ಈ ಶಾಲೆಯಲ್ಲಿ ಶಿಕ್ಷಕರು ಹೆಲ್ಮೆಟ್​ ಹಾಕಿಕೊಂಡೇ ಪಾಠ ಮಾಡ್ತಾರೆ; ಯಾಕೆ ಗೊತ್ತೇ?

ಶಾಲಾ ಕಟ್ಟಡದ ಶಿಥಿಲಾವಸ್ಥೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಇಂದು ಮಕ್ಕಳನ್ನು ಪಕ್ಕದ ಶಾಲೆಯೊಂದಕ್ಕೆ ಸ್ಥಳಾಂತರ ಮಾಡಿದ್ದೇವೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಈ. ಶೇಖರ್​ ಶರ್ಮಾ ತಿಳಿಸಿದ್ದಾರೆ.

Latha CG | news18-kannada
Updated:November 28, 2019, 8:10 AM IST
ಈ ಶಾಲೆಯಲ್ಲಿ ಶಿಕ್ಷಕರು ಹೆಲ್ಮೆಟ್​ ಹಾಕಿಕೊಂಡೇ ಪಾಠ ಮಾಡ್ತಾರೆ; ಯಾಕೆ ಗೊತ್ತೇ?
ಹೆಲ್ಮೆಟ್​ ಹಾಕಿಕೊಂಡು ಪಾಠ ಮಾಡುತ್ತಿರುವ ಶಿಕ್ಷಕ
  • Share this:
ತೆಲಂಗಾಣ(ನ.28): ರಸ್ತೆಯಲ್ಲಿ ಬೈಕ್​ ಚಲಾಯಿಸುವಾಗ ಹೆಲ್ಮೆಟ್​ ಹಾಕಬೇಕೆಂಬುದು ಸಂಚಾರಿ ನಿಯಮ, ಅಂತೆಯೇ ಕಡ್ಡಾಯ ಕೂಡ ಹೌದು. ಇಲ್ಲವಾದರೆ ಟ್ರಾಫಿಕ್​ ಪೊಲೀಸರಿಗೆ ದುಪ್ಪಟ್ಟು ದಂಡ ಕಟ್ಟಬೇಕಾಗುತ್ತದೆ. ಹೆಲ್ಮೆಟ್​​ ಹಾಕುವುದು ರಸ್ತೆಯಲ್ಲಿ ಮಾತ್ರ ಎಂದು ನಾವಂದುಕೊಂಡಿದ್ದೇವೆ. ಆದರೆ ಇಲ್ಲೊಂದು ಶಾಲೆಯಲ್ಲಿ ಶಿಕ್ಷಕರು ಹೆಲ್ಮೆಟ್​ ಹಾಕಿಕೊಂಡೇ ಪಾಠ ಮಾಡುತ್ತಾರೆ. ಇದು ವಿಚಿತ್ರವಾದರೂ ಸತ್ಯ. ಯಾಕೆ ಅಂತೀರಾ? ಮುಂದೆ ಓದಿ.

ವಾರಂಗಲ್​ನ ಮಹಬೂಬಾದ್ ಜಿಲ್ಲೆಯ ಸೀತಾನಗರಂ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಹೆಲ್ಮೆಟ್​ ಹಾಕಿಕೊಂಡು ಮಕ್ಕಳಿಗೆ ಬೋಧನೆ ಮಾಡುತ್ತಾರೆ. ಆ ಶಾಲೆಯಲ್ಲಿ ಮೂರು ತರಗತಿ ಕೋಣೆಗಳಿವೆ. ಮೂರು ಕಟ್ಟಡಗಳೂ ಸಹ ಶಿಥಿಲಾವಸ್ಥೆಯಲ್ಲಿವೆ. ಯಾವಾಗ ಬೇಕಾದರೂ ಶಾಲಾ ಬಿಲ್ಡಿಂಗ್​ ಕುಸಿದು ಬೀಳಬಹುದು. ಹೀಗಾಗಿ ಆತಂಕದಲ್ಲಿರುವ ಶಾಲಾ ಶಿಕ್ಷಕರು ಸುರಕ್ಷತೆಗಾಗಿ ಮುಂಜಾಗ್ರತೆಯಿಂದ ಹೆಲ್ಮೆಟ್​ ಹಾಕಿಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ.

ಕೆ.ಆರ್.​​​ ಪೇಟೆ ಚುನಾವಣಾ ಅಖಾಡಕ್ಕೆ ಸುಮಲತಾ ಬದಲಿಗೆ ಜೋಡೆತ್ತು ಯಶ್​​-ದರ್ಶನ್​​ ಎಂಟ್ರಿ?

ಸೀತಾನಗರಂ ಶಾಲೆಯಲ್ಲಿರುವ ಒಟ್ಟು ಮಕ್ಕಳ ಸಂಖ್ಯೆ ಕೇವಲ ಆರು. ಮಕ್ಕಳ ಸಂಖ್ಯೆ ಬಹಳ ಕಡಿಮೆ ಇದೆ. ಹಲವಾರು ವರ್ಷಗಳಿಂದ ಶಾಲಾ ಕಟ್ಟಡದ ದುಸ್ಥಿತಿಯ ಬಗ್ಗೆ ಶಿಕ್ಷಕರು ಮೇಲಾಧಿಕಾರಿಗಳಿಗೆ ದೂರು ನೀಡುತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಶಾಲಾ ಕಟ್ಟಡದ ಶಿಥಿಲಾವಸ್ಥೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಇಂದು ಮಕ್ಕಳನ್ನು ಪಕ್ಕದ ಶಾಲೆಯೊಂದಕ್ಕೆ ಸ್ಥಳಾಂತರ ಮಾಡಿದ್ದೇವೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಈ. ಶೇಖರ್​ ಶರ್ಮಾ ತಿಳಿಸಿದ್ದಾರೆ.

ಈರುಳ್ಳಿಗೂ ತಟ್ಟಿದ ಕಳ್ಳರ ಕಾಟ; ಅಂಗಡಿಯಿಂದ 50 ಸಾವಿರ ಮೌಲ್ಯದ ಉಳ್ಳಾಗಡ್ಡಿ ಕದ್ದೊಯ್ದ ಖದೀಮರು!

ಶಾಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಹತ್ತಿರದ ಶಾಲೆಗೆ ಸ್ಥಳಾಂತರಿಸಿದ ಬಳಿಕ ಮಹಬೂಬಾದ್ ಶಾಸಕ ಬನೊಥ್ ಶಂಕರ್ ನಾಯಕ್ ಮತ್ತು ಅಧಿಕಾರಿಗಳು ಶಾಲಾ ಸ್ಥಿತಿಯನ್ನು ಪರಿಶೀಲಿಸಿದರು.
First published: November 28, 2019, 8:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading