• Home
 • »
 • News
 • »
 • national-international
 • »
 • ದೇಶದ್ರೋಹ ಆರೋಪವನ್ನು ಪ್ರಸಾದದಂತೆ ಹಂಚಲಾಗುತ್ತಿದೆ; ಬೀದರ್ ಘಟನೆ ಉಲ್ಲೇಖಿಸಿ ಕನ್ನಯ್ಯ ಕುಮಾರ್ ವ್ಯಂಗ್ಯ

ದೇಶದ್ರೋಹ ಆರೋಪವನ್ನು ಪ್ರಸಾದದಂತೆ ಹಂಚಲಾಗುತ್ತಿದೆ; ಬೀದರ್ ಘಟನೆ ಉಲ್ಲೇಖಿಸಿ ಕನ್ನಯ್ಯ ಕುಮಾರ್ ವ್ಯಂಗ್ಯ

ಕನ್ಹಯ್ಯಾ ಕುಮಾರ್

ಕನ್ಹಯ್ಯಾ ಕುಮಾರ್

ಇತ್ತೀಚೆಗೆ ಸಿಎಎ ವಿರೋಧಿಸಿ ನಾಟಕ ಮಾಡಿದ ಬೀದರ್​ ಶಾಲೆ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು. ಅಷ್ಟೇ ಅಲ್ಲ, ಠಾಣೆಗೆ ಕರೆದು ಮಕ್ಕಳನ್ನು ವಿಚಾರಿಸಿದ್ದರು. ಈ ಘಟನೆ ಉಲ್ಲೇಖಿಸಿ ಕನ್ನಯ್ಯ ಕುಮಾರ್​ ಮಾತನಾಡಿದ್ದಾರೆ.

 • Share this:

  ಕತಿಹಾರ್​ (ಫೆ.8): ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸದಾ ಧ್ವನಿ ಎತ್ತುವ ಸಿಪಿಐ ನಾಯಕ ಕನ್ನಯ್ಯ ಕುಮಾರ್​ ಈಗ ಮತ್ತೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಇತ್ತೀಚೆಗೆ ದೇಶದ್ರೋಹ ಆರೋಪವನ್ನು ಪ್ರಸಾದದಂತೆ ಹಂಚಲಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

  ಇತ್ತೀಚೆಗೆ ಸಿಎಎ ವಿರೋಧಿಸಿ ನಾಟಕ ಮಾಡಿದ ಬೀದರ್​ ಶಾಲೆ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು. ಅಷ್ಟೇ ಅಲ್ಲ, ಠಾಣೆಗೆ ಕರೆದು ಮಕ್ಕಳನ್ನು ವಿಚಾರಿಸಿದ್ದರು. ಈ ಘಟನೆ ಉಲ್ಲೇಖಿಸಿ ಸಿಎಎ ಹಾಗೂ ಎನ್​​ಪಿಆರ್​-ಎನ್​ಆರ್​ಸಿ ವಿರುದ್ಧ ಆರಂಭಿಸಿರುವ ಜನ್​ ಗಣ್​ ಮನ್ ಯಾತ್ರೆಯಲ್ಲಿ ಕನ್ನಯ್ಯ ಮಾತನಾಡಿದ್ದಾರೆ.

  ದೇಶದ್ರೋಹ ಆರೋಪವನ್ನು ಪ್ರಸಾದದ ರೀತಿ ನೀಡಲಾಗುತ್ತಿದೆ. ಸಾಮಾಜಿಕ ಕೆಲಸ ಮಾಡುವವರ ವಿರುದ್ಧ ಪ್ರಕರಣ ದಾಖಲಾಗುತ್ತಿದೆ. ಕರ್ನಾಟಕದಲ್ಲಿ ಸಿಎಎ ವಿರುದ್ಧ ನಾಟಕ ಮಾಡಿದ ಶಾಲಾ ಮಕ್ಕಳ ವಿರುದ್ಧ ಪ್ರಕರಣಗಳು ದಾಖಲಾಗಿವೆ,” ಎಂದರು.

  ಇದನ್ನೂ ಓದಿ: ಲೋಕಸಭಾ ಚುನಾವಣೆ: ಬಿಹಾರ ಬೇಗುಸರಾಯ್​​ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಕನ್ನಯ್ಯ ಕುಮಾರ್​​ ಕಣಕ್ಕೆ

  ಕೇಂದ್ರ ಗೃಹ ಸಚಿವ ಅಮಿತ್​ ಶಾ ಮಗನ ವಿರುದ್ಧ ಕನ್ನಯ್ಯ ಹರಿಹಾಯ್ದರು. “ಗೋಡ್ಸೇವಾದಿಗಳು ಗಲಭೆ ಮಾಡುವವರ ಕೈಗೆ ಗನ್​ ನೀಡುತ್ತಿದ್ದಾರೆ. ಆಡಳಿತದಲ್ಲಿರುವ ಮಂದಿ ತಮ್ಮ ಮಕ್ಕಳನ್ನು ಹೊರದೇಶದ ವಿಶ್ವವಿದ್ಯಾಲಯಗಳಿಗೆ ಕಳುಹಿಸುತ್ತಿದ್ದಾರೆ,” ಎಂದರು.

  First published: