Sanjay Raut Detained: ಇಡಿ ದಾಳಿ ಬಳಿಕ ಶಿವಸೇನೆಯ ಹಿರಿಯ ಸಂಸದ ಸಂಜಯ್ ರಾವುತ್ ಬಂಧನ

ಇಂದು ಬೆಳಗ್ಗೆ ಇಡಿ ಅಧಿಕಾರಿಗಳ ದಾಳಿ ನಂತರ ನಂತರ ಟ್ವೀಟ್‌ ಮಾಡಿದ್ದ ರಾವತ್, ನನಗೂ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದಿವಂಗತ ಬಾಳಾಸಾಬೇಬ್ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ಬರೆದುಕೊಂಡಿದ್ದರು.

ಸಂಜಯ್​ ರಾವತ್​

ಸಂಜಯ್​ ರಾವತ್​

  • Share this:
ಮುಂಬೈ:  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆಯ ಹಿರಿಯ ಸಂಸದ ಸಂಜಯ್ ರಾವುತ್ (Senior Shiv Sena MP Sanjay Raut) ಅವರನ್ನು ಇಡಿ (Enforcement Directorate) ಅಧಿಕಾರಿಗಳು ಬಂಧಿಸಿದ್ದಾರೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ರಾವುತ್ ಅವರ ಮುಂಬೈನ ನಿವಾಸದಲ್ಲಿ 6 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ ನಂತರ ಅವರನ್ನು ಬಂಧಿಸಿದ್ದಾರೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ, ಉಪನಗರ ಭಾಂಡಪ್‌ನಲ್ಲಿರುವ ರಾವುತ್ ಅವರ 'ಮೈತ್ರಿ' ಬಂಗಲೆಯನ್ನು ತಲುಪಿ ಬೆಳಿಗ್ಗೆ 7 ಗಂಟೆಯಿಂದ ಹುಡುಕಾಟ ಆರಂಭಿಸಿದರು. ಶಿವಸೇನೆಯ ಉದ್ಧವ್ ಠಾಕ್ರೆ ಪಾಳಯದಲ್ಲಿರುವ ರಾಜ್ಯಸಭಾ ಸದಸ್ಯ ರಾವತ್​, ರಾಜಕೀಯ ದ್ವೇಷದ ಕಾರಣದಿಂದ ತನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬಾಳಾಸಾಬೇಬ್ ಠಾಕ್ರೆ ಮೇಲೆ ಆಣೆ

ಇಂದು ಬೆಳಗ್ಗೆ ಇಡಿ ಅಧಿಕಾರಿಗಳ ದಾಳಿ ನಂತರ ನಂತರ ಟ್ವೀಟ್‌ ಮಾಡಿದ್ದ ರಾವತ್, ನನಗೂ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದಿವಂಗತ ಬಾಳಾಸಾಬೇಬ್ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ಬರೆದುಕೊಂಡಿದ್ದರು.

ಮೂಲಗಳ ಪ್ರಕಾರ, ಮುಂಬೈನ ದಾದರ್‌ನಲ್ಲಿರುವ ರಾವುತ್ ಅವರ ಇತರ ನಿವಾಸದಲ್ಲೂ ಇಡಿ ಶೋಧ ನಡೆಯುತ್ತಿದೆ. ಮಹಾರಾಷ್ಟ್ರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಕೂಡ ರಾವತ್ ಯಾವುದೇ ತಪ್ಪು ಮಾಡದಿದ್ದರೆ ಇಡಿ ಕ್ರಮಕ್ಕೆ ಹೆದರಬಾರದು ಎಂದು ಹೇಳಿದ್ದಾರೆ. ಮುಂಬೈನ 'ಚಾಲ್' ಅನ್ನು ಮರು-ಅಭಿವೃದ್ಧಿಪಡಿಸುವಲ್ಲಿ ಒಳಗೊಂಡಿರುವ ಅಕ್ರಮಗಳಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾವುತ್ ಅವರನ್ನು ಇಡಿ ತನಿಖೆಗೆ ಒಳಪಡಿಸಿದೆ.

ರಾವತ್​ ನಿವಾಸದ ಎದುರು ಜಮಾಹಿಸಿದ ಕಾರ್ಯಕರ್ತರು

ರಾವುತ್ ಅವರ ಮನೆಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಕಾರ್ಯಕರ್ತರು ಜಮಾಯಿಸಿ, ಜಾರಿ ನಿರ್ದೇಶನಾಲಯ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯಸಭಾ ಸಂಸದರನ್ನು ಜುಲೈ 1 ರಂದು 10 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಅವರ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ: Local Body Polls: ಮಧ್ಯಪ್ರದೇಶದಲ್ಲಿ ನೆಲೆಯೂರಿದ ಆಪ್, AIMAM; ಕಾಂಗ್ರೆಸ್-ಬಿಜೆಪಿಗೆ ಹೊಸ ಸವಾಲು!

ಏನಿದು ಪ್ರಕರಣ..?

ಏಪ್ರಿಲ್‌ನಲ್ಲಿ, ಜಾರಿ ನಿರ್ದೇಶನಾಲಯವು ರಾವುತ್ ಅವರ ಪತ್ನಿ ವರ್ಷಾ ರಾವತ್ ಮತ್ತು ಅವರ ಇಬ್ಬರು ಸಹಚರರ ₹ 11.15 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಆಸ್ತಿಗಳಲ್ಲಿ ವರ್ಷಾ ರಾವುತ್ ಹೊಂದಿರುವ ದಾದರ್‌ನಲ್ಲಿರುವ ಫ್ಲಾಟ್ ಮತ್ತು ಅಲಿಬಾಗ್‌ನ ಕಿಹಿಮ್ ಬೀಚ್‌ನಲ್ಲಿರುವ ಎಂಟು ಪ್ಲಾಟ್‌ಗಳು ವರ್ಷಾ ರಾವುತ್ ಮತ್ತು ಸಂಜಯ್ ರಾವುತ್‌ನ ಆಪ್ತ ಸಹಚರ ಸುಜಿತ್ ಪಾಟ್ಕರ್ ಅವರ ಪತ್ನಿ ಸ್ವಪ್ನಾ ಪಾಟ್ಕರ್ ಜಂಟಿಯಾಗಿ ಹೊಂದಿದ್ದಾರೆ. ರಾವತ್ ಅವರ ನಿಕಟವರ್ತಿಗಳಾದ ಪ್ರವೀಣ್ ರಾವತ್ ಮತ್ತು ಸುಜಿತ್ ಪಾಟ್ಕರ್ ಅವರೊಂದಿಗಿನ ಅವರ ವ್ಯವಹಾರ ಮತ್ತು ಇತರ ಸಂಪರ್ಕಗಳ ಬಗ್ಗೆ ಮತ್ತು ಅವರ ಪತ್ನಿ ಒಳಗೊಂಡಿರುವ ಆಸ್ತಿ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳಲು ಏಜೆನ್ಸಿ ಅವರನ್ನು ತನಿಖೆಗೆ ಒಳಪಡಿಸಿದೆ.

ಗೋರೆಗಾಂವ್‌ನ ಪತ್ರಾ ಚಾಲ್‌ನ ಮರು ಅಭಿವೃದ್ಧಿಗೆ ಸಂಬಂಧಿಸಿದ ₹ 1,034 ಕೋಟಿ ಭೂ ಹಗರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಪ್ರವೀಣ್ ರಾವತ್ ಅವರನ್ನು ಬಂಧಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಗುರು ಆಶಿಶ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ "ಚಾಲ್" ನ ಮರು-ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ, ಇದು ಮಹಾರಾಷ್ಟ್ರ ವಸತಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ (MHADA) ಸೇರಿದ 47 ಎಕರೆ ಪ್ರದೇಶದಲ್ಲಿ 672 ಬಾಡಿಗೆದಾರರನ್ನು ಹೊಂದಿತ್ತು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
Published by:Kavya V
First published: