HOME » NEWS » National-international » SEHWAG OFFERS TO TAKE CARE OF EDUCATION OF PULWAMA TERROR ATTACK MARTYRS CHILDREN

ಪುಲ್ವಾಮ ದಾಳಿ: ಸೆಹ್ವಾಗ್ ಸ್ಕೂಲ್ ಮೂಲಕ ಹುತಾತ್ಮ ಯೋಧರ ನೆರವಿಗೆ ಧಾವಿಸಿದ ವೀರೂ

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ದೇಶಕ್ಕಾಗಿ ಮಡಿದ ವೀರ ಯೋಧರ ಕುಟುಂಬಕ್ಕೆ ತಮ್ಮ ಕೈಯಿಂದಾಗುವ ಸಹಾಯ ಮಾಡಿದ್ದಾರೆ.

Vinay Bhat | news18
Updated:February 16, 2019, 4:12 PM IST
ಪುಲ್ವಾಮ ದಾಳಿ: ಸೆಹ್ವಾಗ್ ಸ್ಕೂಲ್ ಮೂಲಕ ಹುತಾತ್ಮ ಯೋಧರ ನೆರವಿಗೆ ಧಾವಿಸಿದ ವೀರೂ
ವಿರೇಂದ್ರ ಸೆಹ್ವಾಗ್
  • News18
  • Last Updated: February 16, 2019, 4:12 PM IST
  • Share this:
ಪುಲ್ವಾಮ ಉಗ್ರರ ದಾಳಿಗೆ ವಿಶ್ವದೆಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಈಮಧ್ಯೆ ದೇಶದ ಸುರಕ್ಷತೆಗೆ ತಮ್ಮ ಜೀವ ಒತ್ತೆಯಿಟ್ಟ ಸೈನಿಕರ ಕಾರ್ಯಕ್ಕೆ ಶ್ಲಾಘನೆ ಜೊತೆಗೆ ಅವರ ಕುಟುಂಬಕ್ಕೆ ಸಹಾಯ ಹಸ್ತ ಕೂಡ ಚಾಚಲಾಗಿದೆ.

ಸದ್ಯ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ದೇಶಕ್ಕಾಗಿ ಮಡಿದ ವೀರ ಯೋಧರ ಕುಟುಂಬಕ್ಕೆ ತಮ್ಮ ಕೈಯಿಂದಾಗುವ ಸಹಾಯ ಮಾಡಿದ್ದಾರೆ.

'ಸೆಹ್ವಾಗ್ ಇಂಟರ್ ನ್ಯಾಷನಲ್ ಸ್ಕೂಲ್​ನಲ್ಲಿ ಹುತಾತ್ಮರಾದ ಯೋಧರ ಮಕ್ಕಳ, ಸಂಪೂರ್ಣ ವಿಧ್ಯಾಭ್ಯಾಸವನ್ನು ನೋಡಿಕೊಳ್ಳುತ್ತೇನೆ. ನಮ್ಮ ಶಾಲೆ ನಿಮಗಾಗಿ ಇದೆ' ಎಂದು ಟ್ವಿಟ್ಟರ್​ನಲ್ಲಿ ಬರೆದು ಕೊಂಡಿದ್ದಾರೆ. ಈ ಮೂಲಕ ಹುತಾತ್ಮ ಯೋಧರ ನೆರವಿಗೆ ಸೆಹ್ವಾಗ್ ಧಾವಿಸಿದ್ದಾರೆ.

ಇದನ್ನೂ ಓದಿ: ಹುತಾತ್ಮ ಯೋಧರಿಗಾಗಿ ಮದುವೆ ಮಗಳ ಆರತಕ್ಷತೆ ರದ್ದು ಮಾಡಿ 11 ಲಕ್ಷ ದಾನಮಾಡಿದ ಉದ್ಯಮಿ

 



ಇನ್ನು ಸೂರತ್​ನ ವಜ್ರದ ವ್ಯಾಪಾರಿಯೊಬ್ಬರು ಮಗಳ ಮದುವೆಯ ಆರತಕ್ಷತೆಯನ್ನು ರದ್ದು ಮಾಡಿ ದೇಶಕ್ಕಾಗಿ ಮಡಿದ ಯೋಧರ ಕುಟುಂಬಕ್ಕೆ 11 ಲಕ್ಷ ರೂ. ಸಹಾಯ ಮಾಡಿದ್ದಾರೆ.

ಇದನ್ನೂ ಓದಿ: ಪುಲ್ವಾಮ ದಾಳಿ; ಉಗ್ರರಿಗೆ ಏನು ಶಿಕ್ಷೆ ಕೊಡಬೇಕೆಂದು ನಮ್ಮ ಸೈನಿಕರೇ ನಿರ್ಧರಿಸುತ್ತಾರೆ; ಪ್ರಧಾನಿ ಮೋದಿ

ಪುಲ್ವಾಮಾದಲ್ಲಿ ಉಗ್ರರ ಅಟ್ಟಹಾಸಕ್ಕೆ ಸಿಆರ್​ಪಿಎಫ್ 49​ ಯೋಧರು ಹುತಾತ್ಮರಾಗಿರುವುದು ದೇಶದ ಪ್ರತಿಯೊಬ್ಬನ ಕಣ್ಣನ್ನು ತೊಯಿಸಿದೆ. ಉಗ್ರರ ದಾಳಿಗೆ ದಿಟ್ಟ ಪ್ರತೀಕಾರ ತೀರಿಸಿಕೊಳ್ಳುವಂತೆ ಒಕ್ಕೊರಲ ಆಗ್ರಹ ಕೇಳಿಬರುತ್ತಿದೆ. ಹೀಗಾಗಿಯೆ ಕೇಂದ್ರ ಸರ್ಕಾರ, ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂಬ ಮಾತನ್ನು ಹೇಳಿದೆ.

First published: February 16, 2019, 4:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories