Digvijay Singh: ಹಿಂದುತ್ವ ಅನ್ನೋದು ಧರ್ಮವಲ್ಲ, ಬಜರಂಗ ದಳ ಗೂಂಡಾಗಳ ಗುಂಪು: ದಿಗ್ವಿಜಯ್ ಸಿಂಗ್‌

ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌

ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌

ಬಿಜೆಪಿ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬಜರಂಗದಳವನ್ನು ಬಜರಂಗ ಬಲಿ (ಹನುಮಾನ್) ಜೊತೆ ಸಮೀಕರಿಸುತ್ತಿರುವುದು ನೋವಿನ ಸಂಗತಿ ಎಂದು ಹೇಳಿರುವ ದಿಗ್ವಿಜಯ್ ಸಿಂಗ್, ಬಜರಂಗ ದಳವನ್ನು ಬಜರಂಗ ಬಲಿಯೊಂದಿಗೆ ಸಮೀಕರಿಸುವುದು ದೇವರಿಗೆ ಅಗೌರವ ತೋರಿದಂತಾಗುತ್ತದೆ ಎಂದು ಹೇಳಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ: ಹಿಂದುತ್ವ (Hindutva) ಅನ್ನೋದು ಧರ್ಮ ಅಲ್ಲ, ತನ್ನ ಸಿದ್ಧಾಂತವನ್ನು ಒಪ್ಪದವರ ಮೇಲೆ ದಾಳಿ, ಹಲ್ಲೆ ಮಾಡುವ ಹಿಂದುತ್ವ ಧರ್ಮವಾಗಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ (Congress) ಹಿರಿಯ ನಾಯಕ ದಿಗ್ವಿಜಯ್ ಸಿಂಗ್ (Digvijay Singh) ಪ್ರತಿಪಾದಿಸಿದ್ದಾರೆ. ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್, ವಿಶ್ವ ಹಿಂದೂ ಪರಿಷತ್ತಿನ ಯುವ ಘಟಕವಾದ ಬಜರಂಗದಳವನ್ನು ‘ಗೂಂಡಾಗಳ ಗುಂಪು’ ಎಂದು ಟೀಕಿಸಿದರು.


‘ನಮ್ಮದು ಸನಾತನ ಧರ್ಮ, ನಾವು ಹಿಂದುತ್ವವನ್ನು ಧರ್ಮವೆಂದು ಪರಿಗಣಿಸುವುದಿಲ್ಲ’ ಎಂದಿರುವ ದಿಗ್ವಿಜಯ್ ಸಿಂಗ್, ಎಲ್ಲರಿಗೂ ಸಾಮರಸ್ಯ ಮತ್ತು ಕಲ್ಯಾಣವನ್ನು ಬೋಧಿಸುವ ಸನಾತನ ಧರ್ಮವನ್ನು ನಾನು ನಂಬುತ್ತೇನೆ. ‘ಧರ್ಮ್ ಕಿ ಜೈ ಹೋ, ಅಧರ್ಮ್ ಕಾ ನಾಶ್ ಹೋ, ಪ್ರಾಣಿಯೋ ಮೇ ಸದ್ಧ್ಭಾವನಾ ಹೋ, ವಿಶ್ವ ಕಾ ಕಲ್ಯಾಣ್ ಹೋ’ ಮುಂತಾದ ಘೋಷಣೆಗಳು ಸನಾತನ ಧರ್ಮದ ಕೂಟಗಳನ್ನು ಗುರುತಿಸುತ್ತವೆ. ಇದು ಸನಾತನ ಧರ್ಮ. ಆದರೆ ಹಿಂದುತ್ವದ ವಿಷಯದಲ್ಲಿ ಹಾಗಲ್ಲ. ಹಿಂದುತ್ವವೆಂದರೆ, ಒಪ್ಪದವರನ್ನು ಲಾಠಿಯಿಂದ ಹೊಡೆಯಿರಿ, ಅವರ ಮನೆಗಳನ್ನು ಕೆಡವಿರಿ, ಅವರ ಮೇಲೆ ದಾಳಿ ಮಾಡಿ ಮುಂತಾದವುಗಳನ್ನು ಹೇಳಿಕೊಡುತ್ತದೆ ಎಂದು ಹೇಳಿದರು.


ಇದನ್ನೂ ಓದಿ: Narendra Modi: 396 ಲೋಕಸಭಾ ಕ್ಷೇತ್ರಗಳು, 51 ಸಮಾವೇಶ! 1 ತಿಂಗಳಲ್ಲಿ 1 ಲಕ್ಷ ಮನೆಗೆ ಮೋದಿ ಸಂದೇಶ ತಲುಪಿಸಲು ಬಿಜೆಪಿ ನಿರ್ಧಾರ


'ನರೇಂದ್ರ ಮೋದಿ ಕ್ಷಮೆ ಕೇಳಲಿ'


ಭಾರತೀಯ ಜನತಾ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬಜರಂಗದಳವನ್ನು ಬಜರಂಗ ಬಲಿ (ಹನುಮಾನ್) ಜೊತೆ ಸಮೀಕರಿಸುತ್ತಿರುವುದು ನೋವಿನ ಸಂಗತಿ ಎಂದು ಹೇಳಿರುವ ದಿಗ್ವಿಜಯ್ ಸಿಂಗ್, ಬಜರಂಗ ದಳವನ್ನು ಬಜರಂಗ ಬಲಿಯೊಂದಿಗೆ ಸಮೀಕರಿಸುವುದು ದೇವರಿಗೆ ಅಗೌರವ ತೋರಿದಂತಾಗುತ್ತದೆ. ಹೀಗಾಗಿ ನೀವು ಕ್ಷಮೆಯನ್ನು ಕೋರಬೇಕು ಎಂದು ಆಗ್ರಹಿಸಿದರಲ್ಲದೇ, ಈ ಗೂಂಡಾಗಳ ಗುಂಪು (ಭಜರಂಗದಳ) ಜಬಲ್ಪುರ ಕಾಂಗ್ರೆಸ್ ಸಮಿತಿಯ ಕಚೇರಿಗೆ ಮೇ 4 ರಂದು ನುಗ್ಗಿ ಕಚೇರಿಯನ್ನು ಧ್ವಂಸಗೊಳಿಸಿದೆ ಎಂದು ಆರೋಪಿಸಿದ್ದಾರೆ.


ನಾವು ಭರವಸೆ ಈಡೇರಿಕೆಗೆ ಬದ್ಧ


ಕರ್ನಾಟಕದಲ್ಲಿ ಬಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್‌ನ ಚುನಾವಣಾ ಭರವಸೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಉತ್ತರಿಸಿದ ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಪಕ್ಷ ಸಂವಿಧಾನ, ನಿಯಮಗಳು ಮತ್ತು ಕಾನೂನುಗಳನ್ನು ಅನುಸರಿಸುತ್ತದೆ. ದ್ವೇಷವನ್ನು ಹರಡುವ ಹೇಳಿಕೆಗಳನ್ನು ನೀಡುವ ಯಾವುದೇ ಧರ್ಮವನ್ನು ಲೆಕ್ಕಿಸದೆ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ನೀಡಿದೆ. ನಾವು ಅದಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.


ಇದನ್ನೂ ಓದಿ: Mamata Banerjee: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡ್ತೀವಿ, ಆದರೆ ಷರತ್ತು ವಿಧಿಸಿದ ಮಮತಾ ಬ್ಯಾನರ್ಜಿ!


ಬಜರಂಗದಳ-ಪಿಎಫ್‌ಐ ವಿರುದ್ಧ


ಇತ್ತೀಚೆಗೆ ನಡೆದ ಕರ್ನಾಟಕ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ಬಜರಂಗದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ದೃಢ ಮತ್ತು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳಲು ಬದ್ಧವಾಗಿದೆ ಎಂದು ಹೇಳಿತ್ತು. ಆ ನಂತರ ವಿಷಯವು ಮಾಧ್ಯಮದಲ್ಲಿ ವಿವಾದಾತ್ಮಕ ಸ್ವರೂಪವನ್ನು ಪಡೆದು ಬಿಜೆಪಿಗರು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವಂತೆ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಚುನಾವಣೆಯ ಪ್ರಚಾರದ ಭಾಷಣಗಳಲ್ಲಿ ಜೈ ಭಜರಂಗ ಬಲಿ ಘೋಷಣೆ ಕೂಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು.


top videos



    ಮೇ 13ರಂದು ಕರ್ನಾಟಕ ಚುನಾವಣೆಯ ಫಲಿತಾಂಶ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್, ಅಮಿತ್ ಶಾ ಆದಿಯಾಗಿ ಬಿಜೆಪಿಯ ಘಟಾನಘಟಿ ರಾ‍ಷ್ಟ್ರ ಮಟ್ಟದ ನಾಯಕರು ಬಂದು ಪ್ರಚಾರ ನಡೆಸಿದ್ದರೂ ಕೂಡ ಬಿಜೆಪಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿತ್ತು.

    First published: