Terrorist Sympathisers- ಕಾಶ್ಮೀರದಲ್ಲಿ ನಾಗರಿಕರ ಹತ್ಯೆ; 700 ಜನರ ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ

Jammu and Kashmir- ಕಣಿವೆ ರಾಜ್ಯದಲ್ಲಿ ಇತ್ತೀಚೆಗೆ ನಾಗರಿಕರ ಮೇಲೆ ಉಗ್ರರ ದಾಳಿ ಘಟನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಉಗ್ರ ಬೆಂಬಲಿರೆನ್ನಲಾದವರನ್ನು ಗುರುತಿಸಿದ್ದು ಅಂಥ 700ಕ್ಕೂ ಹೆಚ್ಚು ಮಂದಿಯನ್ನ ವಶಕ್ಕೆ ಪಡೆದುಕೊಂಡಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ಶ್ರೀನಗರ: ಜಮ್ಮು-ಕಾಶ್ಮೀರ (Jammu And Kashmir)ದಲ್ಲಿ ಸ್ಥಳೀಯ ನಿವಾಸಿಗಳ ಹತ್ಯೆಗೆ ಸಂಬಂಧಿಸಿದಂತೆ ಭಧ್ರತಾ ಪಡೆ (Security Force) ಸುಮಾರು 700ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದುಕೊಂಡಿದೆ. ಕಳೆದ ಒಂದು ವಾರದಲ್ಲಿ ಭಯೋತ್ಪಾದಕರು ಕಾಶ್ಮೀರಿ ಪಂಡಿತರು, ಹಿಂದೂ ಮತ್ತು ಸಿಖ್ ಸಮುದಾಯದ ಜನರನ್ನು ಗುರಿಯಾಗಿಸಿಯೇ ಕೊಲೆ ಮಾಡುತ್ತಿದ್ದರು ಎಂದು ಸುದ್ದಿ ಸಂಸ್ಥೆ ಖಚಿತಪಡಿಸಿದೆ. ಕಳೆದ ಒಂದು ವಾರದಲ್ಲಿ ಏಳು ಜನರನ್ನು ಹತ್ಯೆ ಮಾಡಲಾಗಿದೆ. ಸದ್ಯ ವಶಕ್ಕೆ ಪಡೆದಿರುವ ಜನರನ್ನು ಶ್ರೀನಗರ, ಗಂಡ್ರೆಬಾಲ್, ಬದ್ಗಾಮ್ ಮತ್ತು ದಕ್ಷಿಣ ಕಾಶ್ಮೀರ ವ್ಯಾಪ್ತಿಯ ಪ್ರದೇಶಗಳಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ. ಈ 700 ಜನರನ್ನು ಅನುಮಾನಾಸ್ಪದ ಮೇಲೆ ವಶಕ್ಕೆ ಪಡೆಯಲಾಗಿದೆ.

  ಸುಮಾರು 500 ಜನಕ್ಕೆ ನಿಷೇಧಿತ ಸಂಘಟನೆಯ ಲಿಂಕ್?:

  ವಶಕ್ಕೆ ಪಡೆದು 700 ಜನರ ಪೈಕಿ ಸುಮಾರು 500ಕ್ಕೂ ಹೆಚ್ಚು ಜನ ನಿಷೇಧಿತ ಚಟುವಟಿಕೆ, ಧಾರ್ಮಿಕ ಹಾಗೂ ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದರು. ಸಾಮಾನ್ಯ ಜನರನ್ನು ಬಲಿ ಪಡೆದುಕೊಂಡವರನ್ನು ಸುಮ್ಮನೇ ಬಿಡಲ್ಲ. ಅವರೆಲ್ಲರ ಸಾವಿಗೆ ನ್ಯಾಯ ದೊರಕಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಹೇಳಿಕೆಗೂ ಮೊದಲೇ ತಮ್ಮ ಹೆಸರು ಪ್ರಕಟಿಸದಂತೆ ಪೊಲೀಸ್ ಅಧಿಕಾರಿ ಷರತ್ತು ಹಾಕಿದ್ದರು. ಇನ್ನೂ 700 ಜನರನ್ನು ವಶಕ್ಕೆ ಪಡೆದುಕೊಂಡಿರುವ ಕುರಿತು ಪ್ರತಿಕ್ರಿಯಿಸಲು ಜಮ್ಮು-ಕಾಶ್ಮೀರ ಐಜಿ ವಿಜಯ್ ಕುಮಾರ್ ನಿರಾಕರಿಸಿದ್ದಾರೆ.

  ಪ್ರಚೋದನಕಾರಿ ಸುದ್ದಿ ಪ್ರಕಟ:

  ರಾಷ್ಟ್ರೀಯ ತನಿಖಾ ದಳ (NIA - National Investigation Agency) ಭಾನುವಾರ ಜಮ್ಮು-ಕಾಶ್ಮೀರದ 16 ಪ್ರತ್ಯೇಕ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಶ್ರೀನಗರ, ಅನಂತನಾಗ್, ಕುಲ್ಗಾಮ್ ಮತ್ತು ಬಾರಾಮುಲ್ಲಾ ವ್ಯಾಪ್ತಿಯಲ್ಲಿ ನಡೆದಿತ್ತು. ಈ ದಾಳಿ 'ವಾಯ್ಸ್ ಆಫ್ ಹಿಂದ್' (Voice Of Hind Magazine) ಮ್ಯಾಗಜಿನ್ ಮತ್ತು ಪಬ್ಲಿಕೇಶನ್ ಹಾಗೂ ಐಇಡಿ ವಶಕ್ಕೆ ಪಡೆದ ಪ್ರಕರಣದ ಹಿನ್ನೆಲೆ ದಾಳಿ ನಡೆದಿತ್ತು.  ವಾಯ್ಸ್ ಆಫ್ ಹಿಂದ್ ಪತ್ರಿಕೆ 2020 ಫೆಬ್ರವರಿಯಿಂದ ಆನ್‍ಲೈನ್ ನಲ್ಲಿ ಪ್ರಚೋದನಕಾರಿ ಸುದ್ದಿಗಳನ್ನು ಬಿತ್ತರಿಸುತ್ತಿದೆ.

  ಇದನ್ನೂ ಓದಿ: ಹೋಟೆಲ್​ಗೆ ಕರೆಸಿ ಪೋರ್ನ್ ವಿಡಿಯೋ ಮಾಡಿದ್ಳು; ಲೋನ್ ನೆಪದಲ್ಲಿ 44ರ ಆಂಟಿಯ ಸಂಚಿನ ಕಥೆ

  ನಾಗರೀಕರ ಕೊಲೆ: civilian killings in Jammu and Kashmir

  ಶ್ರೀನಗರದ ಈದ್ಗಾ ಇಲಾಖೆಯ ಶಾಲೆಗೆ ನುಗ್ಗಿದ್ದ ಹಂತಕರು ಇಬ್ಬರು ಶಿಕ್ಷಕರನ್ನು ಹತ್ಯೆ ಮಾಡಿದ್ದರು. ಪ್ರಿನ್ಸಿಪಲ್ ಸುಪಿಂದರ್ ಹಾಗೂ ಶಿಕ್ಷಕ ದೀಪಕ್ ಚಾಂದ್ ಉಗ್ರರ ದಾಳಿಗೆ ಬಲಿಯಾಗಿದ್ದರು. ಸುಪಿಂದರ್ ಸಿಂಗ್ ಕಾಶ್ಮೀರಿ ಪಂಡಿತರಾಗಿದ್ದು, ದೀಪಕ್ ಚಾಂದ್ ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದರು. ಮೃತರು ಶ್ರೀನಗರದ ಅಲೊಚಿಬಾಗ್ ನಿವಾಸಿಗಳಾಗಿದ್ದು, ಇಬ್ಬರ ಐಡಿ ಕಾರ್ಡ್ ಪರಿಶೀಲಿಸಿ ಉಗ್ರರು ಕೊಲೆ ಮಾಡಿದ್ದರು.

  ಇದನ್ನೂ ಓದಿ: Controversy- ಉಜ್ಜೈನಿಯ ಮಹಾಕಾಲ ಮಂದಿರದಲ್ಲಿ ಸಿನಿಮಾ ಹಾಡಿಗೆ ಡ್ಯಾನ್ಸ್; ಕೆಂಗಣ್ಣಿಗೆ ಯುವತಿ ಗುರಿ

  ಶ್ರೀನಗರದ ಇಕ್ಬಾಲ್ ಪಾರ್ಕ್ ಕ್ಷೇತ್ರದಲ್ಲಿ ಪ್ರಸಿದ್ಧ ಫಾರ್ಮಾಸಿಸ್ಟ್ ಮಾಖನ್‍ಲಾಲ್ ಬಿಂದು ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. 90ರ ದಶಕದಿಂದಲೂ ಮಖನ್‍ಲಾಲ್ ಎಂತಹ ಒತ್ತಡ, ಬೆದರಿಕೆಗಳು ಬಂದಿದ್ರೂ ಕಾಶ್ಮೀರವನ್ನು ತೊರೆದಿರಲಿಲ್ಲ. ಮುಖನ್‍ಲಾಲ್ ಕೊಲೆಯಾದ ಒಂದು ಗಂಟೆಯೊಳಗೆ ಆತಂಕವಾದಿಗಳು ಬಿಹಾರ ಮೂಲದ ವೀರೇಂದ್ರ ಪಾಸ್ವಾನ್ ಅವರನ್ನು ಹತ್ಯೆಗೈದಿದ್ದರು. ವೀರೇಂದ್ರ ಭಾಗಲ್ಪುರ ನಿವಾಸಿಯಾಗಿದ್ದು, ಪಾನಿಪುರಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಬಾಂದಿಪೊರಾದ ಮೊ.ಶಫಿ ಲೋನ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.

  - ಮಹಮ್ಮದ್ ರಫೀಕ್ ಕೆ.
  Published by:Vijayasarthy SN
  First published: