Howdy Modi: ಪ್ರತಿವರ್ಷ ಕನಿಷ್ಠ 5 ವಿದೇಶಿ ಕುಟುಂಬಗಳನ್ನು ಭಾರತಕ್ಕೆ ಪ್ರವಾಸ ಕಳುಹಿಸಿ; ಅನಿವಾಸಿ ಭಾರತೀಯರಲ್ಲಿ ಪ್ರಧಾನಿ ಮೋದಿ ಮನವಿ

ಪ್ರಧಾನಿ ಮೋದಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳ ಬಗ್ಗೆ ಹಾಗೂ ಭಾರತ ಬದಲಾಗುತ್ತಿರುವ ಬಗ್ಗೆ ತಮ್ಮ ಭಾಷಣದಲ್ಲಿ ಮಾತನಾಡಿದರು. ಈ ಬಾರಿ ಟ್ರಂಪ್​ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಘೋಷಿಸಿದರು.

Latha CG | news18-kannada
Updated:September 23, 2019, 9:10 AM IST
Howdy Modi: ಪ್ರತಿವರ್ಷ ಕನಿಷ್ಠ 5 ವಿದೇಶಿ ಕುಟುಂಬಗಳನ್ನು ಭಾರತಕ್ಕೆ ಪ್ರವಾಸ ಕಳುಹಿಸಿ; ಅನಿವಾಸಿ ಭಾರತೀಯರಲ್ಲಿ ಪ್ರಧಾನಿ ಮೋದಿ ಮನವಿ
ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ
  • Share this:
ಹೂಸ್ಟನ್​(ಸೆ.23): ನಿನ್ನೆ ಅಮೆರಿಕಾದ ಹೂಸ್ಟನ್​ನಲ್ಲಿ ನಡೆದ 'ಹೌದಿ-ಮೋದಿ' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾರತದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಮಾತನಾಡಿದರು. ಪ್ರತಿವರ್ಷ  ಕನಿಷ್ಠ 5 ವಿದೇಶಿ ಕುಟುಂಬಗಳನ್ನು ಭಾರತಕ್ಕೆ ಪ್ರವಾಸಕ್ಕಾಗಿ ಕಳುಹಿಸಿ ಎಂದು ಅಲ್ಲಿನ ಅನಿವಾಸಿ ಭಾರತೀಯರಲ್ಲಿ ಮನವಿ ಮಾಡಿದರು.

ಹೂಸ್ಟನ್​ನಲ್ಲಿ ಭಾರತ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ,  ಪ್ರತಿವರ್ಷ 5  ವಿದೇಶಿ ಕುಟುಂಬಗಳನ್ನು ಪ್ರವಾಸಿಗರಾಗಿ ಭಾರತಕ್ಕೆ ಕಳುಹಿಸಿ. ನೀವು ನನಗಾಗಿ ಏನಾದರೂ ಮಾಡುತ್ತೀರಾ? ಇದು ನಿಮ್ಮಲ್ಲಿ ನನ್ನದೊಂದು ಸಣ್ಣ ಮನವಿ ಎಂದು ಹೇಳಿದರು.

ಇದು ನಾನು ಪ್ರಪಂಚದಾದ್ಯಂತ ಇರುವ ಎಲ್ಲಾ ಭಾರತೀಯರಿಗೂ ಹೇಳುತ್ತಿರುವ ವಿಚಾರವಾಗಿದೆ. ಪ್ರತಿಯೊಬ್ಬ ಅನಿವಾಸಿ ಭಾರತೀಯನು ಕೂಡ ಪ್ರತಿವರ್ಷ ಕನಿಷ್ಠ 5 ವಿದೇಶಿ ಕುಟುಂಬಗಳನ್ನು ಭಾರತಕ್ಕೆ ಪ್ರವಾಸಿಗರಿಗಾಗಿ ಕಳುಹಿಸಿಕೊಡಲು ನಿರ್ಧಾರ ಮಾಡಿ ಎಂದು ಕೇಳಿಕೊಂಡರು. ಇದರಿಂದಾಗಿ ಭಾರತದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದರು.

Howdy Modi: ಹೌಡಿ ಮೋದಿ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನ ತೋರಿದ ಭಾರತ ಪ್ರಧಾನಿ

ಇದೇ ವೇಳೆ, ಪ್ರಧಾನಿ ಮೋದಿ ಎಟರ್ನಲ್ ಗಾಂಧಿ ವಸ್ತುಸಂಗ್ರಹಾಲಯ, ಹೂಸ್ಟನ್ ಈವೆಂಟ್ ಸೆಂಟರ್​​ನ ಗುಜರಾತಿ ಸಮಾಜದ ಉದ್ಘಾಟನೆ ಮತ್ತು ಸಿದ್ಧಿ ವಿನಾಯಕ ದೇವಾಲಯದ ಫಲಕವನ್ನು ಅನಾವರಣಗೊಳಿಸಿದರು. ಎಟರ್ನಲ್​ ಗಾಂಧಿ ಮ್ಯೂಸಿಯಂ ಹೂಟ್ಸನ್​​ನ ಅಮೂಲ್ಯವಾದ ಸಾಂಸ್ಕೃತಿಕ ಹೆಗ್ಗುರುತಾಗಿದೆ ಎಂದು ಪಿಎಂಒ ಟ್ವೀಟ್​ ಮಾಡಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ 7 ದಿನಗಳ ಕಾಲ ಪ್ರವಾಸಕ್ಕೆ ತೆರಳಿದ್ದು, ನಿನ್ನೆ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಮೆರಿಕಾದ ಹೂಸ್ಟನ್​ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಒಂದೇ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್-ಭಾರತದ ಪ್ರಧಾನಿ ನರೇಂದ್ರ ಮೋದಿ ಮುಖಾಮುಖಿಯಾದರು. ಇದು ಬಹುನೀರಿಕ್ಷಿತ ಕಾರ್ಯಕ್ರಮವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ನೆರೆದಿದ್ದರು.

ಪ್ರಧಾನಿ ಮೋದಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳ ಬಗ್ಗೆ ಹಾಗೂ ಭಾರತ ಬದಲಾಗುತ್ತಿರುವ ಬಗ್ಗೆ ತಮ್ಮ ಭಾಷಣದಲ್ಲಿ ಮಾತನಾಡಿದರು. ಈ ಬಾರಿ ಟ್ರಂಪ್​ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಘೋಷಿಸಿದರು. ಇದೇ ವೇಳೆ ಭಾಷಣದ ಮಧ್ಯೆ ಪ್ರಧಾನಿ ಮೋದಿ ಕನ್ನಡ ಮಾತನಾಡಿ ಕನ್ನಡ ಭಾಷೆಯ ಕಂಪನ್ನು ಅಮೆರಿಕಾ ನೆಲದಲ್ಲಿ ಪಸರಿಸಿದರು.
First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ