ಅಮೆರಿಕ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯಲ್ಲಿ ಭಾರತೀಯನ ಅತ್ತೆ; ಸೆನೆಟರ್ ವಾರೆನ್ ಎಲಿಜಬೆತ್​ಗಿದೆ ಭಾರತದ ನಂಟು; ಹೇಗೆ ಗೊತ್ತಾ?

ಅಮೆರಿಕದಲ್ಲಿ ಅಸಂಖ್ಯಾತ ಮಿಶ್ರ ಕುಟುಂಬಗಳಿವೆ. ವಿಭಿನ್ನ ಸಂಸ್ಕೃತಿಗಳು ಮೇಳೈಸಿವೆ. ಅಲ್ಲಿ ಭಾರತೀಯ ಗೆಳಯರಿಲ್ಲದ ಅಮೆರಿಕನನ್ನು ಹುಡುಕುವುದೂ ಕಷ್ಟವೇನೋ? ಇಂದು ಅಮೆರಿಕದಲ್ಲಿ ಖ್ಯಾತಿಯ ಉತ್ತುಂಗದಲ್ಲಿರುವ ಸೆನೆಟರ್ ಕಮಲಾ ಹ್ಯಾರಿಸ್ ಅವರ ತಾಯಿ ಭಾರತೀಯರಾಗಿದ್ದರೆ, ಮತ್ತೋರ್ವ ಸೆನೆಟರ್ ಎಲಿಜಬೆತ್ ವಾರೆನ್ ಅವರ ಅಳಿಯ ಭಾರತೀಯ ಮೂಲದವನಾದ ಸುಶೀಲ್​ ತ್ಯಾಗಿ.

ಅತ್ತೆ ಎಲಿಜಬೆತ್ ವಾರೆನ್ ಜೊತೆಗೆ ಸುಶೀಲ್​ ತ್ಯಾಗಿ ಮತ್ತು ಕುಟುಂಬ.

ಅತ್ತೆ ಎಲಿಜಬೆತ್ ವಾರೆನ್ ಜೊತೆಗೆ ಸುಶೀಲ್​ ತ್ಯಾಗಿ ಮತ್ತು ಕುಟುಂಬ.

  • Share this:
ಭಾರತದಲ್ಲಿ ಪ್ರಸ್ತುತ ಸಿಎಎ-ಎನ್​ಆರ್​ಸಿ ಹೆಸರಿನಲ್ಲಿ ಮೂಲ ನಿವಾಸಿಗಳು ಹಾಗೂ ವಲಸಿಗರು ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ಇದರ ಬೆನ್ನಿಗೆ ಅಮೆರಿಕದ ಬಹು ಸಂಸ್ಕೃತಿ ಸಮಾಜ ಮತ್ತು ಈ ಬಹು ಸಂಸ್ಕೃತಿಯಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆ ಎಂಬುದು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಉತ್ತರಪ್ರದೇಶ ಮೂಲದ ಸುಶೀಲ್​ ತ್ಯಾಗಿ ಅವರ ಜೀವನದ ಯಶೋಗಾಥೆ.

ಅಮೆರಿಕದಲ್ಲಿ ಅಸಂಖ್ಯಾತ ಮಿಶ್ರ ಕುಟುಂಬಗಳಿವೆ. ವಿಭಿನ್ನ ಸಂಸ್ಕೃತಿಗಳು ಮೇಳೈಸಿವೆ. ಅಲ್ಲಿ ಭಾರತೀಯ ಗೆಳಯರಿಲ್ಲದ ಅಮೆರಿಕನನ್ನು ಹುಡುಕುವುದೂ ಕಷ್ಟವೇನೋ? ಇಂದು ಅಮೆರಿಕದಲ್ಲಿ ಖ್ಯಾತಿಯ ಉತ್ತುಂಗದಲ್ಲಿರುವ ಸೆನೆಟರ್ ಕಮಲಾ ಹ್ಯಾರಿಸ್ ಅವರ ತಾಯಿ ಭಾರತೀಯರಾಗಿದ್ದರೆ, ಮತ್ತೋರ್ವ ಸೆನೆಟರ್ ಎಲಿಜಬೆತ್ ವಾರೆನ್ ಅವರ ಅಳಿಯ ಭಾರತೀಯ ಮೂಲದವನಾದ ಸುಶೀಲ್​ ತ್ಯಾಗಿ.

ಇಷ್ಟಕ್ಕೂ ಸುಶೀಲ್​ ತ್ಯಾಗಿ ಇಂದು ಚರ್ಚೆಯ ಕೇಂದ್ರಕ್ಕೆ ಬರಲು ಕಾರಣ ಸೆನೆಟರ್​ ಎಲಿಜಬೆತ್​ ವಾರೆನ್​. ಏಕೆಂದರೆ ಫೆಬ್ರವರಿ ಅಂತ್ಯಂದ ವೇಳೆಗೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಎದುರಾಗಲಿದೆ. ಪ್ರಬಲ ಡೆಮಾಕ್ರೆಟಿಕ್ ಪಕ್ಷದಲ್ಲಿ ಅಧ್ಯಕ್ಷ ಹುದ್ದೆಗೆ 12 ಜನ ಪೈಪೋಟಿ ನಡೆಸುತ್ತಿದ್ದು ಈ ಪೈಕಿ ಸುಶೀಲ್ ತ್ಯಾಗಿ ಅವರ ಅತ್ತೆ ಎಲಿಜಬೆತ್​ ವಾರೆನ್ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.

waren 04
ಪ್ರಾತಿನಿಧಿಕ ಚಿತ್ರ.


ಎಲಿಜಬೆತ್ ವಾರೆನ್ ಅವರ ಮಗಳು ಅಮೆಲಿಯಾ ಅವರನ್ನು ಮದುವೆಯಾಗಿರುವ ತ್ಯಾಗಿಗೆ ಮೂರು ಮಕ್ಕಳಿದ್ದಾರೆ. ಅಮೆರಿಕಾದ ಸೆನೆಟರ್ ಎಲಿಜಬೆತ್ ಇದೀಗ ಭಾರತೀಯ ಮೂಲದ ಮೂವರು ಮೊಮ್ಮಕ್ಕಳ ಮುದ್ದಿನ ಅಜ್ಜಿ. ಇಂತಹ ಉದಾಹರಣೆಗಳು ಅಮೆರಿಕದಲ್ಲಿ ಸಾವಿರಾರು ಸಿಗುತ್ತವೆ.
ಈ ಕುಟುಂಬ ಅನೇಕ ಭಾರಿ ಭಾರತಕ್ಕೆ ಆಗಮಿಸಿ ಉತ್ತರಪ್ರದೇಶದಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿಯಾಗಿದ್ದಾರೆ. ಸುಶೀಲ್ ತ್ಯಾಗಿ ಅವರ ತಾಯಿ ಡೆಹ್ರಾಡೂನ್ನಲ್ಲಿದ್ದು ಸುಶೀಲ್ ತಮ್ಮ ಮಕ್ಕಳ ಜೊತೆಗೆ ವರ್ಷಕ್ಕೊಮ್ಮೆ ಬಂದು ತಮ್ಮ ತಾಯಿಯನ್ನು ಭೇಟಿಯಾಗುತ್ತಿದ್ದಾರೆ.

ಸುಶೀಲ್ ತ್ಯಾಗಿ ಬದುಕಿನ ಯಶೋಗಾಥೆ :

ತ್ಯಾಗಿ ಎಂಬ ಓರ್ವ ವ್ಯಕ್ತಿಯ ಕಥೆಯನ್ನು ಅವಲೋಕಿಸುತ್ತಾ ಸಾಗಿದರೆ, ಅದರ ಹಿಂದೆ ಎಲ್ಲಾ ವಲಸಿಗರ ಹೋರಾಟ ಕತೆಯೊಂದು ಬಿಚ್ಚಿಕೊಳ್ಳುತ್ತದೆ. ಅಲ್ಲದೆ, ಶಿಕ್ಷಣ ಎಂಬ ಶಕ್ತಿ ಹೇಗೆ ಓರ್ವ ವ್ಯಕ್ತಿಯ ಬದುಕನ್ನು ಬದಲಿಸಬಹುದು ಎಂಬುದಕ್ಕೆ ಈತನ ಕತೆ ಮಾದರಿಯಾಗಿದೆ.

ದೆಹಲಿಯಲ್ಲಿ ಐಐಟಿ ಓದಿದ್ದ ತ್ಯಾಗಿ ಅಮೆರಿಕದ ಯುಸಿ ಬರ್ಕ್ಲಿಯಯಲ್ಲಿ ಎಂಬಿಎ ಮತ್ತು ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ತ್ಯಾಗಿ ಅಮೆರಿಕದ ಪ್ರಸಿದ್ಧ ಬರ್ಕ್ಲಿ ಮೆರೈನ್ ರೊಬೊಟಿಕ್ಸ್ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

thyagi03
ಸುಶೀಲ್​ ತ್ಯಾಗಿ ಮತ್ತು ಆತನ ಹೆಂಡತಿ ಅಮೇಲಿಯಾ ವಾರೆನ್.


ನಮ್ಮದು ದೊಡ್ಡ ಕುಟುಂಬ ಆದರೆ, ಯಾರೂ ಯಾವುದೇ ಕಾಲೇಜು ವಿದ್ಯಾಭ್ಯಾಸ ಕಲಿತವರಲ್ಲ ಮತ್ತು ನನ್ನ ಸುತ್ತಲಿನ ಯಾರಿಗೂ ಐಐಟಿಯ ಬಗ್ಗೆ ಮಾಹಿತಿಯೂ ಇಲ್ಲ. ಹಿಂದಿ ಮಧ್ಯಮದಲ್ಲಿ ಓದಿದ ನನಗೆ ಜೆಇಇ ಗೆ ತಯಾರಿ ನಡೆಸುವುದು ಸಾಕಷ್ಟ ಕಷ್ಟದ ಕೆಲಸವಾಗಿತ್ತು. ಕೊನೆಗೆ ಪರೀಕ್ಷೆಯಲ್ಲಿ ತೇರ್ಡೆಯಾದ ನನಗೆ ಉತ್ತರಪ್ರದೇಶ ಪೊಲೀಸ್ ಇಲಾಖೆ ವಿದ್ಯಾರ್ಥಿ ವೇತನ ನೀಡಿತ್ತು. ಹೆತ್ತವರ ವೆಚ್ಚದ ಹೊರ ಕಡಿಮೆ ಮಾಡಿದ್ದಕ್ಕೆ ವಿದ್ಯಾರ್ಥಿ ವೇತನಕ್ಕೆ ಕೃತಜ್ಞನಾಗಿದ್ದೇನೆ” ಎಂದು ಅವರು ತಿಳಿಸಿದ್ದಾರೆ.

thyagi02
ಮೊಮ್ಮಕ್ಕಳ ಜೊತೆ ಸುಶೀಲ್​ ತ್ಯಾಗಿ ಅವರ ತಾಯಿ.


ಅಮೆರಿಕದ ಯುಸಿ ಬರ್ಕ್ಲಿಯಯಲ್ಲಿ ಎಂಬಿಎ ಓದುತ್ತಿರುವಾಗಲೇ ತ್ಯಾಗಿ ಮತ್ತು ಅಮೆಲಿಯಾ ವಾರೆನ್ ನಡುವೆ ಪರಿಚಯವಾಗಿದೆ. ಪರಿಚಯ ನಂತರ ಮದುವೆಯಲ್ಲಿ ಮುಕ್ತಾಯವಾಗಿದೆ. ಅಮೆರಿಕದ ಅನೇಕ ಬಹುಸಾಂಸ್ಕೃತಿಕ ಕುಟುಂಬಗಳಂತೆ ಇವರು ಸಹ ತಮ್ಮ ವೈವಿಧ್ಯಮಯ ನಂಬಿಕೆಗಳು ಮತ್ತು ಸಂಪ್ರದಾಯಗಳಿಂದ ಎಲ್ಲರನ್ನೂ ಸೆಳೆಯುತ್ತಿದ್ದಾರೆ.

ಇದೀಗ ಈ ಕುಟುಂಬದ ಹಿರಿಯ ಅಜ್ಜಿ ಎಲಿಜಬೆತ್​ ವಾರೆನ್​ ಅಮೆರಿಕ ಅಧ್ಯಕ್ಷ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದು, ಸಾಮಾನ್ಯವಾಗಿ ಭಾರತದ ಪಾಲಿಗೆ ಇದು ಹೆಮ್ಮೆಯ ವಿಚಾರವೇ ಸರಿ. ಈ ಕುರಿತು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿರುವ ವಾರೆನ್​, "ಅಮೆರಿಕದ ಅಧ್ಯಕ್ಷ ಹುದ್ದೆಗೆ ಏರಲು ವಾರೆನ್ ಅವರಿಗೆ ಎಲ್ಲಾ ಅರ್ಹತೆ ಇದ್ದು, ಖಂಡಿತ ಅವರು ಆ ಹುದ್ದೆಯನ್ನು ಅಲಂಕರಿಸಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕರೊನಾ ವೈರಸ್​ಗೆ ತುತ್ತಾಗಿರುವ ಚೀನಾದಲ್ಲಿರುವ ಭಾರತೀಯ ಮಹಿಳೆ; ಸಹಾಯದ ನಿರೀಕ್ಷೆಯಲ್ಲಿ...
First published: