ಹೆಂಡತಿ ಮೇಲೆ ಅಮಾನುಷ ಹಲ್ಲೆ ಮಾಡಿದ ಎಡಿಜಿಪಿ; ವಿಡಿಯೋ ವೈರಲ್​

viral video: ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಅಧಿಕಾರಿಯೊಬ್ಬರ ಈ ರೀತಿ ಅತಿರೇಕದ ವರ್ತನೆ  ತೋರಿರುವುದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಹೆಂಡತಿ ಮೇಲೆ ದೌರ್ಜನ್ಯ ನಡೆಸಿದ ಅಧಿಕಾರಿ

ಹೆಂಡತಿ ಮೇಲೆ ದೌರ್ಜನ್ಯ ನಡೆಸಿದ ಅಧಿಕಾರಿ

 • Share this:
  ಭೋಪಾಲ್​ (ಸೆ.28): ಹೆಚ್ಚುವರಿ ಪೊಲೀಸ್​​ ಮಹಾ ನಿರ್ದೇಶಕ ಅಧಿಕಾರಿಯೊಬ್ಬರು ತಮ್ಮ ಹೆಂಡತಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಉನ್ನತ ಅಧಿಕಾರಿಯೇ ಮಹಿಳೆ ಮೇಲೆ ಈ ರೀತಿ ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವುದಕ್ಕೆ  ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ಕೇಳಿ ಬಂದಿದೆ. ಅಧಿಕಾರಿಯ ಈ ವರ್ತನೆ ಸರ್ಕಾರಕ್ಕೆ ಕೂಡ ಮುಜುಗರ ಉಂಟು ಮಾಡಿದ್ದು,  ಅವರನ್ನು ಸರ್ಕಾರದ ಸೇವೆಯಿಂದ ಮುಕ್ತಗೊಳಿಸಲಾಗಿದೆ. ಮಧ್ಯಪ್ರದೇಶದ ಎಡಿಜಿಪಿ  ಪುರುಷೋತ್ತಮ ಶರ್ಮಾ ದೌರ್ಜನ್ಯ ಎಸಗಿದ ವ್ಯಕ್ತಿ. ಭೋಪಾಲ್​ನ  ತಮ್ಮ ಮನೆಯಲ್ಲಿ ಹೆಂಡತಿಯ ಕುತ್ತಿಗೆ ಹಿಡಿದು ಹೊಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರಯಾಗಿದ್ದು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಶರ್ಮಾ ಅವರ ಹೆಂಡತಿ ವಿವಾಹೇತರ ಸಂಬಂಧ ಹೊಂದಿದ್ದು, ಈ ಹಿನ್ನಲೆ ಅವರು ಈ ಹಲ್ಲೆ ನಡೆಸಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ.

  ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಅಧಿಕಾರಿಯೊಬ್ಬರ ಈ ರೀತಿ ಅತಿರೇಕದ ವರ್ತನೆ  ತೋರಿರುವುದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಈ ಪ್ರಕರಣ ಮಾಧ್ಯಮದ ಮುಂದೆ ಬರುತ್ತಿದ್ದಂತೆ ಇದನ್ನು ಅವರು ಅಲ್ಲಗಳೆದರು. ಅಲ್ಲದೇ ಇದು ಕೌಟಂಬಿಕ ಕಲಹವಾಗಿದೆ ಎಂದು ಸಮರ್ಥನೆ ಮಾಡಿಕೊಂಡರು.  ನಾವು ಮದುವೆಯಾಗಿ 32ವರ್ಷ ಕಳೆದಿದೆ. 2008ರಲ್ಲಿ ನನ್ನ ಹೆಂಡತಿ ನನ್ನ ವಿರುದ್ಧ ದೂರು ದಾಖಲಿಸಿದ್ದರು. ಆದರೆ, ಆ ವೇಳೆ ಅವರು ನನ್ನ ಜೊತೆಯಲ್ಲಿಯೇ ವಾಸಿಸುತ್ತಿದ್ದ  ಎಲ್ಲಾ ಸೌಲಭ್ಯ ಅನುಭವಿಸಿದ್ದಳು.  ಅಲ್ಲದೇ ನನ್ನ ಹಣದಲ್ಲಿಯೇ  ವಿದೇಶ  ಪ್ರಯಾಣ ಮಾಡಿದ್ದಳು ಎಂದು ಶರ್ಮಾ ಎಎನ್​ಐಗೆ ತಿಳಿಸಿದ್ದಾರೆ.  ಅಷ್ಟೇ ಅಲ್ಲದೇ, ತನ್ನ ಮೇಲೆ ಕಣ್ಣಿಡುವ ಸಲುವಾಗಿ ತನ್ನ ಹೆಂಡತಿ ಮನೆಯಲ್ಲಿ ಕ್ಯಾಮೆರಾವನ್ನು ಅಳವಡಿಸಿದ್ದಳು ಎಂದಿದ್ದಾರೆ. ಅಲ್ಲದೇ, ತಮ್ಮ ಹೆಂಡತಿ ಮೇಲೆ ತೋರಿರುವ ದೌರ್ಜನ್ಯವನ್ನು ಶರ್ಮಾ ಸಮರ್ಥಿಸಿಕೊಂಡಿದ್ದಾರೆ.


  ಇನ್ನು  ಈ ಘಟನೆಯನ್ನು ಶಿವಸೇನಾ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಖಂಡಿಸಿದ್ದು, ಮಹಿಳೆಯೊಬ್ಬಳನ್ನು ಪುರುಷ ಆಕೆಯ ಆಸ್ತಿಯಂಬಂತೆ ಯೋಚಿಸಿ ಆಕೆ ವಿರುದ್ಧ ಅಸಭ್ಯ ವರ್ತನೆ ತೋರುವುದು ಖಂಡನೀಯ. ಕಾನೂನು ಕಾಪಾಡುವವರೇ ಈ ರೀತಿ ಮಾತನಾಡಿ, ದೌರ್ಜನ್ಯ ನಡೆಸಿದರೆ ಸಮಾಜದ ಗತಿಯೇನು. ಇದೊಂದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

  ನಟಿ ಖುಷ್ಬೂ ಸುಂದರ್​, ಬಾಲಿವುಡ್​ ನಿರ್ದೇಶಕಿ ಫಾರನ್​ ಅಖ್ತರ್​, ಸೇರಿದಂತೆ ಹಲವರು ಅಧಿಕಾರಿಯ ಈ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  Published by:Seema R
  First published: