ಮೋದಿ ಪಾಕಿಸ್ತಾನದ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ; ಅರವಿಂದ್​ ಕೇಜ್ರಿವಾಲ್​

ಒಬ್ಬ ವ್ಯಕ್ತಿ ಪ್ರಧಾನಿಯಾಗಿ ಆಯ್ಕೆಯಾದಾಗ  ಅವರು ಒಂದು ಪಕ್ಷಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೆ ಪ್ರಧಾನಿಯಾಗುತ್ತಾರೆ. ಆದರೆ, ಬಿಜೆಪಿಯೇತರ ಪಕ್ಷಗಳೊಂದಿಗೆ ಮೋದಿ ವರ್ತಿಸುತ್ತಿರುವುದನ್ನು ಗಮನಿಸಿದರೆ, ಅವರು ಭಾರತಕ್ಕೆ ಅಲ್ಲ ಪಾಕಿಸ್ತಾನಕ್ಕೆ ಪ್ರಧಾನಿಯಂತೆ ಅನಿಸುತ್ತಿದೆ

Seema.R | news18
Updated:February 11, 2019, 4:48 PM IST
ಮೋದಿ ಪಾಕಿಸ್ತಾನದ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ; ಅರವಿಂದ್​ ಕೇಜ್ರಿವಾಲ್​
ಅರವಿಂದ್​ ಕೇಜ್ರೀವಾಲ್​
Seema.R | news18
Updated: February 11, 2019, 4:48 PM IST
ನವದೆಹಲಿ(ಫೆ.11):  ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಚಂದ್ರಬಾಬು ನಾಯ್ಡು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ವೇಳೆ ಪ್ರಧಾನಿ ವಿರುದ್ಧ ಹರಿಹಾಯ್ದ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​  ಮೋದಿ ಪಾಕಿಸ್ತಾನದ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಒಬ್ಬ ವ್ಯಕ್ತಿ ಪ್ರಧಾನಿಯಾಗಿ ಆಯ್ಕೆಯಾದಾಗ  ಅವರು ಒಂದು ಪಕ್ಷಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೆ ಪ್ರಧಾನಿಯಾಗುತ್ತಾರೆ. ಆದರೆ, ಬಿಜೆಪಿಯೇತರ ಪಕ್ಷಗಳೊಂದಿಗೆ ಮೋದಿ ವರ್ತಿಸುತ್ತಿರುವುದನ್ನು ಗಮನಿಸಿದರೆ, ಅವರು ಭಾರತಕ್ಕೆ ಅಲ್ಲ ಪಾಕಿಸ್ತಾನಕ್ಕೆ ಪ್ರಧಾನಿಯಂತೆ ಅನಿಸುತ್ತಿದೆ ಎಂದರು.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಹಾಗೂ ರಾಜ್ಯ ವಿಭಜನೆಯ ಕಾಲದಲ್ಲಿ ನೀಡಲಾದ ಭರವಸೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಇಂದಿನಿಂದ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಉಪವಾಸ ಆರಂಭಿಸಿದ್ದಾರೆ. ಅರವಿಂದ್​ ಕೇಜ್ರಿವಾಲ್​ ಕೂಡ ಧರಣಿ ಸ್ಥಳಕ್ಕೆ ತೆರಳಿ ನಾಯ್ಡು ಅವರಿಗೆ ಬೆಂಬಲ ಸೂಚಿಸಿದರು.

ಇದನ್ನು ಓದಿ: ಆಂಧ್ರಕ್ಕೆ ವಿಶೇಷ ಮಾನ್ಯತೆ ನೀಡಲು ಆಗ್ರಹಿಸಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಸಿಎಂ ಚಂದ್ರಬಾಬು ನಾಯ್ಡು

ಆಂಧ್ರ ಪ್ರದೇಶದ ಸಿಎಂ ದೆಹಲಿಯಲ್ಲಿ ಧರಣಿ ಆರಂಭಿಸಿರುವುದು ನಿಜಕ್ಕೂ ಬೇಸರದ ಸಂಗತಿ. ಒಕ್ಕೂಟದ ವ್ಯವಸ್ಥೆಯಲ್ಲಿ ತಮ್ಮ ರಾಜ್ಯದ ಕುರಿತ ಹಕ್ಕನ್ನು ಅವರ ಕೇಳಿದ್ದಾರೆ. ಪ್ರಧಾನಿ ಕೂ ಸಾರ್ವಜನಿಕವಾಗಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಸಾರ್ವಜನಿಕವಾಗಿ ಭರವಸೆ ನೀಡಿದ್ದರು. ಅವರು ಯಾವಾಗಲೂ ತಾವು ಹೇಳಿದ ಮಾತಿಗೆ ಅನುಗುಣವಾಗಿ ನಡೆದುಕೊಂಡಿಲ್ಲ. ಅಮಿತ್​ ಷಾ ಕೂಡ ಅವರು ಹೇಳುವ ಮಾತು ಕೇವಲ ನೆಪಮಾತ್ರಕ್ಕೆ ಎಂದು ಹೇಳಿದ್ದರು ಎಂದು ಧರಣಿಯಲ್ಲಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...