ಷೇರುಪೇಟೆಯಲ್ಲಿ ಮುಂದುವರಿದ ಭರ್ಜರಿ ಓಟ; 39 ಸಾವಿರ ಪಾಯಿಂಟ್ಸ್ ಮಟ್ಟ ಮುಟ್ಟಿದ ಸೆನ್ಸೆಕ್ಸ್

ಸೋಮವಾರದ ವಹಿವಾಟಿನಲ್ಲಿ ಬಿಎಸ್​ಇ ಸೆನ್ಸೆಕ್ಸ್ 1,300 ಪಾಯಿಂಟ್ಸ್ ಹೆಚ್ಚಳವಾಗಿ 39 ಸಾವಿರ ಗಡಿ ದಾಟಿದೆ. ಎನ್​ಎಸ್​ಇ ನಿಫ್ಟಿಯಲ್ಲೂ 263 ಅಂಕ ಹೆಚ್ಚಳವಾಗಿ 11,500ರ ಗಡಿ ದಾಟಿದೆ.

Vijayasarthy SN | news18
Updated:September 23, 2019, 12:30 PM IST
ಷೇರುಪೇಟೆಯಲ್ಲಿ ಮುಂದುವರಿದ ಭರ್ಜರಿ ಓಟ; 39 ಸಾವಿರ ಪಾಯಿಂಟ್ಸ್ ಮಟ್ಟ ಮುಟ್ಟಿದ ಸೆನ್ಸೆಕ್ಸ್
ಬಾಂಬೆ ಷೇರುಪೇಟೆ
  • News18
  • Last Updated: September 23, 2019, 12:30 PM IST
  • Share this:
ಮುಂಬೈ(ಸೆ. 23): ಮೊನ್ನೆಮೊನ್ನೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾರ್ಪೊರೇಟ್ ಟ್ಯಾಕ್ಸ್ ಕಡಿತ ಸೇರಿದಂತೆ ಕೆಲವಾರು ಸುಧಾರಣಾ ಕ್ರಮಗಳನ್ನು ಘೋಷಿಸಿದ ಬೆನ್ನಲ್ಲೇ ಮೈಕೊಡವಿಕೊಂಡಿದ್ದ ಭಾರತದ ಷೇರು ಮಾರುಕಟ್ಟೆಯಲ್ಲಿ ಲಾಭದ ಓಟ ಇವತ್ತೂ ಮುಂದುವರಿದಿದೆ. ಶುಕ್ರವಾದ ವೀಕೆಂಡ್ ದಿನದ ವಹಿವಾಟಿನಲ್ಲಿ 1200ಕ್ಕೂ ಹೆಚ್ಚು ಪಾಯಿಂಟ್ಸ್ ಹೆಚ್ಚಳಗೊಂಡಿದ್ದ ಸೆನ್ಸೆಕ್ಸ್ ಇದೀಗ ಹೊಸ ವಾರದಲ್ಲಿ ಶುಭಾರಂಭ ಮಾಡಿದೆ.

ಸೋಮವಾರದ ವಹಿವಾಟಿನಲ್ಲಿ ಬಿಎಸ್​ಇ ಸೆನ್ಸೆಕ್ಸ್ 1,300 ಪಾಯಿಂಟ್ಸ್ ಹೆಚ್ಚಳವಾಗಿ 39 ಸಾವಿರ ಗಡಿ ದಾಟಿದೆ. ಎನ್​ಎಸ್​ಇ ನಿಫ್ಟಿಯಲ್ಲೂ 263 ಅಂಕ ಹೆಚ್ಚಳವಾಗಿ 11,500ರ ಗಡಿ ದಾಟಿದೆ.

ಹೆಚ್​ಡಿಎಫ್​ಸಿ ಬ್ಯಾಂಕ್, ಐಟಿಸಿ, ಎಲ್ ಆ್ಯಂಡ್ ಟಿ, ಐಸಿಐಸಿಐ ಬ್ಯಾಂಕ್ ಸಂಸ್ಥೆಗಳ ಷೇರುಗಳು ಅತ್ಯಧಿಕ ಬೆಲೆಗೆ ಮಾರಾಟವಾಗಿವೆ. ಇಂಡಸ್​ಇಂಡ್ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಮಾರುತಿ, ಓಎನ್​ಜಿಸಿ, ಬಜಾಜ್ ಫೈನಾನ್ಸ್, ಎಕ್ಸಿಸ್ ಬ್ಯಾಂಕ್, ಏಷ್ಯನ್ ಪೈಂಟ್ಸ್ ಸಂಸ್ಥೆಯ ಷೇರುಗಳೂ ಕೂಡ ಲಾಭ ಮಾಡಿಕೊಂಡವು.

ಇದನ್ನೂ ಓದಿ: ಬ್ರಿಟನ್​ನ 19ನೇ ಶತಮಾನದ ಥಾಮಸ್ ಕುಕ್ ಸಂಸ್ಥೆ ದಿವಾಳಿ; 22 ಲಕ್ಷ ಉದ್ಯೋಗನಷ್ಟ

ಇನ್ಫೋಸಿಸ್, ಟಿಸಿಎಸ್, ಟೆಕ್ ಮಹೀಂದ್ರ, ಹೆಚ್​ಸಿಎಲ್ ಟೆಕ್ ಮೊದಲಾದ ಐಟಿ ಸಂಸ್ಥೆಗಳು ಹಾಗೂ ಎನ್​ಟಿಪಿಸಿ, ಪವರ್​ಗ್ರಿಡ್ ಮೊದಲಾದ ಸಂಸ್ಥೆಗಳ ಷೇರುಗಳಿಗೆ ತುಸು ಹಿನ್ನಡೆಯಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ವಾರದ ಕಾರ್ಪೊರೇಟ್ ತೆರಿಗೆಯನ್ನು ಶೇ. 30ರಿಂದ ಶೇ. 22ಕ್ಕೆ ಇಳಿಸಿದ್ದರು. ಹೊಸ ತಯಾರಿಕಾ ಸಂಸ್ಥೆಗಳಿಗೆ ವಿಧಿಸಲಾಗುತ್ತಿದ್ದ ಕಾರ್ಪೊರೇಟ್ ತೆರಿಗೆಯನ್ನೂ ಕೂಡ ಶೇ. 25ರಿಂದ ಶೇ. 15ಕ್ಕೆ ಇಳಿಕೆ ಮಾಡಿದ್ದರು. ಹಣಕಾಸು ಸಚಿವರ ಈ ಕ್ರಮವನ್ನು ಭಾರತದ ಕಾರ್ಪರೇಟ್ ವಲಯ ಸ್ವಾಗತ ಮಾಡಿದೆ. ಆರ್ಥಿಕ ಹಿಂಜರಿತದ ಈ ಸಂದರ್ಭದಲ್ಲಿ ಈ ಕ್ರಮದ ತುರ್ತು ಅನಿವಾರ್ಯವಿತ್ತು ಎಂಬುದು ಅನೇಕ ಕಾರ್ಪೊರೇಟ್ ದಿಗ್ಗಜರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: Howdy Modi: ಪ್ರತಿವರ್ಷ ಕನಿಷ್ಠ 5 ವಿದೇಶಿ ಕುಟುಂಬಗಳನ್ನು ಭಾರತಕ್ಕೆ ಪ್ರವಾಸ ಕಳುಹಿಸಿ; ಅನಿವಾಸಿ ಭಾರತೀಯರಲ್ಲಿ ಪ್ರಧಾನಿ ಮೋದಿ ಮನವಿನೋಟ್ ಬ್ಯಾನ್, ಜಿಎಸ್​ಟಿ ಕ್ರಮದ ಬಳಿಕ ದೇಶದದಲ್ಲಿ ಆರ್ಥಿಕ ಹಿನ್ನಡೆಯ ಪರಿಸ್ಥಿತಿ ಉದ್ಭವಿಸಿದೆ. ಈ ಹಣಕಾಸು ವರ್ಷದ ಮೊದಲ ತ್ರೈವಾಸಿಕ ಅವಧಿಯಲ್ಲಿ ದೇಶದ ಜಿಡಿಪಿ ಶೇ. 5ಕ್ಕೆ ಇಳಿದಿದೆ. ಇದು ಕಳೆದ 7 ವರ್ಷದಲ್ಲೇ ಕನಿಷ್ಠ ಮಟ್ಟವಾಗಿದೆ. ಹತ್ತಾರು ಕಂಪನಿಗಳು ದಿವಾಳಿ ಏಳುವ ಹಂತಕ್ಕೆ ಬಂದಿವೆ. ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದಾರೆ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಇದು ಹೀಗೇ ಬಿಟ್ಟರೆ ದೇಶದ ಅರ್ಥವ್ಯವಸ್ಥೆ ಸಂಪೂರ್ಣವಾಗಿ ಕುಸಿದುಹೋಗುವ ಅಪಾಯ ಇದೆ ಎಂದು ಅನೇಕ ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳಿಂದಲೂ ಹಣಕಾಸು ಸಚಿವರು ಸುಧಾರಣಾ ಕ್ರಮಗಳನ್ನು ಪ್ರಕಟಿಸುತ್ತಿದ್ದಾರೆ. ಕಳೆದ ವಾರ ಕಾರ್ಪೊರೇಟ್ ತೆರಿಗೆ ಕಡಿತ ಮಾಡುವ ನಿರ್ಧಾರಕ್ಕೆ ಕಾರ್ಪೊರೇಟ್ ವಲಯದ ಮೆಚ್ಚುಗೆ ಸಿಕ್ಕಿದೆ. ಕೇಂದ್ರ ಸರ್ಕಾರ ಸಿರಿವಂತರನ್ನು ಓಲೈಸುತ್ತಿದೆ, ಬಡವರ ತಿರಸ್ಕಾರ ಮಾಡುತ್ತಿದೆ ಎಂದು ವಿಪಕ್ಷಗಳು ಟೀಕಿಸುತ್ತಿವೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: September 23, 2019, 12:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading