ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ತಮಿಳುನಾಡಲ್ಲಿ ಅಯ್ಯಾವಳಿ ಪ್ರತ್ಯೇಕ ಧರ್ಮಕ್ಕೆ ಹುಟ್ಟಿದೆ ಹೋರಾಟ

ಅಯ್ಯಾವಳಿ ಪಂಡದವರು ಹೆಚ್ಚಿನ ಸಂಖ್ಯೆಯಲ್ಲಿರುವುದು ಕನ್ಯಾಕುಮಾರಿ, ಇದು ಬಿಜೆಪಿ ಭದ್ರಕೋಟೆಯೂ ಹೌದು. ಹೀಗಾಗಿ, ಪ್ರತ್ಯೇಕ ಧರ್ಮದ ವಿಚಾರವು ಬಿಜೆಪಿಯನ್ನು ಸಂದಿಗ್ದತೆಗೆ ಸಿಲುಕಿಸಿದೆ.

Vijayasarthy SN | news18
Updated:March 21, 2019, 4:42 PM IST
ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ತಮಿಳುನಾಡಲ್ಲಿ ಅಯ್ಯಾವಳಿ ಪ್ರತ್ಯೇಕ ಧರ್ಮಕ್ಕೆ ಹುಟ್ಟಿದೆ ಹೋರಾಟ
ಪ್ರಧಾನಿ ನರೇಂದ್ರ ಮೋದಿ
Vijayasarthy SN | news18
Updated: March 21, 2019, 4:42 PM IST
ನಾಗರಕೋಯಿಲ್(ಮಾ. 21): ಕರ್ನಾಟಕದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಯುತ್ತಿರುವಂತೆಯೇ ತಮಿಳುನಾಡಿನಲ್ಲಿ ಅಯ್ಯಾವಳಿ ಎಂಬ ಪಂಗಡವೊಂದು ಹಿಂದೂ ಧರ್ಮದಿಂದ ಪ್ರತ್ಯೇಕಗೊಂಡು ಅಸ್ತಿತ್ವ ಕಂಡುಕೊಳ್ಳುವ ಪ್ರಯತ್ನ ನಡೆಸಿದೆ. ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗುತ್ತಿರುವಾಗಲೇ ಅಯ್ಯಾವಳಿ ಪ್ರತ್ಯೇಕ ಧರ್ಮಕ್ಕೆ ಹೋರಾಟದ ಕಿಡಿ ಹೊತ್ತಿದೆ. ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾಗಿರುವ ಕನ್ಯಾಕುಮಾರಿ ಹಾಗೂ ಸುತ್ತಮುತ್ತನ ಪ್ರದೇಶಗಳಲ್ಲಿ ಅಯ್ಯಾವಳಿ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಈಗ ಇಕ್ಕಟ್ಟಿನಲ್ಲಿ ಸಿಲುಕಿದೆ.

ಪ್ರತ್ಯೇಕ ಧರ್ಮದ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದರೆ ತನ್ನ ಸಾಂಪ್ರದಾಯಿಕ ಮತದಾರರನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ ಬಿಜೆಪಿ. ಸದ್ಯ ಹಿಂದೂ ಧರ್ಮದ ಒಂದು ಪಂಗಡವಾಗಿರುವ ಅಯ್ಯಾ ವಳಿಯ ಕೆಲ ಆಚರಣೆಗಳು ಹಿಂದೂ ಧರ್ಮದಕ್ಕಿಂತ ಸ್ವಲ್ಪ ವಿಭಿನ್ನವಾಗಿವೆ. ಪೂಜಾಸ್ಥಳದ ಹೆಸರು, ಪೂಜೆಯ ವಿಧಿ ವಿಧಾನಗಳು ಇವು ಸ್ವಲ್ಪ ವಿಶೇಷವಾಗಿವೆ. ಇವುಗಳನ್ನು ಕಾಪಾಡಿಕೊಳ್ಳಲು ಅಯ್ಯಾವಳಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಬೇಕು ಎಂದು ಈ ಪಂಗಡದ ಮುಖ್ಯಸ್ಥ ಬಾಲಪ್ರಜಾಪತಿ ಆದಿಗಳರ್ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಲಾಲ್​ ಬಹಾದ್ದೂರ್​ ಶಾಸ್ತ್ರಿ ಪ್ರತಿಮೆಗೆ ಹಾರಹಾಕಿದ ಪ್ರಿಯಾಂಕಾ: ಶುಚಿಗೊಳಿಸಿದ ಬಿಜೆಪಿ; ಕಾಂಗ್ರೆಸ್ಸಿಗರ ಆಕ್ರೋಶ!

ಅಯ್ಯಾ ವಳಿ ಪಂಗಡ ಸ್ಥಾಪನೆಯಾದದ್ದು 19ನೇ ಶತಮಾನದಲ್ಲಿ. ಹಿಂದೂ ಧರ್ಮದ ದೇವರು ವಿಷ್ಣುವಿನ 10ನೇ ಅವತಾರವೆಂದು ಪರಿಗಣಿಸಲಾಗಿರುವ ಅಯ್ಯಾ ವೈಕುಂಡರ್ ಅವರ ಬೋಧನೆಗಳ ಆಧಾರದ ಮೇಲೆ ಸ್ಥಾಪನೆಯಾದ ಧರ್ಮ ಅಯ್ಯಾವಳಿ. 19ನೇ ಶತಮಾನದ ಅಂತ್ಯದಷ್ಟರಲ್ಲಿ ತಮಿಳುನಾಡು ಮತ್ತು ಕೇರಳದ ಕೆಲ ಭಾಗಗಳಲ್ಲಿ ಅಯ್ಯಾವಳಿ ಗಣನೀಯವಾಗಿ ಬೆಳೆಯಿತು. ಸದ್ಯ ಈ ಪಂಡದವರು ಸುಮಾರು 1 ಕೋಟಿಯಷ್ಟಿರುವ ಅಂದಾಜಿದೆ. ಕನ್ಯಾಕುಮಾರಿ, ತೂತ್ತುಕುಡಿ, ತಿರುನೆಲ್ವೇಲಿ, ಟ್ರಾವೆಂಕೋರ್ ಮೊದಲಾದ ಕಡೆ ಅಯ್ಯಾವಳಿ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಕನ್ಯಾಕುಮಾರಿಯಲ್ಲಿ ಇವರೇ ಬಹುಸಂಖ್ಯಾತರಾಗಿದ್ದಾರೆ.

ಅಯ್ಯಾವಳಿ ಪಂಡದವರು ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗರಾಗಿದ್ದಾರೆ. ಇಡೀ ತಮಿಳುನಾಡಿನಲ್ಲಿ ಹೇಳಹೆಸರಿಲ್ಲದ ಬಿಜೆಪಿ ಕನ್ಯಾಕುಮಾರಿಯಲ್ಲಿ ಮಾತ್ರ ಮೊದಲಿಂದಲೂ ಅಸ್ತಿತ್ವದಲ್ಲಿದೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕನ್ಯಾಕುಮಾರಿ ಕ್ಷೇತ್ರವು ಬಿಜೆಪಿಯ ಪಾಲಾಗಿತ್ತು.

ಇದನ್ನೂ ಓದಿ: ‘ಮೈ ಭೀ ಚೌಕಿದಾರ್’ – ವೈರಲ್ ಆಗುತ್ತಿದೆ ಮೋದಿ ಪರ ಅಭಿಯಾನ
Loading...

ಈ ಹಿನ್ನೆಲೆಯಲ್ಲಿ ಅಯ್ಯಾವಳಿ ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಬಂದಿರುವುದು ಬಿಜೆಪಿಯನ್ನು ಇಕ್ಕಟ್ಟಿಗೆ ದೂಡಿದೆ. ಪಂಗಡದ ಯಾವುದೋ ಒಂದು ವರ್ಗ ಮಾತ್ರ ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಮುಂದಿಟ್ಟಿದೆ. ಬಹುತೇಕ ಜನರಿಗೆ ಇದು ಬೇಕಾಗಿಲ್ಲ ಎಂಬುದು ಹಿಂದೂ ಸಂಘಟನೆಗಳ ವಾದವಾಗಿದೆ. ಅಯ್ಯಾವಳಿಯ ಬಹುತೇಕ ಆಚರಣೆಗಳ ಮೂಲವು ಹಿಂದೂ ಧರ್ಮವೇ ಆಗಿದೆ. ಅವರ ಆಧಾರವಾಗಿರುವ ಅಕಿಲತಿರಟ್ಟು ಅಮ್ಮಣೈ ಎಂಬ ಗ್ರಂಥದಲ್ಲಿ ಹಿಂದೂ ದೇವರುಗಳ ಉಲ್ಲೇಖವಿದೆ. ಹೀಗಾಗಿ, ಅಯ್ಯಾವಳಿಯು ಹಿಂದೂ ಧರ್ಮದ ಅವಿಭಾಜ್ಯ ಅಂಗ ಎಂದು ಹಿಂದೂ ಸಂಘಟನೆಗಳು ಹೇಳುತ್ತಿವೆ.

ಕರ್ನಾಟಕದಲ್ಲಿ ಲಿಂಗಾಯತ ಧರ್ಮದಂತೆ ಅಯ್ಯಾವಳಿಗೂ ಹೋರಾಟ ತೀವ್ರ ಸ್ವರೂಪ ಪಡೆಯುತ್ತದಾ ಎಂಬುದು ಗೊತ್ತಿಲ್ಲ.

(ಪಿಟಿಐ ವರದಿ)
First published:March 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626