Karol Bagh: ಕುಡಿದ ಮತ್ತಿನಲ್ಲಿ ಯುವತಿಯನ್ನ ಎಳೆದಾಡಿದ ಕಾಮುಕ ಕಾವಲುಗಾರ, CCTVಯಲ್ಲಿ ದೃಶ್ಯ ಸೆರೆ!

ಪಿಜಿಯಲ್ಲಿ ಭದ್ರತಾ ಸಿಬ್ಬಂದಿ ಕಿರುಕುಳ ನೀಡಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಡಿಸಿಡಬ್ಲ್ಯು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದ್ದು, ಈ ಪ್ರಕರಣದಲ್ಲಿ ತಕ್ಷಣ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ.

ಸಾಂದರ್ಣಭಿಕ ಚಿತ್ರ

ಸಾಂದರ್ಣಭಿಕ ಚಿತ್ರ

  • Share this:
ನವದೆಹಲಿ(ಆ.18): ದೆಹಲಿಯ ಕರೋಲ್ ಬಾಗ್ (Delhi's Karol Bagh) ಪ್ರದೇಶದಲ್ಲಿರುವ ಯುವತಿಯರ ಪಿಜಿ (Ladies PG) ಹಾಸ್ಟೆಲ್‌ನ ಸೆಕ್ಯುರಿಟಿ ಗಾರ್ಡ್ ಕುಡಿದ ಅಮಲಿನಲ್ಲಿ ಯುವತಿಯರಿಗೆ ಕಿರುಕುಳ ನೀಡಿದ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಾಸ್ಟೆಲ್‌ನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ದೌರ್ಜನ್ಯದ ದೃಶ್ಯ ಸೆರೆಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಿಸಿಟಿವಿ ದೃಶ್ಯಾವಳಿಗಳು ಹೊರಬಂದ ನಂತರ ಪಿಜಿಯ ಭದ್ರತಾ ಸಿಬ್ಬಂದಿ ಪಿಜಿಯಲ್ಲಿ ವಾಸಿಸುವ ಯುವತಿಯರ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ:  8 ಮಂದಿ ಸಜೀವ ದಹನ ಪ್ರಕರಣ: ಘಟನಾ ಸ್ಥಳಗಳಲ್ಲಿ CCTV ಅಳವಡಿಕೆಗೆ High Court ಆದೇಶ

ದೆಹಲಿಯ ಕರೋಲ್ ಬಾಗ್ ಪ್ರದೇಶದ ಪಿಜಿಯೊಂದರಲ್ಲಿ ಯುವತಿಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಟ್ವಿಟರ್'ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಕ್ಲಿಪ್ ಅನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿದ ಡಿಸಿಡಬ್ಲ್ಯು, ಈ ಬಗ್ಗೆ ಎಫ್‌ಐಆರ್ ದಾಖಲಿಸುವಂತೆ ದೆಹಲಿ ಪೊಲೀಸರನ್ನು ಕೇಳಿದೆ.

ಕರೋಲ್ ಬಾಗ್‌ನ ಗೋಲ್ಡ್ಸ್ ವಿಲ್ಲಾ ಪಿಜಿಯ ಸೆಕ್ಯೂರಿಟಿ ಗಾರ್ಡ್ ಪಿಜಿಯಲ್ಲಿ ವಾಸಿಸುತ್ತಿದ್ದ ಯುವತಿಯರಿಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ವಿಡಿಯೋ ಒಂದನ್ನೂ ಟ್ವೀಟ್ ಮಾಡಲಾಗಿದ್ದು, ಇದರಲ್ಲಿ ಪುರುಷನೊಬ್ಬ ಮಹಿಳೆಗೆ ಕಿರುಕುಳ ನೀಡುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ಯುವತಿ ಆತನಿಂದ ತಪ್ಪಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿರುವುದೂ ಇದರಲ್ಲಿ ದಾಖಲಾಗಿದೆ. ಪಿಜಿ ಮಾಲೀಕರಿಗೆ ದೂರು ನೀಡಿದಾಗ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ.


ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಆಯೋಗವು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದ್ದು, ಈ ಪ್ರಕರಣದಲ್ಲಿ ತಕ್ಷಣವೇ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ.

ಇದನ್ನೂ ಓದಿ:  ಗಲಾಟೆ ನಡೆಯುವಾಗ ಕಣ್ಮುಚ್ಚಿ ಕುಳಿತಿತ್ತು CCTV! ಪೊಲೀಸ್ ಇಲಾಖೆಯನ್ನೇ ಯಾಮಾರಿಸಿದ ಖಾಸಗಿ ಕಂಪನಿ!

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಕಿರುಕುಳ ನೀಡುತ್ತಿರುವುದು ಕಂಡು ಬಂದಿದೆ. ಈ ವ್ಯಕ್ತಿಯನ್ನು ಪಿಜಿಯ ಸೆಕ್ಯುರಿಟಿ ಗಾರ್ಡ್ ಎಂದು ಹೇಳಲಾಗುತ್ತಿದೆ. ಡಿಸಿಡಬ್ಲ್ಯು ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ದೆಹಲಿ ಪೊಲೀಸರಿಂದ ಈ ಪಿಜಿ ನೋಂದಣಿಯ ವಿವರಗಳನ್ನು ಕೇಳಿದ್ದಾರೆ. ಆಗಸ್ಟ್ 18 ರಂದು ಸಂಜೆ 4 ಗಂಟೆಯೊಳಗೆ ಈ ಪ್ರಕರಣದಲ್ಲಿ ತೆಗೆದುಕೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಆಯೋಗವು ದೆಹಲಿ ಪೊಲೀಸರಿಗೆ ಕೇಳಿದೆ.

ಪೊಲೀಸ್ ತನಿಖೆಗೆ ನಿರಾಕರಿಸಿದ ಯುವತಿ

13 ಆಗಸ್ಟ್ 22 ರಂದು ಕರೋಲ್ ಬಾಗ್ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿತ್ತು ಎಂದು ಡಿಸಿಪಿ (ಕೇಂದ್ರ) ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಅಗತ್ಯ ಕಾನೂನು ಕ್ರಮ ಜರುಗಿಸಿದ್ದಾರೆ. ಆದರೆ, ಕರೆ ಮಾಡಿದವರು ದೂರು ನೀಡಲು ನಿರಾಕರಿಸಿದ್ದಾರೆ. ಅಲ್ಲದೇ 14 ಆಗಸ್ಟ್ 22 ರಂದು ಯುವತಿ ಪಿಜಿಯನ್ನು ಖಾಲಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. 16 ಆಗಸ್ಟ್ 22 ರಂದು ನಡೆದ ದಾಳಿಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲಾಗಿದೆ. ಇಂದು ಮಹಿಳೆ ಮತ್ತು ಆಕೆಯ ಕುಟುಂಬವನ್ನು ಮತ್ತೆ ಸಂಪರ್ಕಿಸಲಾಯಿತು. ಅವರು ದೂರು/ಕಾನೂನು ಕ್ರಮವನ್ನು ಪ್ರಾರಂಭಿಸಲು ನಿರಾಕರಿಸಿ ಲಿಖಿತವಾಗಿ ಇಂತಹುದ್ದೊಂದು ಮನವಿ ಮಾಡಿದ್ದಾರೆನ್ನಲಾಗಿದೆ.
Published by:Precilla Olivia Dias
First published: