ಹಿರಿಯ ಪತ್ರಕರ್ತ ಕುಲ್​ದೀಪ್​ ನಯ್ಯರ್​​ ನಿಧನ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ


Updated:August 23, 2018, 11:07 AM IST
ಹಿರಿಯ ಪತ್ರಕರ್ತ ಕುಲ್​ದೀಪ್​ ನಯ್ಯರ್​​ ನಿಧನ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ

Updated: August 23, 2018, 11:07 AM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.23): ಭಾರತದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದ ಹಿರಿಯ ಪತ್ರಕರ್ತ ಕುಲ್​ದೀಪ್​ ನಯ್ಯರ್​​ ​ ತಮ್ಮ 95ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಮೂರು ದಿನಗಳಿಂದ ದೆಹಲಿಯ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿದ್ದ ಕುಲ್​ದೀಪ್​ರವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತೆನ್ನಲಾಗಿದೆ. ಬುಧವಾರ ರಾತ್ರಿ ಸುಮಾರು 12.30ರ ಸಮಯಕ್ಕೆ ಕುಲ್​ದೀಪ್​ರವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರ ಅಂತಿಮ ಕ್ರಿಯೆ 1 ಗಂಟೆಗೆ ಲೋಧಿ ರಸ್ತೆಯಲ್ಲಿರುವ ಘಾಟ್​ನಲ್ಲಿ ಅವರ ಅಂತಿಮ ಕ್ರಿಯೆ ನಡೆಯಲಿದೆ.

ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಮರ್ಶಕ ಕುಲ್​ದೀಪ್​ ನಯ್ಯರ್​​ ​ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ತಮ್ಮ ಟ್ವಿಟರ್​ನಲ್ಲಿ "ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಮ್ಮ ಕಠಿಣ ನಿಲುವು, ಜನಸೇವೆ ಹಾಗೂ ಉತ್ತಮನ ಭಾರತಕ್ಕಾಗಿ ನೀವು ತೋರಿದ ಬದ್ಧತೆಯನ್ನು ಯಾವತ್ತೂ ನೆಪಿಸಿಕೊಳ್ಳಲಾಗುತ್ತದೆ" ಎಂದು ಮೋದಿ ಬರೆದುಕೊಂಡಿದ್ದಾರೆ.

ಕುಲ್​ದೀಪ್​ ನಯ್ಯರ್​​ ​ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಭಾರತ ಸರ್ಕಾರದ ಮಾಧ್ಯಮ ಸಲಹಾ ಅಧಿಕಾರಿಯಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು ಯುಎನ್​ಐ, ಪಿಐಬಿ, 'ದ ಸ್ಟೇಟ್ಸ್​ಮನ್​', 'ಇಂಡಿಯನ್​ ಎಕ್ಸ್​ಪ್ರೆಸ್​'ನಲ್ಲಿ ದೀರ್ಘ ಕಾಲ ಕಾರ್ಯ ನಿರ್ವಹಿಸಿದ್ದರು.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕುಲ್​ದೀಪ್​ ನಯ್ಯರ್​​ ​ರವರಿಗೆ ಪರ್ತಿಕೋದ್ಯಮ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. 2015ರ ನವೆಂಬರ್​ 25ರಂದು ಹಿರಿಯ ಪತ್ರಕರ್ತ ಹಾಗೂ ಲೇಖಕ ಕುಲ್​ದೀಪ್​ ನಾಯರ್​ರಿಗೆ ರಾಮನಾಥ್​ ಗೋಯೆಂಕಾ ಸ್ಮರಣಾ ಪುರಸ್ಕಾರ ನೀಡಿ ಸನ್ಮಾನಿಸಲಾಗಿತ್ತು.1997ರಲ್ಲಿ ಅವರು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿ ಚುನಾಯಿತರಾಗಿದ್ದರು.
First published:August 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ