Budget 2019: ಬಜೆಟ್ ಮಂಡನೆಗೂ ಮೊದಲೇ ಷೇರು ಮಾರುಕಟ್ಟೆಯಲ್ಲಿ ಧನಾತ್ಮಕ ಬೆಳವಣಿಗೆ

ಸೆನ್ಸೆಕ್ಸ್ 100 ಅಂಕ ಏರಿಕೆ ಕಂಡಿದ್ದು, 36,360 ಮಟ್ಟ ತಲುಪಿದೆ. ನಿಫ್ಟಿ 30 ಅಂಕ ಹೆಚ್ಚಳ ಕಂಡು 10,860 ಮಟ್ಟ ತಲುಪಿದೆ. ಅಲ್ಲದೇ ಈ ಏರಿಕೆಗೆ ಷೇರು ವ್ಯಾಪಾರದಲ್ಲಿ ನಾನಾ ವಿಧಗಳು ಇರುವುದರಿಂದ ಕೆಲವರಿಗೆ ಲಾಭವಾಗಿರಬಹುದು, ಇನ್ನು ಕೆಲವರಿಗೆ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.

Ganesh Nachikethu | news18
Updated:February 1, 2019, 11:44 AM IST
Budget 2019: ಬಜೆಟ್ ಮಂಡನೆಗೂ ಮೊದಲೇ ಷೇರು ಮಾರುಕಟ್ಟೆಯಲ್ಲಿ ಧನಾತ್ಮಕ ಬೆಳವಣಿಗೆ
ಪಿಯೂಷ್​ ಗೋಯಲ್​​
Ganesh Nachikethu | news18
Updated: February 1, 2019, 11:44 AM IST
ನವದೆಹಲಿ(ಫೆ.01): ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಡೆಯ ಮತ್ತು ಮಧ್ಯಂತರ ಬಜೆಟ್​​ ಅಧಿವೇಶನ ಶುರುವಾಗಿದೆ. ಹೆಚ್ಚುವರಿಯಾಗಿ ಕೇಂದ್ರ ಹಣಕಾಸು ಖಾತೆ ಹೊಣೆ ಹೊತ್ತ ಪಿಯೂಷ್​​ ಗೋಯಲ್​​ರಿಂದ ಈಗಾಗಲೇ ಬಜೆಟ್​​​ ಮಂಡನೆಯಾಗುತ್ತಿದೆ. ಈ ಮೊದಲೇ ಷೇರು ಮಾರುಕಟ್ಟೆಯಲ್ಲಿ ಧನಾತ್ಮಕ ಬೆಳವಣಿಗೆ ಕಂಡು ಬಂದಿದೆ. ಸೆನ್ಸೆಕ್ಸ್ 100 ಅಂಕ ಏರಿಕೆ ಕಂಡಿದ್ದು, 36,360 ಮಟ್ಟ ತಲುಪಿದೆ. ನಿಫ್ಟಿ 30 ಅಂಕ ಹೆಚ್ಚಳ ಕಂಡು 10,860 ಮಟ್ಟ ತಲುಪಿದೆ ಎನ್ನಲಾಗಿದೆ.

ಇನ್ನು ಷೇರು ಹೂಡಿಕೆದಾರರು ಎಲ್​​​ಟಿಸಿ ತೆರಿಗೆ ತೆಗೆದು ಹಾಕುವಂತೆ; ಜಿಎಸ್​​​ಟಿ ದರ ಕಡಿಮೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಈಗಾಗಲೇ ಷೇರು ಮಾರುಕಟ್ಟೆಯಲ್ಲಿ ಧನಾತ್ಮಕ ಬೆಳವಣಿಗೆಯಾಗಿದ್ದು, ಕೇಂದ್ರ ಎಲ್​​ಟಿಸಿ ತೆರಿಗೆ ತೆಗೆದು ಹಾಕಿ ಜಿಎಸ್​​ಟಿ ದರವನ್ನು ಕಡಿಮೆ ಮಾಡಲಿದ್ಧಾರೆ ಎನ್ನಲಾಗಿದೆ. ಒಂದು ವೇಳೆ ಈ ಎರಡು ನಿರ್ಧಾರಗಳು ಬಜೆಟ್​​ನಲ್ಲಿ ಪ್ರಕಟಿಸಿದರೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚಳವಾಗಲಿದೆ ಎನ್ನುತ್ತಿವೆ ಮೂಲಗಳು.

ಕಳೆದ 6 ತಿಂಗಳಿನಿಂದ ಪ್ರತಿದಿನ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಅಗಾಧ ಪ್ರಮಾಣದಲ್ಲಿ ಪತನವಾಗಿತ್ತು ಎಂದು ಹೇಳಲಾಗಿತ್ತು. ವಾಸ್ತವವಾಗಿ 6 ತಿಂಗಳಿನಿಂದ ಅಲ್ಲ, ಕಳೆದ ಒಂದು ವರ್ಷದಿಂದಲೇ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೂಚ್ಯಂಕ ಕಡಿಮೆಯಾಗಿದೆ. ಕಳೆದ ವರ್ಷ 2018 ಜನವರಿಯಿಂದ ಅಕ್ಟೋಬರ್ 26 ರವರೆಗೆ ಭಾರತದ ಷೇರು ಮಾರುಕಟ್ಟೆಯಲ್ಲಿ ಇರುವ ಕಂಪನಿಗಳ ಬಂಡವಾಳ ಹೆಚ್ಚುಕಮ್ಮಿ ಕಾಲು ಭಾಗ, ಅಂದರೆ ಶೇ. 26 ರಷ್ಟು ಕಡಿಮೆಯಾಗಿದೆ.

ಇದನ್ನೂ ಓದಿ: Union Budget 2019: ಬಜೆಟ್‌ ಗಾತ್ರ ಹಿಗ್ಗಿಸಿದ ಮೋದಿ ಸರ್ಕಾರ!

ಹೀಗೆ ಕಡಿಮೆಯಾದ ಮೌಲ್ಯ ಸುಮಾರು ₹ 40 ಲಕ್ಷ ಕೋಟಿ. ಇದರಿಂದ ಕಂಪನಿಗಳ ಬ್ಯಾಲೆನ್ಸ್ ಶೀಟ್‌ನಲ್ಲಿ ನಷ್ಟವಾಗಿದೆಯೋ ಇಲ್ಲವೋ ಎಂಬುದು ನಿರ್ಧಾರವಾಗುವುದಿಲ್ಲ. ಬದಲಿಗೆ, ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ, ಅಂದರೆ ಆ ಕಂಪನಿಯನ್ನು ಮಾರಿದರೆ ಸಿಗುವ ಹಣ, ಕಡಿಮೆಯಾಗುತ್ತದೆ. ಷೇರು ಮಾರುಕಟ್ಟೆ ಭಾರತದಲ್ಲೊಂದೇ ಅಲ್ಲ, ಚೀನಾ ಸೇರಿದಂತೆ ಹಲವಾರು ದೇಶಗಳಲ್ಲಿ ಕುಸಿಯುತ್ತಿತ್ತು. ಕಳೆದ ಒಂದು ವರ್ಷದಿಂದ ತಿಂಗಳಿನಲ್ಲಿ ಚೀನಾ ಷೇರು ಮಾರುಕಟ್ಟೆ ಬಂಡವಾಳ ಶೇ.30 ರಷ್ಟು, ಅಂದರೆ ಸುಮಾರು 167 ಲಕ್ಷ ಕೋಟಿ ರು. ಕುಸಿದಿತ್ತು.

ಮಾರುಕಟ್ಟೆ ಬಂಡವಾಳ ಎಂದರೇನು?: ಷೇರು ಮಾರುಕಟ್ಟೆಯಲ್ಲಿ ನೋಂದಾಯಿಸಿಕೊಂಡಿರುವ ಎಲ್ಲಾ ಕಂಪನಿಗಳ ಒಟ್ಟು ಷೇರುಗಳ ಮೌಲ್ಯದ ಮೊತ್ತವೇ ಷೇರು ಮಾರುಕಟ್ಟೆ ಬಂಡವಾಳ. ಇದು ಆಯಾ ದಿನದ ಷೇರು ಸೂಚ್ಯಂಕಕ್ಕೆ ತಕ್ಕಂತೆ ಏರಿಳಿತವಾಗುತ್ತದೆ. ಒಂದು ಕಂಪನಿಯ ಮೌಲ್ಯವನ್ನು ಅದರ ಮಾರುಕಟ್ಟೆ ಬಂಡವಾಳದಿಂದ ಅಳೆಯುತ್ತಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ಮುನ್ನ ಕೇಂದ್ರ ಬಜೆಟ್​​​; ಮತದಾರನ ಓಲೈಕೆಗೆ ಮುಂದಾಯ್ತ ಮೋದಿ ಸರ್ಕಾರ?

ಇನ್ನು ಜಾಗತಿಕ ಮಾರುಕಟ್ಟೆಯ ಅಸ್ಥಿರತೆ, ರುಪಾಯಿ ಮೌಲ್ಯ ಕುಸಿತ, ಕಂಪನಿಗಳ ಆದಾಯದಲ್ಲಿ ಕುಸಿತ, ಹೂಡಿಕೆದಾರರ ನಕಾರಾತ್ಮಕ ಧೋರಣೆ ಹಾಗೂ ತೈಲಬೆಲೆ ಹೆಚ್ಚಳದಿಂದ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಕುಸಿಯುತ್ತಿತ್ತು.  ಆದರೆ, ಇದೀಗ ದಿಢೀರ್​​ ಷೇರು ಮಾರುಕಟ್ಟೆಯಲ್ಲಿ ಧನಾತ್ಮಕ ಬೆಳವಣಿಗೆ ಆಗಿದೆ. ಸೆನ್ಸೆಕ್ಸ್ 100 ಅಂಕ ಏರಿಕೆ ಕಂಡಿದ್ದು, 36,360 ಮಟ್ಟ ತಲುಪಿದೆ. ನಿಫ್ಟಿ 30 ಅಂಕ ಹೆಚ್ಚಳ ಕಂಡು 10,860 ಮಟ್ಟ ತಲುಪಿದೆ. ಅಲ್ಲದೇ ಈ ಏರಿಕೆಗೆ ಷೇರು ವ್ಯಾಪಾರದಲ್ಲಿ ನಾನಾ ವಿಧಗಳು ಇರುವುದರಿಂದ ಕೆಲವರಿಗೆ ಲಾಭವಾಗಿರಬಹುದು, ಇನ್ನು ಕೆಲವರಿಗೆ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.

-------------
ಎಚ್​ಎಎಲ್​ನಲ್ಲಿ ಲಘು ವಿಮಾನ ಪತನ
First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...