HOME » NEWS » National-international » SEEMS MUSLIM VOTE BANK SLIPPING OUT OF CM MAMATA BANERJEES GRASP SAYS PM NARENDRA MODI MAK

West Bengal Election2021: ಮುಸ್ಲಿಂ ವೋಟ್ ಬ್ಯಾಂಕ್ ಮಮತಾ ಬ್ಯಾನರ್ಜಿಯ ಹಿಡಿತದಿಂದ ದೂರ ಸರಿದಿದೆ; ನರೇಂದ್ರ ಮೋದಿ

ಬಂಗಾಳದ ಜನಸಂಖ್ಯೆಯ ಶೇ. 27 ರಷ್ಟು ಮುಸ್ಲಿಮರಿದ್ದಾರೆ. ಪ್ರಸ್ತುತ ಬಿಜೆಪಿ ಪಕ್ಷದ ಸವಾಲನ್ನು ಎದುರಿಸುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಬಂಗಾಳದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಮುಸ್ಲಿಮರ ಮತಗಳು ನಿರ್ಣಾಯಕ.

news18-kannada
Updated:April 6, 2021, 4:21 PM IST
West Bengal Election2021: ಮುಸ್ಲಿಂ ವೋಟ್ ಬ್ಯಾಂಕ್ ಮಮತಾ ಬ್ಯಾನರ್ಜಿಯ ಹಿಡಿತದಿಂದ ದೂರ ಸರಿದಿದೆ; ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ.
  • Share this:
ಕೋಲ್ಕತ್ತಾ (ಏಪ್ರಿಲ್ 06); "ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಬೆನ್ನಿಗಿದ್ದ ಮುಸ್ಲಿಂ ಮತ ಬ್ಯಾಂಕ್ ಅನ್ನು ಕಳೆದುಕೊಂಡಂತೆ ಕಾಣುತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಕುಹಕವಾಡಿದ್ದಾರೆ. ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ಮುಸ್ಲಿಂ ಮತದಾರರ ಎದುರು ಮನವಿ ಮಾಡಿದ್ದ ಮಮತಾ ಬ್ಯಾನರ್ಜಿ "ಮುಸ್ಲಿಂ ಮತಗಳು ಒಡೆದುಹೋಗದೆ ಟಿಎಂಸಿಗೆ ಬೆಂಬಲ ನೀಡಬೇಕು" ಎಂದು ಕೇಳಿಕೊಂಡಿದ್ದರು. ಇಂದು ಪಶ್ಚಿಮ ಬಂಗಾಳದ ಕೂಚ್ ಬೆಹಾರ್​ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಈ ವಿಚಾರವನ್ನು ಪ್ರಸ್ತಾಪಿಸಿ ಮಮತಾ ಬ್ಯಾನರ್ಜಿ ಕಾಲೆಳೆದಿರುವ ಪ್ರಧಾನಿ ನರೇಂದ್ರ ಮೋದಿ, "ಬಂಗಾಳದ ಮುಸ್ಲಿಂ ಜನರು ತಮ್ಮ ಮತಗಳನ್ನು ವಿಭಜಿಸಬಾರದು ಎಂಬ ಮಮತಾ ಬ್ಯಾನರ್ಜಿ ಅವರ ಹೇಳಿಕೆಯೇ ಅವರು ಮುಸ್ಲಿಂ ಮತಬ್ಯಾಂಕ್ ಅನ್ನು ಕಳೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ" ಎಂದು ಕಿಡಿಕಾರಿದ್ದಾರೆ.

ಬಂಗಾಳದ ಜನಸಂಖ್ಯೆಯ ಶೇ. 27 ರಷ್ಟು ಮುಸ್ಲಿಮರಿದ್ದಾರೆ. ಪ್ರಸ್ತುತ ಬಿಜೆಪಿ ಪಕ್ಷದ ಸವಾಲನ್ನು ಎದುರಿಸುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಬಂಗಾಳದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಮುಸ್ಲಿಮರ ಮತಗಳು ನಿರ್ಣಾಯಕ. ಆದರೆ ಈ ಬಾರಿ ಇಬ್ಬರು ಮುಸ್ಲಿಂ ನಾಯಕರಾದ ಎಐಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರಾದ ಫರ್ಫುರಾ ಷರೀಫ್‌ ಪಕ್ಷವೂ ಸಹ ಬಂಗಾಳ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಹೀಗಾಗಿ ಬಂಗಾಳದಲ್ಲಿ ಮುಸ್ಲಿಮರ ಮತಗಳು ಒಡೆಯುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಮುಸ್ಲಿಮರ ಮತಗಳನ್ನು ಮುಂದಿಟ್ಟು ಮಮತಾ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, "ಪ್ರಿಯ ದೀದಿ, ಇತ್ತೀಚೆಗೆ ನೀವು ಎಲ್ಲಾ ಮುಸ್ಲಿಮರು ಒಂದಾಗಬೇಕು, ಮತ್ತು ಅವರ ಮತಗಳನ್ನು ವಿಭಜಿಸಲು ಅನುಮತಿಸ ಬಾರದು ಎಂದು ಹೇಳಿದ್ದೀರಿ. ನೀವೇ ಹೇಳುತ್ತಿರುವಂತೆ ಮುಸ್ಲಿಂ ಮತ ಬ್ಯಾಂಕ್ ಸಹ ನಿಮ್ಮ ಕೈಯಿಂದ ಹೊರಹೋಗಿದೆ ಎಂಬುದು ಈಗ ನಿಮಗೆ ಮನವರಿಕೆಯಾಗಿದೆ. ಇದೀಗ ಮುಸ್ಲಿಮರು ಸಹ ನಿಮ್ಮಿಂದ ದೂರ ಸರಿದಿದ್ದಾರೆ.

ಇದನ್ನೂ ಓದಿ: TamilNadu Election2021: ಮತಗಟ್ಟೆಗೆ ಸೈಕಲ್​ನಲ್ಲೇ ತೆರಳಿದ ತಮಿಳು ನಟ ವಿಜಯ್; ಇಂಧನ ಬೆಲೆ ಏರಿಕೆ ವಿರುದ್ಧ ಬಹಿರಂಗ ಪ್ರತಿಭಟನೆ?

ಇಂತಹ ಹೇಳಿಕೆಗಳ ಮೂಲಕ ನೀವು ಚುನಾವಣೆ ಸೋಲನ್ನು ಒಪ್ಪಿಕೊಂಡಿದ್ದೀರಿ ಎಂದು ನಮಗೆ ತೋರುತ್ತಿದೆ. ಇದನ್ನು ನೀವು ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು. ಇದಲ್ಲದೆ, ನೀವು ಚುನಾವಣಾ ಆಯೋಗದ ಬಗ್ಗೆಯೇ ನಿಂದನೆ ಮಾಡುತ್ತಿದ್ದೀರಿ. ಆದರೆ ನಾವು ಹಿಂದೂಗಳನ್ನು ಒಗ್ಗೂಡಿಸಿ ಬಿಜೆಪಿಗೆ ಮತ ಚಲಾಯಿಸುವಂತೆ ಕೇಳಿದ್ದರೆ ನಮಗೆ ಚುನಾವಣಾ ಆಯೋಗದಿಂದ ಎಂಟು ಅಥವಾ ಹತ್ತು ನೋಟಿಸ್ ಸಿಗುತ್ತಿತ್ತು.

ನೀವು ಮುಸ್ಲಿಮರು ಒಗ್ಗೂಡಿ ತೃಣಮೂಲ ಕಾಂಗ್ರೆಸ್ ಗೆ ಮತ ಚಲಾಯಿಸುವಂತೆ ಕೇಳುವ ಮೂಲಕ ಜನರ ಕಾಯ್ದೆಯ ಪ್ರಾತಿನಿಧ್ಯವನ್ನು ಉಲ್ಲಂಘಿಸಿದ್ದೀರಿ. ಹೀಗಾಗಿ ನಿಮ್ಮ ವಿರುದ್ಧ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು ಎಂದು ನಾನು ಒತ್ತಾಯಿಸುತ್ತೇನೆ" ಎಂದು ಮೋದಿ ಕಿಡಿಕಾರಿದ್ದಾರೆ.
Published by: MAshok Kumar
First published: April 6, 2021, 4:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories