• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Machete Purchase: ಇನ್ಮುಂದೆ ಮಚ್ಚು, ಕುಡುಗೋಲು ಸೇರಿದಂತೆ ಯಾವುದೇ ಮಾರಕಾಸ್ತ್ರಗಳ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯ!

Machete Purchase: ಇನ್ಮುಂದೆ ಮಚ್ಚು, ಕುಡುಗೋಲು ಸೇರಿದಂತೆ ಯಾವುದೇ ಮಾರಕಾಸ್ತ್ರಗಳ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯ!

ಆಯುಧಗಳ ಖರೀದಿಗೆ ಆಧಾರ್ ಕಾರ್ಡ್‌ ಕಡ್ಡಾಯ

ಆಯುಧಗಳ ಖರೀದಿಗೆ ಆಧಾರ್ ಕಾರ್ಡ್‌ ಕಡ್ಡಾಯ

ಪುಣೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ತೆಂಗಿನ ಕಾಯಿ ಕತ್ತರಿಸುವ ಮಚ್ಚು, ಚಾಕು ಸೇರಿದಂತೆ ವಿವಿಧ ಆಯುಧಗಳಿಂದ ದಾಳಿಗಳು ಹೆಚ್ಚಾಗುತ್ತಿದ್ದಂತೆ ಜನರು ಕೂಡ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡಲು ಹಿಂಜರಿಯುವಂತಾಗಿದ್ದು, ಈ ಹಿನ್ನೆಲೆ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸರು ನಿರ್ಧರಿಸಿದ್ದಾರೆ.

ಮುಂದೆ ಓದಿ ...
  • Share this:

ಪುಣೆ: ಮಹಾರಾಷ್ಟ್ರದಲ್ಲಿ (Maharashtra) ಹೆಚ್ಚುತ್ತಿರುವ ಅಪರಾಧ ಕೃತ್ಯಗಳ (Crime News) ಕಡಿವಾಣಕ್ಕೆ ಪೊಲೀಸರು (Police) ನಿಯಮವೊಂದನ್ನು ರೂಪಿಸಿದ್ದಾರೆ. ಇನ್ಮುಂದೆ ಕತ್ತಿ, ತಲವಾರು, ಕುಡುಗೋಲು (Machete Purchase)ಸೇರಿದಂತೆ ಯಾವುದೇ ಆಯುಧಗಳ ಖರೀದಿಗೆ ಆಧಾರ್ ಕಾರ್ಡ್‌ ಕಡ್ಡಾಯವಾಗಿದ್ದು, (Aadhaar Card) ಒಂದು ವೇಳೆ ಆಧಾರ್ ಕಾರ್ಡ್ ಪ್ರತಿ ನೀಡದೇ ಇದ್ದಲ್ಲಿ ಇಂತಹ ಯಾವುದೇ ಆಯುಧಗಳನ್ನು ನೀಡಬಾರದು ಎಂದು ಪುಣೆಯ ಪೊಲೀಸರು (Pune Police) ಅಂಗಡಿ ಮಾಲೀಕರು ಮತ್ತು ಗ್ರಾಹಕರಿಗೆ ಸೂಚನೆ ನೀಡಿದ್ದಾರೆ. ಮಚ್ಚು, ತಲವಾರುಗಳನ್ನು ಹಿಡಿದುಕೊಂಡು ಪುಣೆಯಲ್ಲಿ ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚು ತಿರುಗಾಡುತ್ತಿದ್ದು, ಜನರು ಭೀತಿಯಿಂದ ಓಡಾಡುವಂತಾಗಿದೆ. ಈ ಹಿನ್ನೆಲೆ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಪೊಲೀಸರು ಈ ನಿರ್ಧಾರ ಕೈಗೊಂಡಿದ್ದಾರೆ.


ಕೃಷಿ ಉಪಕರಣ, ದೊಡ್ಡ ಚಾಕು, ತೆಂಗಿನ ಕಾಯಿ ಒಡೆಯಲು ಬಳಸುವಂತಹ ಉಪಕರಣಗಳು ಸೇರಿದಂತೆ ಯಾವುದೇ ರೀತಿಯ ಬಳಕೆಗೆ ಆಯುಧಗಳನ್ನು ಪಡೆದುಕೊಂಡರೂ ಆಧಾರ್ ಕಾರ್ಡ್‌ ವಿವರಗಳನ್ನು ಕಡ್ಡಾಯವಾಗಿ ಪಡೆಯಬೇಕೆಂದು ಪೊಲೀಸರು ಮಾರಾಟಗಾರರಿಗೆ ಸೂಚಿಸಿದ್ದಾರೆ.


ಇದನ್ನೂ ಓದಿ: Brain Mapping Test: ಬೆಂಗಳೂರಿಗೆ ಬಂತು ಬ್ರೇನ್ ಮ್ಯಾಪಿಂಗ್ ಟೆಸ್ಟ್! ಅಪರಾಧಿಗಳಿಗೆ ಸಿಂಹಸ್ವಪ್ನವೇ ಈ ಹೊಸ ತಂತ್ರಜ್ಞಾನ?


ಅಪರಾಧಿಗಳ ಮಟ್ಟ ಹಾಕಲು ಹೊಸ ಹೆಜ್ಜೆ


ಪುಣೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ತೆಂಗಿನ ಕಾಯಿ ಕತ್ತರಿಸುವ ಮಚ್ಚು, ಚಾಕು ಸೇರಿದಂತೆ ವಿವಿಧ ಆಯುಧಗಳಿಂದ ದಾಳಿಗಳು ಹೆಚ್ಚಾಗುತ್ತಿದ್ದಂತೆ ಜನರು ಕೂಡ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡಲು ಹಿಂಜರಿಯುವಂತಾಗಿದ್ದು, ಈ ಹಿನ್ನೆಲೆ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸರು ನಿರ್ಧರಿಸಿದ್ದಾರೆ. ಇನ್ಮುಂದೆ ಯಾರಾದರೂ ಯಾವುದೇ ಮಾರಕಾಸ್ತ್ರಗಳನ್ನು ಖರೀಸಿದರೆ ಅದರ ವಿವರ ಮತ್ತು ಅವರ ಆಧಾರ್ ಕಾರ್ಡ್‌ನ್ನು ನೋಂದಣಿ ಮಾಡಬೇಕು. ಆ ಮೂಲಕ ದುಷ್ಕೃತ್ಯಗಳಲ್ಲಿ ತೊಡಗುವ ಅಪರಾಧಿಗಳನ್ನು ಮಟ್ಟ ಹಾಕಲು ಹೊಸ ಹೆಜ್ಜೆ ಇಟ್ಟಿದ್ದಾರೆ.


ಇದನ್ನೂ ಓದಿ: Santro Ravi: ಖಾಕಿ ಖೆಡ್ಡಾಗೆ ಖತರ್ನಾಕ್ ಸ್ಯಾಂಟ್ರೋ ಬಿದ್ದಿದ್ದೇ ರೋಚಕ; ಸ್ಯಾಂಟ್ರೋ ಗುಜರಾತ್ ಲಿಂಕ್ ಸಿಕ್ಕಿದ್ದು ಮಂತ್ರಾಲಯದಲ್ಲಿ!


100ಕ್ಕೂ ಹೆಚ್ಚು ಮಚ್ಚುಗಳ ವಶ


ಈ ಸಂಬಂಧ ಪುಣೆ ಪೊಲೀಸ್ ಕಮಿಷನರ್ ರಿತೇಶ್ ಕುಮಾರ್ ಅವರು, ಮಾರಕಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯೊಂದರಿಂದ ಸುಮಾರು 100ಕ್ಕೂ ಹೆಚ್ಚು ಮಚ್ಚುಗಳನ್ನು ವಶಪಡಿಸಿಕೊಂಡಿದ್ದು, ಇಂತಹ ಆಯುಧಗಳನ್ನು ಉಪಯೋಗಿಸಿ ಅಪರಾಧ ಕೃತ್ಯಗಳನ್ನು ಎಸಗುವವರ ಮೇಲೆ ಕಣ್ಣಿಡುವ ಸಲುವಾಗಿ ಸುಮಾರು 450 ಪೊಲೀಸರನ್ನು ವಿವಿಧ ಭಾಗಗಳಲ್ಲಿ ನಿಯೋಜಿಸಿದ್ದಾರೆ. ಅಲ್ಲದೇ ಇಂತಹ ಆಯುಧಗಳನ್ನು ಮಾರಾಟ ಮಾಡುವ ಅಂಗಡಿಗಳ ವಿವರಗಳನ್ನೂ ದಾಖಲಿಸುವಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದಾರೆ.



ರಸ್ತೆ ಬದಿಗಳಲ್ಲೂ ಮಾರಕಾಸ್ತ್ರಗಳ ಮಾರಾಟ


ನೋಂದಾಯಿತ ಅಂಗಡಿಗಳು ಹೊರತು ಪಡಿಸಿ ಅನೇಕ ಜನರು ರಸ್ತೆ ಬದಿಗಳಲ್ಲಿ ಮಾರಕಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದು, ಹೀಗೆ ರಸ್ತೆ ಬದಿಗಳಲ್ಲಿ ಮಾರುವ ವ್ಯಾಪಾರಿಗಳ ಪೈಕಿ ಹೆಚ್ಚಿನವರು ಅನಕ್ಷರಸ್ಥರು. ಹೀಗಾಗಿ ಯಾವುದೇ ಮಾರಕಾಯುಧಗಳನ್ನು ಮಾರಾಟ ಮಾಡುವ ಮೊದಲು ಅವರು ಗ್ರಾಹಕರಿಂದ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಯನ್ನು ಪಡೆದುಕೊಳ್ಳುವುದು ಕಡ್ಡಾಯ ಎಂದು ಪುಣೆ ಪೊಲೀಸ್ ಕಮಿಷನರ್ ರಿತೇಶ್ ಕುಮಾರ್ ಹೇಳಿದ್ದಾರೆ.


ಇದನ್ನೂ ಓದಿ: Pune Accident: ಪುಣೆ- ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: 48 ವಾಹನ ಜಖಂ, 50ಕ್ಕೂ ಅಧಿಕ ಮಂದಿಗೆ ಗಾಯ!


ಸದ್ಯ ಪುಣೆ ಪೊಲೀಸರು ಕೈಗೊಂಡಿರುವ ಈ ನೂತನ ಕ್ರಮ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ? ಮಾರಕಾಸ್ತ್ರಗಳನ್ನು ಖರೀಸುವವರಿಗೆ ಆಧಾರ್ ಕಾರ್ಡ್‌ ಕಡ್ಡಾಯ ಮಾಡುವುದರಿಂದ ಅಪರಾಧ ಕೃತ್ಯಗಳ ಸಂಖ್ಯೆ ಕಡಿಮೆ ಆಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

Published by:Avinash K
First published: