• Home
  • »
  • News
  • »
  • national-international
  • »
  • Train Booking: ಹಿರಿಯ ನಾಗರಿಕರಿಗೆ ರೈಲು ಪ್ರಯಾಣ ದರದಲ್ಲಿ ಮತ್ತೆ ಸಿಗಲಿದೆಯಂತೆ ರಿಯಾಯಿತಿ!

Train Booking: ಹಿರಿಯ ನಾಗರಿಕರಿಗೆ ರೈಲು ಪ್ರಯಾಣ ದರದಲ್ಲಿ ಮತ್ತೆ ಸಿಗಲಿದೆಯಂತೆ ರಿಯಾಯಿತಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸುಮಾರು ಎರಡೂವರೆ ವರ್ಷಗಳ ಹಿಂದೆ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಹಿರಿಯ ನಾಗರಿಕರ ವಿವಿಧ ವರ್ಗಗಳಲ್ಲಿ ರದ್ದುಗೊಳಿಸಲಾದ ರಿಯಾಯಿತಿಗಳನ್ನು ಮತ್ತೆ ಪರಿಶೀಲಿಸಬೇಕು ಎಂದು ಸಮಿತಿ ಹೇಳಿದೆ.

  • Share this:

ನಮ್ಮ ದೇಶದಲ್ಲಿ ಹಿರಿಯ ನಾಗರಿಕರಿಗೆ ರೈಲುಗಳಲ್ಲಿ (Train) ಪ್ರಯಾಣಿಸುವಾಗ ಪ್ರಯಾಣ ದರದಲ್ಲಿ ಸ್ವಲ್ಪ ರಿಯಾಯಿತಿ ಇರುತ್ತದೆ ಅನ್ನೋ ವಿಚಾರ ನಮಗೆ ಗೊತ್ತೇ ಇದೆ. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗವು ಉಲ್ಬಣಗೊಳ್ಳುತ್ತಿದ್ದಾಗ ಭಾರತೀಯ ರೈಲ್ವೆಯು ವಿವಿಧ ವಿಭಾಗಗಳಲ್ಲಿ ಹಿರಿಯ ನಾಗರಿಕರಿಗೆ (Senior Citizen)  ರಿಯಾಯಿತಿಗಳನ್ನು ನೀಡುವುದನ್ನು ನಿಲ್ಲಿಸಿತ್ತು. ಆದರೆ ಈ‌ಗ ಮತ್ತೆ ಈ ರಿಯಾಯಿತಿಗಳು ನಮ್ಮ ಹಿರಿಯ ನಾಗರಿಕರಿಗೆ ಸಿಗುವ ಅವಕಾಶಗಳು (Opportunity) ಕಾಣಿಸುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಹೌದು.. ಈ ರೈಲುಗಳಲ್ಲಿ ಆಗಾಗ್ಗೆ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ ನೋಡಿ. ಭಾರತೀಯ ರೈಲ್ವೆ ಶೀಘ್ರದಲ್ಲಿಯೇ ಹಿರಿಯ ನಾಗರಿಕರಿಗೆ ಮೊದಲು ನೀಡಲಾಗುತ್ತಿದ್ದ ರಿಯಾಯಿತಿಗಳನ್ನು ಪುನಃಸ್ಥಾಪಿಸಲು ಯೋಜಿಸಬಹುದಾಗಿದೆ. ಇದಲ್ಲದೆ, ಅವರು ಈ ಸೌಲಭ್ಯವನ್ನು ಪಡೆಯಲು ಅರ್ಹತಾ ಮಾನದಂಡಗಳಲ್ಲಿ ಕೆಲವು ಬದಲಾವಣೆಗಳನ್ನು ಸಹ ಇದರಲ್ಲಿ ಗಮನಿಸಬಹುದು ಎಂದು ಹೇಳಲಾಗುತ್ತಿದೆ.


ಕೋವಿಡ್-19 ಸಂದರ್ಭದಲ್ಲಿ ರದ್ದುಗೊಳಿಸಿದ್ದ ರಿಯಾಯಿತಿಗಳನ್ನ ಮತ್ತೆ ಪರಿಶೀಲಿಸಬೇಕು: ಸಮಿತಿ
ಸುಮಾರು ಎರಡೂವರೆ ವರ್ಷಗಳ ಹಿಂದೆ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಹಿರಿಯ ನಾಗರಿಕರ ವಿವಿಧ ವರ್ಗಗಳಲ್ಲಿ ರದ್ದುಗೊಳಿಸಲಾದ ರಿಯಾಯಿತಿಗಳನ್ನು ಮತ್ತೆ ಪರಿಶೀಲಿಸಬೇಕು ಎಂದು ಸಮಿತಿ ಹೇಳಿದೆ. ರೈಲ್ವೆ ಕುರಿತ ಸಂಸತ್ತಿನ ಸ್ಥಾಯಿ ಸಮಿತಿಯ ಅಧ್ಯಕ್ಷೆ ರಾಧಾ ಮೋಹನ್ ಸಿಂಗ್ ಅವರು ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿದ ವರದಿಯಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.


ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಕೋವಿಡ್ ಪ್ರೋಟೋಕಾಲ್ ಅನ್ನು ಗಮನದಲ್ಲಿಟ್ಟುಕೊಂಡು ವಿವಿಧ ವಿಭಾಗಗಳಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗುವ ರಿಯಾಯಿತಿಗಳನ್ನು ರೈಲ್ವೆ ನಿಲ್ಲಿಸಿತ್ತು ಎಂದು ಸಮಿತಿ ಹೇಳಿದೆ. ಇದರಲ್ಲಿ, 58 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಶೇಕಡಾ 50 ರಷ್ಟು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ ಶೇಕಡಾ 40 ರಷ್ಟು ರಿಯಾಯಿತಿ ನೀಡಲಾಗಿತ್ತು.


ಸಾಮಾನ್ಯ ಸ್ಥಿತಿಯತ್ತ ಸಾಗುತ್ತಿರುವ ರೈಲ್ವೆ
ಭಾರತೀಯ ರೈಲ್ವೆ ಈಗ ಮತ್ತೆ ತನ್ನ ಸಾಮಾನ್ಯ ಸ್ಥಿತಿಯತ್ತ ಸಾಗುತ್ತಿದೆ, ಆದ್ದರಿಂದ ಅವರು ವಿವಿಧ ವರ್ಗಗಳಲ್ಲಿ ಈ ಹಿಂದೆ ನೀಡುತ್ತಿದ್ದಂತಹ ರಿಯಾಯಿತಿಗಳನ್ನು ವಿವೇಚನೆಯಿಂದ ಪರಿಗಣಿಸಬೇಕು ಎಂದು ಸಮಿತಿ ಹೇಳಿದೆ.


ರಿಯಾಯಿತಿಗಾಗಿ ಪರಿಗಣನೆ
ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾಗುವ ಮುಂಚೆ ಹಿರಿಯ ನಾಗರಿಕರಿಗೆ ನೀಡುತ್ತಿದ್ದ ರಿಯಾಯಿತಿಯನ್ನು ಪರಿಶೀಲಿಸಬೇಕು ಮತ್ತು ಕನಿಷ್ಠ ಸ್ಲೀಪರ್, ಎಸಿ-3 ಯಲ್ಲಿ ಆಸನಗಳನ್ನು ಕಾಯ್ದಿರಿಸುವ ಹಿರಿಯ ನಾಗರಿಕರಿಗೆ ತಕ್ಷಣದ ರಿಯಾಯಿತಿಗಾಗಿ ಪರಿಗಣಿಸಬೇಕು ಎಂದು ಸಮಿತಿ ಬಯಸುತ್ತಿರುವುದಾಗಿ ತಿಳಿದುಬಂದಿದೆ. ಕೊರೋನಾ ಸಾಂಕ್ರಾಮಿಕ ರೋಗಕ್ಕೂ ಮೊದಲು ರೈಲ್ವೆ 54 ವಿಭಾಗಗಳಲ್ಲಿ ರಿಯಾಯಿತಿ ನೀಡುತ್ತಿತ್ತು.


ದಿವ್ಯಾಂಗರು, ರೋಗಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ 11 ವಿಭಾಗಗಳಲ್ಲಿ ಮೊದಲಿದ್ದಂತಹ ರಿಯಾಯಿತಿಯನ್ನು ಪ್ರಾರಂಭಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ, ಆದರೆ ಪ್ರಸ್ತುತ ಹಿರಿಯ ನಾಗರಿಕರಿಗೆ ವಿನಾಯಿತಿ ನೀಡುವ ಕಾರ್ಯ ಇನ್ನೂ ಕಾರ್ಯಗತವಾಗಿಲ್ಲ. ಆದರೆ 50 ಕ್ಕೂ ಹೆಚ್ಚು ವಿಭಾಗಗಳಲ್ಲಿ ರೈಲ್ವೆ ದರವು ಶೇಕಡಾ 10 ರಿಂದ 100 ರವರೆಗೆ ರಿಯಾಯಿತಿ ನೀಡುತ್ತದೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.


ಈ ವಿಭಾಗಗಳಲ್ಲಿ ಮೊದಲು ಸಡಿಲಿಕೆ ಇತ್ತು
ಭಾರತೀಯ ರೈಲ್ವೆಯಿಂದ ಪ್ರಶಸ್ತಿ ಪುರಸ್ಕೃತರು, ಹಿರಿಯ ನಾಗರಿಕರು, ಕ್ರೀಡಾಪಟುಗಳು, ಕಲಾವಿದರು, ವಿಧವೆಯರು, ವಿದ್ಯಾರ್ಥಿಗಳು, ಕಿವುಡರು, ಅಂಧರು, ಅಂಗವಿಕಲರು, ಮಾನಸಿಕ ರೋಗಿಗಳು, ಅಂಗವಿಕಲ ಪ್ರಯಾಣಿಕರು, ಚಲನಚಿತ್ರ ತಂತ್ರಜ್ಞರು, ಪೊಲೀಸರಿಗೆ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ, ಅರೆಸೈನಿಕ ಪಡೆಗಳು ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಡುವಾಗ ಸಾವನ್ನಪ್ಪಿದ ಸೈನಿಕರ ವಿಧವೆಯರಿಗೆ ರಿಯಾಯಿತಿ ನೀಡಲಾಗುತ್ತಿತ್ತು. ರೈಲ್ವೆಯು ವಿವಿಧ ವಿಭಾಗಗಳಲ್ಲಿ ನೀಡುವ ರಿಯಾಯಿತಿಗಳಲ್ಲಿ 80 ಪ್ರತಿಶತವನ್ನು ಹಿರಿಯ ನಾಗರಿಕರು ಪಡೆಯುತ್ತಿದ್ದರು.

First published: