Sensex Update - 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಬೆನ್ನಲ್ಲೇ ಗರಿಗೆದರಿದ ಸೆನ್ಸೆಕ್ಸ್

ಸೆನ್ಸೆಕ್ಸ್ ಸೂಚ್ಯಂಕವಂತೂ ದಿನದ ವಹಿವಾಟಿನ ಆರಂಭದಲ್ಲಿ 1,474.35 ಅಂಕಗಳವರೆಗೆ ಹೆಚ್ಚಳ ಕಂಡಿತ್ತು. ಸೆನ್ಸೆಕ್ಸ್​ನಲ್ಲಿ ಎಕ್ಸಿಸ್ ಬ್ಯಾಂಕ್​ನ ಷೇರು ಮೌಲ್ಯ ಹೆಚ್ಚು ಲಾಭ ಪಡೆದಿದೆ.

ಸೆನ್ಸೆಕ್ಸ್

ಸೆನ್ಸೆಕ್ಸ್

  • News18
  • Last Updated :
  • Share this:
    ನವದೆಹಲಿ(ಮೇ 13): ಕೊರೋನಾ ವೈರಸ್ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಎದೆಗುಂದಿದ್ದ ಷೇರುಪೇಟೆ ಹೂಡಿಕೆದಾರರು ಇದೀಗ ಕೇಂದ್ರ ಸರ್ಕಾರದ ಉತ್ತೇಜಕ ಪ್ಯಾಕೇಜ್ ಘೋಷಣೆಯಿಂದ ಪುಟಿದೆದಿದ್ಧಾರೆ. ಇವತ್ತು ಬುಧವಾರ ಷೇರುಪೇಟೆ ಮಿಂಚಿದೆ. ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂತ ಬುಧವಾರ ಸಂಜೆಯ ಹೊತ್ತಿಗೆ 637.49 ಅಂಕ ಹೆಚ್ಚಿಸಿಕೊಂಡು 32,008.61 ಮಟ್ಟ ಮುಟ್ಟಿದೆ. ಅಂದರೆ ಶೇ. 2.03ರಷ್ಟು ಸೆನ್ಸೆಕ್ಸ್ ವೃದ್ಧಿಯಾಗಿದೆ. ಎನ್​ಎಸ್​ಇ ನಿಫ್ಟಿ ಕೂಡ ಶೇ. 2.03ರಷ್ಟು ಏರಿಕೆ ಕಂಡಿದೆ. 187 ಅಂಕ ಹೆಚ್ಚಳವಾಗಿ 9,383.55 ಮಟ್ಟ ತಲುಪಿದೆ.

    ಸೆನ್ಸೆಕ್ಸ್ ಸೂಚ್ಯಂಕವಂತೂ ದಿನದ ವಹಿವಾಟಿನ ಆರಂಭದಲ್ಲಿ 1,474.35 ಅಂಕಗಳವರೆಗೆ ಹೆಚ್ಚಳ ಕಂಡಿತ್ತು. ಸೆನ್ಸೆಕ್ಸ್​ನಲ್ಲಿ ಎಕ್ಸಿಸ್ ಬ್ಯಾಂಕ್​ನ ಷೇರು ಮೌಲ್ಯ ಹೆಚ್ಚು ಲಾಭ ಪಡೆದಿದೆ. ಅದರ ಬೆಲೆ ಶೇ. 7ರಷ್ಟು ಹೆಚ್ಚಾಗಿದೆ. ಇತರ ಬ್ಯಾಂಕಿಂಗ್ ಸಂಸ್ಥೆಗಳಾದ ಐಸಿಐಸಿಐ, ಎಸ್​ಬಿಐ, ಬಜಾಜ್ ಫೈನಾನ್ಸ್ ಸಂಸ್ಥೆಗಳ ಷೇರುಗಳೂ ಮೌಲ್ಯ ವೃದ್ಧಿಸಿಕೊಂಡಿವೆ. ಕಟ್ಟಡ ನಿರ್ಮಾಣ ವಲಯದ ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಎಲ್​ ಅಂಡ್ ಟಿ ಸಂಸ್ಥೆಗಳ ಷೇರುಗಳೂ ಮಿಂಚಿವೆ.

    ಇದನ್ನೂ ಓದಿ: Nirmala Sitharaman press meet - ಹೂಡಿಕೆ ಮಿತಿ, ವಹಿವಾಟು ಮಿತಿ ಹೆಚ್ಚಳ: ಸಣ್ಣ ಕೈಗಾರಿಕೆಗಳಿಗೆ ಪುಷ್ಟಿ

    ಇವತ್ತಿನ ವಹಿವಾಟಿನಲ್ಲಿ ನಷ್ಟ ಮಾಡಿಕೊಂಡಿದ್ದು ಕೇವಲ ನಾಲ್ಕು ಸಂಸ್ಥೆಗಳು ಮಾತ್ರವೇ. ನೆಸ್ಲೆ ಇಂಡಿಯಾ, ಸನ್ ಫಾರ್ಮಾ, ಹಿಂದೂಸ್ತಾನ್ ಯೂನಿಲಿವರ್ ಲಿ, ಭಾರ್ತಿ ಏರ್​ಟೆಲ್ ಸಂಸ್ಥೆಗಳ ಷೇರುಗಳ ಮೌಲ್ಯ ಸರಾಸರಿಯಾಗಿ ಶೆ. 5.38ರಷ್ಟು ಕಡಿಮೆಗೊಂಡಿದೆ.

    First published: