news18-kannada Updated:November 19, 2020, 9:18 AM IST
ಕಾಶ್ಮೀರದಲ್ಲಿ ಭದ್ರತಾ ಪಡೆ
ಜಮ್ಮು: ಭದ್ರತಾ ಪಡೆಯೊಂದಿಗಿನ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತ್ಯೆಯಾಗಿರುವ ಘಟನೆ ಜಮ್ಮುವಿನಲ್ಲಿ ನಡೆದಿದೆ. ನಗ್ರೋತಾ ಜಿಲ್ಲೆಯ ಬಾನ್ ಟೋಲ್ ಪ್ಲಾಜಾ ಬಳಿ ಇಂದು ಗುರುವಾರ ಬೆಳಗ್ಗೆ ಈ ಎನ್ಕೌಂಟರ್ ನಡೆದಿರುವುದು ತಿಳಿದುಬಂದಿದೆ. ಉಗ್ರರು ಇದ್ದ ಬಸ್ ಅನ್ನು ಟೋಲ್ ಪ್ಲಾಜಾ ಬಳಿ ತಪಾಸಣೆ ಮಾಡುವಾಗ ಗುಂಡಿನ ಚಕಮಕಿ ಆಗಿದೆ. ಉಗ್ರರು ಬಸ್ ಮೂಲಕ ಜಮ್ಮುವಿನಿಂದ ಕಾಶ್ಮೀರಕ್ಕೆ ಹೋಗುತ್ತಿದ್ದರೆನ್ನಲಾಗಿದೆ. ಸದ್ಯ ನಗ್ರೋತಾ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಇದೇ ವೇಳೆ, ಪುಲ್ವಾಮ ಜಿಲ್ಲೆಯಲ್ಲಿ ನಿನ್ನೆ ಸಂಜೆ ನಡೆದ ಉಗ್ರ ದಾಳಿಯಲ್ಲಿ 12ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳನ್ನ ಗುರಿಯಾಗಿಸಿಕೊಂಡು ಉಗ್ರರು ಎಸೆದ ಗ್ರೆನೇಡ್ ಗುರಿ ತಪ್ಪಿ ಜನಸಂಚಾರವಿದ್ದ ರಸ್ತೆಯ ಮೇಲೆ ಬಿದ್ದು ಸ್ಫೋಟಗೊಂಡಿದೆ. ಪುಲ್ವಾಮದ ಕಾಕಪೋರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇದೀಗ ಇಡೀ ಪ್ರದೇಶದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಉಗ್ರರನ್ನು ಹಿಡಿಯಲು ಪ್ರಯತ್ನ ಮುಂದುವರಿದಿದೆ.
ಇದನ್ನೂ ಓದಿ: ಪೂರ್ವ ಲಡಾಕ್ನಲ್ಲಿ ಸೇವೆ ಸಲ್ಲಿಸುವ ಸೈನಿಕರ ಜೀವನ ಸೌಲಭ್ಯ ನವೀಕರಣ; ಸಕಲ ವ್ಯವಸ್ಥೆಯುಳ್ಳ ಟೆಂಟ್ ನಿರ್ಮಾಣ!
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರೊಂದಿಗಿನ ಎನ್ಕೌಂಟರ್ ಘಟನೆಗಳು ಹೆಚ್ಚುತ್ತಿವೆ. ಗಡಿಭಾಗದಲ್ಲಿ ಒಳನುಸುಳುವಿಕೆಯ ಪ್ರಯತ್ನಗಳ ಜೊತೆಗೆ ಕಣಿವೆ ರಾಜ್ಯದ ವಿವಿಧೆಡೆ ಉಗ್ರರ ಚಲನವಲನಗಳು ಹೆಚ್ಚುತ್ತಿರುವುದು ಕಂಡುಬಂದಿದೆ.
Published by:
Vijayasarthy SN
First published:
November 19, 2020, 9:18 AM IST