ಕೊರೋನಾ ಭೀತಿಯ ನಡುವೆಯೂ ಷೇರುಪೇಟೆಯಲ್ಲಿ ಚೇತರಿಕೆ; 1,400 ಅಂಕ ಗಳಿಕೆ ಕಂಡ ಬಿಎಸ್‌ಇ ಸೆನ್ಸೆಕ್ಸ್‌

ಹಿಂದಿನ ವಹಿವಾಟಿನಲ್ಲಿ ಬಿಎಸ್‌ಇ ಮಾನದಂಡವು ಶೇ.13.15 ಸರಾಸರಿಯಲ್ಲಿ 3,935 ಪಾಯಿಂಟ್‌ಗಳು ಕುಸಿದು 25,981.24 ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ಬಾರೋಮೀಟರ್ ನಿಫ್ಟಿ ಶೇ.12.98 ಸರಾಸರಿಯಲ್ಲಿ 1,135.20 ಪಾಯಿಂಟ್‌ ಕುಸಿದು 7,610.25 ಕ್ಕೆ ತಲುಪಿತ್ತು. ಕಳೆದ ಎರಡು ವಾರದಲ್ಲಿ ಭಾರತ ಕನಿಷ್ಟ 13 ಲಕ್ಷ ಕೋಟಿ ಹಣವನ್ನು ಷೇರುಪೇಟೆಯಲ್ಲಿ ಕಳೆದುಕೊಂಡಿತ್ತು.

ಮುಂಬೈ ಷೇರುಪೇಟೆ.

ಮುಂಬೈ ಷೇರುಪೇಟೆ.

  • Share this:
ಸತತ ಕುಸಿತದ ಹಾದಿಯಲ್ಲಿದ್ದ ಮುಂಬೈ ಷೇರುಪೇಟೆ ಕೊನೆಗೂ ಇಂದು ಚೇತರಿಕೆ ಕಂಡಿದೆ. ಯುಎಸ್‌ ಆರ್ಥಿಕತೆಯನ್ನು ಬೆಂಬಲಿಸುವ ಸಲುವಾಗಿ ಮಿತಿಯಿಲ್ಲದ ಬಾಂಡ್ ಖರೀದಿ ಕಾರ್ಯಕ್ರಮ ಘೋಷಿಸಿದ ಬೆನ್ನಿಗೆ ಈಕ್ವಿಟಿ ಮಾನದಂಡ ಸೆನ್ಸೆಕ್ಸ್ ಮಂಗಳವಾರ ಚೇತರಿಕೆ ಕಂಡಿದೆ.

ಆರ್ಥಿಕ ದೈತ್ಯರಿಂದ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದ್ದು, ಏಷ್ಯಾದಲ್ಲಿ ಹೂಡಿಕೆದಾರರ ಮನೋಭಾವ ಸುಧಾರಿಸಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಪರಿಣಾಮ ಇಂದು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆ ಮೊದಲ ಅವಧಿಯಲ್ಲೇ ಬಿಎಸ್‌ಇ ಸೆನ್ಸೆಕ್ಸ್‌ 1,481.63 ಅಂಕಗಳು ಏರಿಕೆ ಕಂಡಿತು. ತದನಂತರ ನಿರಂತರ ವಹಿವಾಟು ನಡೆಸುವ ಸಲುವಾಗಿ 443.27 ಅಂಕಗಳನ್ನು ಬಿಟ್ಟುಕೊಟ್ಟಿತ್ತು. ಆದಾಗ್ಯೂ ಬಿಎಸ್‌ಇ ಸೂಚ್ಯಾಂಕ ಶೇ.1.71 ರಷ್ಟು ಏರಿಕೆ ಕಂಡಿದ್ದು 26,424.51 ಅಂಕ ತಲುಪಿದೆ.

ಎನ್‌ಎಸ್‌ಇ ನಿಫ್ಟಿ ಸಹ ಶೇ.2.18 ರಷ್ಟು ವಹಿವಾಟು ನಡೆಸಿ 165.55 ಪಾಯಿಂಟ್ ಏರಿಕೆ ಕಂಡಿದೆ. ಅಲ್ಲದೆ, ಒಟ್ಟಾರೆ ಅಂಕಗಳು 7,775.80 ಕ್ಕೆ ತಲುಪಿದೆ. ಇಂದಿನ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಇಂಡಸ್ಇಂಡ್ ಬ್ಯಾಂಕ್, ಟೈಟಾನ್, ಎಲ್ ಅಂಡ್ ಟಿ, ಟಾಟಾ ಸ್ಟೀಲ್, ಏಷ್ಯನ್ ಪೇಂಟ್ ಮತ್ತು ಐಸಿಐಸಿಐ ಬ್ಯಾಂಕ್, ಎಚ್‌ಸಿಎಲ್ ಟೆಕ್, ಎಚ್‌ಯುಎಲ್, ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ ಕಂಪೆನಿಗಳು ಅಧಿಕ ಲಾಭ ಗಳಿಸಿವೆ.

ಹಿಂದಿನ ವಹಿವಾಟಿನಲ್ಲಿ ಬಿಎಸ್‌ಇ ಮಾನದಂಡವು ಶೇ.13.15 ಸರಾಸರಿಯಲ್ಲಿ 3,935 ಪಾಯಿಂಟ್‌ಗಳು ಕುಸಿದು 25,981.24 ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ಬಾರೋಮೀಟರ್ ನಿಫ್ಟಿ ಶೇ.12.98 ಸರಾಸರಿಯಲ್ಲಿ 1,135.20 ಪಾಯಿಂಟ್‌ ಕುಸಿದು 7,610.25 ಕ್ಕೆ ತಲುಪಿತ್ತು. ಕಳೆದ ಎರಡು ವಾರದಲ್ಲಿ ಭಾರತ ಕನಿಷ್ಟ 13 ಲಕ್ಷ ಕೋಟಿ ಹಣವನ್ನು ಷೇರುಪೇಟೆಯಲ್ಲಿ ಕಳೆದುಕೊಂಡಿತ್ತು. ಡಾಲರ್ ಎದುರಿನ ರೂಪಾಯಿ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು.

ಭಾರತ ಮಾತ್ರವಲ್ಲದೆ ಕೊರೋನಾ ಸೋಂಕಿನ ಪರಿಣಾಮವಾಗಿ ಅಮೆರಿಕ ಸೇರಿದಂತೆ ಯೂರೋಪ್ ಹಾಗೂ ಏಷ್ಯಾ ಖಂಡದ ಎಲ್ಲಾ ದೇಶಗಳ ಷೇರುಪೇಟೆ ಸೂಚ್ಯಾಂಕ ಪಾತಾಳಕ್ಕೆ ಕುಸಿದಿತ್ತು. ಈ ನಡುವೆ ಎಲ್ಲಾ ದೇಶದ ಸರ್ಕಾರಗಳೂ ಷೇರುಪೇಟೆ ಚೇತರಿಕೆಗೆ ಸಾಕಷ್ಟು ಕಾರ್ಯಕ್ರಮ ರೂಪಿಸಿದ್ದವು ಅದರ ಫಲ ಇಂದು ದಕ್ಕಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಕೊರೋನಾ ವೈರಸ್​ಗೆ ಜೀವವೇ ಇಲ್ಲ, ಹೀಗಾಗಿ ಅದನ್ನು ಕೊಲ್ಲೋದು ಕಷ್ಟ!; ಸಂಶೋಧನೆಯಲ್ಲಿ ಬಯಲಾಯ್ತು ಶಾಕಿಂಗ್​ ವಿಚಾರ

 
First published: