TRS MLA S Ramalinga Reddy: ಟಿಆರ್​ಎಸ್​ ಹಿರಿಯ ನಾಯಕ ಮತ್ತು ಸಿಎಂ ಕೆಸಿಆರ್​​ ಆಪ್ತ ಶಾಸಕ ಎಸ್​​​. ರಾಮಲಿಂಗಾ ರೆಡ್ಡಿ ನಿಧನ

ಇನ್ನು, ಸಿಎಂ ಕೆ. ಚಂದ್ರಶೇಖರ್​​ ರಾವ್​​ ತಮ್ಮ ಆಪ್ತನ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇಡೀ ದುಬ್ಬಾಕ ಕ್ಷೇತ್ರ ಮತ್ತು ಎಸ್​. ರಾಮಲಿಂಗಾ ರೆಡ್ಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

news18-kannada
Updated:August 6, 2020, 4:59 PM IST
TRS MLA S Ramalinga Reddy: ಟಿಆರ್​ಎಸ್​ ಹಿರಿಯ ನಾಯಕ ಮತ್ತು ಸಿಎಂ ಕೆಸಿಆರ್​​ ಆಪ್ತ ಶಾಸಕ ಎಸ್​​​. ರಾಮಲಿಂಗಾ ರೆಡ್ಡಿ ನಿಧನ
ಟಿಆರ್​ಎಸ್​ ಶಾಸಕ ಎಸ್​​. ರಾಮಲಿಂಗಾ ರೆಡ್ಡಿ
  • Share this:
ಹೈದರಾಬಾದ್​(ಆ.06): ಮುಖ್ಯಮಂತ್ರಿ ಕೆ. ಚಂದ್ರಶೇಖರ್​​​ ರಾವ್ ಆಪ್ತ ಮತ್ತು​​ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್​ಎಸ್​) ಹಿರಿಯ ನಾಯಕರಾದ ಶಾಸಕ ಎಸ್​​. ರಾಮಲಿಂಗಾ ರೆಡ್ಡಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಟಿಆರ್​ಎಸ್​ನ  ಸೀನಿಯರ್​ ಲೀಡರ್ ರಾಮಲಿಂಗಾ ರೆಡ್ಡಿ​ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಇನ್ನು, ಸೋಲಿಪೇಟ ರಾಮಲಿಂಗಾ ರೆಡ್ಡಿ ಸಿಎಂ ಕೆಸಿಆರ್​​ಗೆ ಆಪ್ತರು. ಮೂಲತ ಪತ್ರಕರ್ತರಾದ ಇವರು ರಾಜಕೀಯಕ್ಕೆ ಪ್ರವೇಶಿಸಿ ದುಬ್ಬಾಕ ಕ್ಷೇತ್ರದಿಂದ ಜನರ ಆಶೀರ್ವಾದಿಂದ ಸುಮಾರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 52 ವರ್ಷದ ರಾಮಲಿಂಗಾ ರೆಡ್ಡಿ ದಂಪತಿಗೆ ಒಬ್ಬರು ಮಕ್ಕಳಿದ್ದಾರೆ.

ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್​. ರಾಮಲಿಂಗಾ ರೆಡ್ಡಿ ಅವರನ್ನು ಹೈದರಾಬಾದ್​​ನಲ್ಲಿ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದರು. ಆದರಿಂದು, ಬೆಳಿಗ್ಗೆ ಚಿಕಿತ್ಸೆ ಫಲಿಸದೇ ಹೃದಯಾಘಾದಿಂದ ತಮ್ಮ ಕುಟುಂಬವನ್ನು ಅಗಲಿದ್ದಾರೆ.

ಇದನ್ನೂ ಓದಿ: Karnataka SSLC Result 2020: ಕರ್ನಾಟಕ ಎಸ್​​ಎಸ್​​ಎಲ್​​ಸಿ ಫಲಿತಾಂಶ: ಇನ್ನೂ ದಿನಾಂಕ ನಿಗದಿಯಾಗಿಲ್ಲ - ಸಚಿವ ಸುರೇಶ್​ ಕುಮಾರ್​

ಇನ್ನು, ಸಿಎಂ ಕೆ. ಚಂದ್ರಶೇಖರ್​​ ರಾವ್​​ ತಮ್ಮ ಆಪ್ತನ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇಡೀ ದುಬ್ಬಾಕ ಕ್ಷೇತ್ರ ಮತ್ತು ಎಸ್​. ರಾಮಲಿಂಗಾ ರೆಡ್ಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Published by: Ganesh Nachikethu
First published: August 6, 2020, 4:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading