ಭಾಗಿಯಾಗುವುದಿಲ್ಲ ಎಂದಿದ್ದಾರೆ.
First published: March 7, 2020, 4:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading