Budget 2020: ಬಜೆಟ್ ಮುನ್ನಾ ದಿನ ಷೇರುಪೇಟೆ ಮಿಂಚು; ಸೆನ್ಸೆಕ್ಸ್ 200 ಅಂಕ ಹೆಚ್ಚಳ

Union Budget 2020: ಭಾರತದ ಷೇರು ಹೂಡಿಕೆದಾರರು ಬಜೆಟ್ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಂತಿದೆ. ಅರ್ಥ ಸಮೀಕ್ಷೆಯ ವರದಿ ಸಕಾರಾತ್ಮಕ ಅಂಶವನ್ನು ವ್ಯಕ್ತಪಡಿಸಿರುವ ಸೂಚನೆ ಸಿಗುತ್ತಿದ್ದಂತೆಯೇ ಉತ್ಸಾಹ ಇಮ್ಮಡಿಸಿದೆ. ಸೆನ್ಸೆಕ್ಸ್ 200 ಅಂಕ ಹೆಚ್ಚಳವಾಗಿ ಮತ್ತೊಮ್ಮೆ 41 ಸಾವಿರ ಅಂಕಗಳ ಗಡಿ ದಾಟಿದೆ.

news18
Updated:February 10, 2020, 7:21 PM IST
Budget 2020: ಬಜೆಟ್ ಮುನ್ನಾ ದಿನ ಷೇರುಪೇಟೆ ಮಿಂಚು; ಸೆನ್ಸೆಕ್ಸ್ 200 ಅಂಕ ಹೆಚ್ಚಳ
ಎನ್​ಎಸ್​ಇ ನಿಫ್ಟಿ
  • News18
  • Last Updated: February 10, 2020, 7:21 PM IST
  • Share this:
ಬೆಂಗಳೂರು(ಜ. 31): ನಾಳೆ ಕೇಂದ್ರ ಬಜೆಟ್ ಮಂಡನೆಗೆ ಒಂದು ದಿನ ಮುನ್ನವಾದ ಇಂದು ಆರ್ಥಿಕ ಸಮೀಕ್ಷೆಯ ವರದಿ ಸಂಸತ್​ನಲ್ಲಿ ಮಂಡನೆಯಾಗುತ್ತಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಮತ್ತೆ ಪುಷ್ಟಿ ಸಿಗಬಹುದು. ಮುಂಬರುವ ಹಣಕಾಸು ವರ್ಷದಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ. 6ರಿಂದ 6.5 ಇರಬಹುದು ಎಂಬುದನ್ನು ಈ ಸಮೀಕ್ಷೆ ಅಂದಾಜು ಮಾಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಷೇರುಪೇಟೆಯ ಉತ್ಸಾಹ ಗರಿಗೆದರಿದೆ. ದೇಶದ ಪ್ರಮುಖ ಷೇರುಮಾರುಕಟ್ಟೆಯಾದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಸೂಚ್ಯಂಕ ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ 200 ಪಾಯಿಂಟ್ಸ್ ಹೆಚ್ಚಳ ಕಂಡಿದೆ.

ಜಾಗತಿಕ ಷೇರುಮಾರುಕಟ್ಟೆಗಳು ಹಿನ್ನಡೆ ಕಾಣುತ್ತಿರುವ ಹೊತ್ತಿನಲ್ಲಿ ಸೆನ್ಸೆಕ್ಸ್ ಹೆಚ್ಚಳವಾಗಿರುವುದು ಗಮನಾರ್ಹ. ಚೀನಾದಲ್ಲಿ ಕಾಣಿಸಿರುವ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಭೀತಿಗೆ ಸಿಲುಕಿಸಿದೆ. ಈವರೆಗೂ 200ಕ್ಕೂ ಹೆಚ್ಚು ಮಂದಿ ಈ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ಧಾರೆ. ವಿಶ್ವ ಆರೋಗ್ಯ ಸಂಸ್ಥೆಯು ನಿನ್ನೆಯಷ್ಟೇ ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಎಂದು ಘೋಷಿಸಿದೆ. ಇದು ವಿಶ್ವ ಮಟ್ಟದಲ್ಲಿ ಆರ್ಥಿಕವಾಗಿ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಷೇರು ಹೂಡಿಕೆದಾರರನ್ನು ಚಿಂತೆಗೀಡು ಮಾಡಿದೆ. ಅಂತೆಯೇ ಜಾಗತಿಕ ಷೇರುಪೇಟೆಯಲ್ಲಿ ಹೂಡಿಕೆದಾರರು ಬಂಡವಾಳ ಹಿಂಪಡೆದುಕೊಳ್ಳುತ್ತಿರುವ ಪ್ರವೃತ್ತಿ ಕಂಡುಬರುತ್ತಿದೆ.

ಇದನ್ನೂ ಓದಿ: ಸುಧಾರಿಸಲಿದೆ ಭಾರತದ ಆರ್ಥಿಕತೆ?; ಮುಂದಿನ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ. 6.5ಕ್ಕೆ ಏರಿಕೆ ಸಾಧ್ಯತೆ

ಆದರೆ, ಭಾರತದ ಷೇರು ಹೂಡಿಕೆದಾರರು ಬಜೆಟ್ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಂತಿದೆ. ಅರ್ಥ ಸಮೀಕ್ಷೆಯ ವರದಿ ಸಕಾರಾತ್ಮಕ ಅಂಶವನ್ನು ವ್ಯಕ್ತಪಡಿಸಿರುವ ಸೂಚನೆ ಸಿಗುತ್ತಿದ್ದಂತೆಯೇ ಉತ್ಸಾಹ ಇಮ್ಮಡಿಸಿದೆ. ಸೆನ್ಸೆಕ್ಸ್ 200 ಅಂಕ ಹೆಚ್ಚಳವಾಗಿ ಮತ್ತೊಮ್ಮೆ 41 ಸಾವಿರ ಅಂಕಗಳ ಗಡಿ ದಾಟಿದೆ. ಶುಕ್ರವಾರದ ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 51,035.80 ಅಂಕಗಳ ಮಟ್ಟ ಮುಟ್ಟಿತ್ತು. ಎನ್​ಎಸ್​ಇ ನಿಫ್ಟಿ ಕೂಡ ತುಸು ಹೆಚ್ಚಳ ಕಂಡಿದೆ. ಶೇ. 0.21ರಷ್ಟು ಅಂಕ ಹೆಚ್ಚಳವಾಗಿ 12,061.60 ಮಟ್ಟ ಮುಟ್ಟಿದೆ. ಏಷ್ಯಾದ ಇತರ ಷೇರುಮಾರುಕಟ್ಟೆಗಳೂ ಕೂಡ ಆಶಾದಾಯಕ ವ್ಯವಹಾರಗಳನ್ನ ಕಂಡಿವೆ.

ನಾಳೆಯ ಬಜೆಟ್​ನಲ್ಲಿ ಮೂಲಸೌಕರ್ಯ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ನಿಯೋಜಿಸುವ ಸಾಧ್ಯತೆ ಇದೆ. ಮಾರುಕಟ್ಟೆಗೆ ಹೆಚ್ಚಿನ ಹರಿವು ಬರುವ ನಿರೀಕ್ಷೆಯಲ್ಲಿ ವೈಯಕ್ತಿಕ ತೆರಿಗೆಯನ್ನೂ ಕಡಿತಗೊಳಿಸುವ ಸಾಧ್ಯತೆ ಇದೆ. ಇದೂ ಸೇರಿದಂತೆ ವಿವಿಧ ರೀತಿಯ ಸುಧಾರಣಾ ಕ್ರಮಗಳು, ಉತ್ತೇಜಕ ಪ್ಯಾಕೇಜ್​ಗಳನ್ನು ಘೋಷಿಸುವ ನಿರೀಕ್ಷೆಗಳೂ ಇವೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 31, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading