MA Khan Quits Congress: ಗುಲಾಂ ನಬಿ ಆಜಾದ್ ಬೆನ್ನಲ್ಲೇ ಕೈಕೊಟ್ಟ ಮತ್ತೊಬ್ಬ ನಾಯಕ! ರಾಹುಲ್ ಗಾಂಧಿ ವಿರುದ್ಧ ಗರಂ

ಕಾಂಗ್ರೆಸ್‍ಗೆ ಹಿನ್ನಡೆ ಮೇಲೆ ಹಿನ್ನಡೆ ಆಗುತ್ತಿದೆ. ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಹಿರಿಯ ನಾಯಕ ಮತ್ತು ಮಾಜಿ ರಾಜ್ಯಸಭಾ ಸಂಸದ ಎಂಎ ಖಾನ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್​ಗೆ ಎಂ.ಎ.ಖಾನ್ ರಾಜೀನಾಮೆ

ಕಾಂಗ್ರೆಸ್​ಗೆ ಎಂ.ಎ.ಖಾನ್ ರಾಜೀನಾಮೆ

 • Share this:
  ಕಾಂಗ್ರೆಸ್‍ಗೆ (Congress) ಹಿನ್ನಡೆ ಮೇಲೆ ಹಿನ್ನಡೆ ಆಗುತ್ತಿದೆ. ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಹಿರಿಯ ನಾಯಕ ಮತ್ತು ಮಾಜಿ ರಾಜ್ಯಸಭಾ ಸಂಸದ ಎಂಎ ಖಾನ್ (MA Khan) ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ (Resigned) ನೀಡಿದ್ದಾರೆ. ಹಿರಿಯರೊಂದಿಗೆ ಹೇಗೆ ವರ್ತಿಸಬೇಕು ಎಂದು ರಾಹುಲ್ ಗಾಂಧಿಗೆ (Rahul Gandhi) ತಿಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು. ತೆಲಂಗಾಣದಲ್ಲಿ(Telangana) ಮಾತನಾಡಿದ ಎಂ.ಎ.ಖಾನ್ ಅವರು, ರಾಹುಲ್ ಗಾಂಧಿಯನ್ನು ಪಕ್ಷದ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಿಸಿದ ನಂತರ ಹಲವು ವಿಷಯಗಳು ಇಳಿಮುಖವಾಗಲು ಪ್ರಾರಂಭವಾದವು. ಅವರ ಕ್ರಮಗಳು ಕಾಂಗ್ರೆಸ್‍ನ "ಅಧಃಪತನಕ್ಕೆ" ಕಾರಣವಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ನಾನು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದೇನೆ
  ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯಸಭಾ ಮಾಜಿ ಸಂಸದ ಎಂ.ಎ.ಖಾನ್ ಅವರು, "ನಾನು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದೇನೆ. ಪಕ್ಷದ ಸಮಿತಿಯ ಉಪಾಧ್ಯಕ್ಷ ಸ್ಥಾನ ರಾಹುಲ್ ಗಾಂಧಿ ನಿಭಾಯಿಸಿದ ನಂತರ, ಹಲವು ವಿಷಯಗಳು ಕೆಳಕ್ಕೆ ಹೋಗಲಾರಂಭಿಸಿದವು.

  ರಾಹುಲ್ ಗಾಂಧಿ ತಮ್ಮದೇ ಆದ ವಿಭಿನ್ನ ಚಿಂತನೆಯನ್ನು ಹೊಂದಿದ್ದಾರೆ. ಬ್ಲಾಕ್ ಮಟ್ಟದಿಂದ ಬೂತ್ ಮಟ್ಟಕ್ಕೆ, ಅದು ಯಾವುದೇ ಸದಸ್ಯರೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ.

  ರಾಹುಲ್‍ಗೆ ಹಿರಿಯರ ಜೊತೆ ವರ್ತಿಸಲು ಗೊತ್ತಿಲ್ಲ
  ದಶಕಗಳ ಕಾಲ ಪಕ್ಷವನ್ನು ಬಲಪಡಿಸಿದ ಪಕ್ಷದ ಹಿರಿಯ ಸದಸ್ಯರೂ ಈಗ ಕಾಂಗ್ರೆಸ್ ತೊರೆಯುವ ಹಂತಕ್ಕೆ ತಲುಪಿದ್ದಾರೆ. ಹಿರಿಯ ಸದಸ್ಯರೊಂದಿಗೆ ಹೇಗೆ ವರ್ತಿಸಬೇಕು ಎಂದು ರಾಹುಲ್ ಗಾಂಧಿ ಅವರಿಗೆ ತಿಳಿದಿಲ್ಲ. ಇದರ ಪರಿಣಾಮ ಕಾಂಗ್ರೆಸ್ ಪತನಕ್ಕೆ ಕಾರಣವಾಯಿತು ಎಂದು ರಾಜ್ಯಸಭಾ ಮಾಜಿ ಸಂಸದ ಎಂ.ಎ.ಖಾನ್ ಹೇಳಿದ್ದಾರೆ. ಜೊತೆಗೆ, ಹಲವಾರು ಉನ್ನತ ಮಟ್ಟದ ನಾಯಕರು ಈ ವರ್ಷ ಕಾಂಗ್ರೆಸ್ ತೊರೆದಿದ್ದಾರೆ, ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಕಷ್ಟ ಆಗಲಿದೆ ಎಂದಿದ್ದಾರೆ.

  ಇದನ್ನೂ ಓದಿ: Ghulam Nabi Azad Resigns: ರಾಹುಲ್​ ಗಾಂಧಿಯಿಂದಲೇ ಕಾಂಗ್ರೆಸ್ ಹಾಳಾಯ್ತು; ಗುಡ್ ಬೈ ಹೇಳಿದ ಹಿರಿಯ ನಾಯಕ

  ಗುಲಾಂ ನಬಿ ಆಜಾದ್ ರಾಜೀನಾಮೆ
  ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು, ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

  ಕಾಂಗ್ರೆಸ್ ತನ್ನ 'ಭಾರತ್ ಜೋಡೋ ಯಾತ್ರೆ'ಗೆ ಸಜ್ಜಾಗುತ್ತಿರುವ ಸಮಯದಲ್ಲಿ, ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸೆಪ್ಟೆಂಬರ್ 7 ರಂದು ಕನ್ಯಾ ಕುಮಾರಿಯಿಂದ 148 ದಿನಗಳ ಪಾದಯಾತ್ರೆ ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ರಾಷ್ಟ್ರವನ್ನು ಮತ್ತೆ ಒಂದುಗೂಡಿಸುವ ಗುರಿಯೊಂದಿಗೆ, ಪಕ್ಷವು ತನ್ನ ನಾಯಕರ ಚಾತುರ್ಯವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ.

  ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಆಜಾದ್ ಅವರು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿದ್ದಾರೆ ಹಾಗೂ ಪಕ್ಷದ ದುಸ್ಥಿತಿಗೆ ನೇರವಾಗಿ ಅವರನ್ನು ದೂಷಿಸಿದ್ದಾರೆ.

  ಇದನ್ನೂ ಓದಿ: Ghulam Nabi Azad: ಇಂದಿರಾ- ರಾಜೀವ್ ಆಪ್ತರಾಗಿದ್ದ ಆಜಾದ್ ರಾಹುಲ್​ ಗಾಂಧಿಗೆ 'ಅಪರಿಚಿತ' ಆಗಿದ್ದು ಹೇಗೆ?

  ‘ರಿಮೋಟ್ ಕಂಟ್ರೋಲ್’ ಮಾದರಿ

  ಗುಲಾಂ ನಬಿ ಆಜಾದ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅತ್ಯಂತ ನಿಕಟರಾಗಿದ್ದರು. ಆದರೆ ರಾಜೀನಾಮೆ ಪತ್ರದಲ್ಲಿ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯುಪಿಎ ಸರ್ಕಾರದ ಸಾಂಸ್ಥಿಕ ಸಮಗ್ರತೆಯನ್ನು ನಾಶಪಡಿಸಿದ ‘ರಿಮೋಟ್ ಕಂಟ್ರೋಲ್’ ಮಾದರಿ ಈಗ ಕಾಂಗ್ರೆಸ್ ನಲ್ಲಿ ಜಾರಿಯಾಗಿದೆ ಎಂದು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
  Published by:Savitha Savitha
  First published: