ಶಿವಸೇನೆ ಹೊಸ ಬೇಡಿಕೆ ನಮಗೆ ಒಪ್ಪಿಗೆ ಇರಲಿಲ್ಲ; ಕೇಂದ್ರ ಗೃಹ ಸಚಿವ ಅಮಿತ್ ಶಾ

ನಾವು ಶಿವಸೇನೆಗೆ ದ್ರೋಹ ಮಾಡುತ್ತಿರಲಿಲ್ಲ ಎಂದು ಹೇಳಿದ ಅಮಿತ್ ಶಾ, ಚುನಾವಣೆಗೂ ಮುನ್ನವೇ 50:50 ಅನುಪಾತದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಮಾತುಕತೆ ಆಗಿರಲಿಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.

HR Ramesh | news18-kannada
Updated:November 13, 2019, 8:29 PM IST
ಶಿವಸೇನೆ ಹೊಸ ಬೇಡಿಕೆ ನಮಗೆ ಒಪ್ಪಿಗೆ ಇರಲಿಲ್ಲ; ಕೇಂದ್ರ ಗೃಹ ಸಚಿವ ಅಮಿತ್ ಶಾ
ಅಮಿತ್​ ಶಾ
  • Share this:
ಮುಂಬೈ: ಮಹಾರಾಷ್ಟ್ರ ಚುನಾವಣೆಯಲ್ಲಿ ಫಲಿತಾಂಶದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಎಎನ್​ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ್ದು, ಸಂದರ್ಶನದಲ್ಲಿ ಮಹಾರಾಷ್ಟ್ರ ಚುನಾವಣೆ, ಪ್ರಸ್ತುತ ಸನ್ನಿವೇಶಗಳ ಬಗ್ಗೆ ಮಾತನಾಡಿದ್ದಾರೆ. ಹಾಗೂ ಬಿಜೆಪಿ ಸಿಎಂ ಸ್ಥಾನವನ್ನು ನೀಡುವುದಾಗಿ ಭರವಸೆ ನೀಡಿತ್ತು ಎಂಬ ಶಿವಸೇನೆಯ ಹೇಳಿಕೆಯನ್ನು ಅಮಿತ್ ಶಾ ತಿರಸ್ಕರಿಸಿದ್ದಾರೆ.

ಚುನಾವಣೆಗೆ ಮೊದಲು, ಬಿಜೆಪಿ-ಶಿವಸೇನೆ ಮೈತ್ರಿ ಗೆದ್ದರೆ ದೇವೇಂದ್ರ ಫಡ್ನವೀಸ್ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ಇಬ್ಬರೂ ಅನೇಕ ಬಾರಿ ಸಾರ್ವಜನಿಕವಾಗಿ ಹೇಳಿದ್ದೆವು. ಆಗ ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಈಗ ಅವರು ನಮಗೆ ಸ್ವೀಕಾರಾರ್ಹವಲ್ಲದ ಹೊಸ ಬೇಡಿಕೆಯೊಂದಿಗೆ ಬಂದಿದ್ದಾರೆ ಎಂದು ಶಿವಸೇನೆ ಮುಖಂಡರ ಸಿಎಂ ಹಂಚಿಕೆ ಬೇಡಿಕೆ ಬಗ್ಗೆ ಅಮಿತ್ ಶಾ ಅಸಮಾಧಾನ ಹೊರಹಾಕಿದ್ದಾರೆ.
ನಾವು ಶಿವಸೇನೆಗೆ ದ್ರೋಹ ಮಾಡುತ್ತಿರಲಿಲ್ಲ ಎಂದು ಹೇಳಿದ ಅಮಿತ್ ಶಾ, ಚುನಾವಣೆಗೂ ಮುನ್ನವೇ 50:50 ಅನುಪಾತದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಮಾತುಕತೆ ಆಗಿರಲಿಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು. 

ಇದನ್ನು ಓದಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ: ಗವರ್ನರ್​​​ ನಡೆ ಸಮರ್ಥಿಸಿಕೊಂಡ ಕೇಂದ್ರ ಗೃಹ ಸಚಿವ ಅಮಿತ್​​ ಶಾ

First published: November 13, 2019, 8:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading