ಭಾರತಕ್ಕೆ ನುಸುಳಲು ಅಲ್-ಬದರ್​ನ 45 ಉಗ್ರರು ಸಜ್ಜು: ಕಾಶ್ಮೀರದಲ್ಲಿ ಹೈ ಅಲರ್ಟ್

ಕಾಶ್ಮೀರದಲ್ಲಿ ನಿರ್ನಾಮವಾಯಿತೆಂದೇ ಭಾವಿಸಲಾಗಿದ್ದ ಅಲ್-ಬದರ್ ಸಂಘಟನೆ ಇನ್ನೂ ಜೀವಂತವಾಗಿದೆ. ಅಷ್ಟೇ ಅಲ್ಲ ಅದರ ಬಲ ಕೂಡ ಹೆಚ್ಚಾಗಿದೆ ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.

Vijayasarthy SN | news18
Updated:September 11, 2019, 2:20 PM IST
ಭಾರತಕ್ಕೆ ನುಸುಳಲು ಅಲ್-ಬದರ್​ನ 45 ಉಗ್ರರು ಸಜ್ಜು: ಕಾಶ್ಮೀರದಲ್ಲಿ ಹೈ ಅಲರ್ಟ್
ಕಾಶ್ಮೀರದಲ್ಲಿ ಭದ್ರತಾ ಪಡೆಗಳು
  • News18
  • Last Updated: September 11, 2019, 2:20 PM IST
  • Share this:
ಶ್ರೀನಗರ(ಸೆ. 11): ಜಮ್ಮು ಕಾಶ್ಮೀರದಲ್ಲಿ ದಾಳಿಗಳನ್ನ ಸಂಯೋಜಿಸಲು ಅಲ್-ಬದರ್ ಸಂಘಟನೆಯ 45 ಉಗ್ರರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿ ಭಾರತೀಯ ಗುಪ್ತಚರರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯ್ಲಿ ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್​ನಲ್ಲಿದ್ದಾರೆ.

ಪಾಕಿಸ್ತಾನದ ಖೈಬರ್ ಪಖ್ತುಂಕ್ವ ಪ್ರಾಂತ್ಯದಲ್ಲಿರುವ ಮನ್​ಶೇರಾ ಎಂಬಲ್ಲಿ ಅಲ್-ಬದರ್ ಸಂಘಟನೆಯ ಉಗ್ರರಿಗೆ ಮೇ ತಿಂಗಳಿನಿಂದಲೇ ತರಬೇತಿ ನೀಡಲಾಗಿದೆ. ಇದೇ ಪ್ರಾಂತ್ಯದಲ್ಲಿ ಲಷ್ಕರ್-ಎ-ತೊಯ್ಬಾ ಮತ್ತು ಜೈಷ್-ಎ-ಮುಹಮ್ಮದ್ ಮೊದಲಾದ ಉಗ್ರ ಸಂಘಟನೆಗಳು ಕೂಡ ತರಬೇತಿಗಳನ್ನ ನೀಡುತ್ತಿವೆ. ಈಗಾಗಲೇ ತರಬೇತಿ ಮುಗಿಸಿರುವ ಹೊಸ ಉಗ್ರರನ್ನು ಕಾಶ್ಮೀರಕ್ಕೆ ಒಳನುಸುಳಿಸಲು ಪಾಕಿಸ್ತಾನದ ಸೇನೆ ಪ್ರಯತ್ನಿಸುತ್ತಿದೆ ಎಂದು ಉನ್ನತ ಮೂಲಗಳು ನ್ಯೂಸ್18 ವಾಹಿನಿಗೆ ತಿಳಿಸಿವೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಐದು ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ್ದ ಲಷ್ಕರ್-ಎ-ತೊಯ್ಬಾ ಉಗ್ರನ ಹತ್ಯೆ

ಖೈಬರ್ ಪಖ್ತುಂಕ್ವ ಪ್ರಾಂತ್ಯದ ಗಡಿಭಾಗವು ಕಾಶ್ಮೀರದಿಂದ ಕೇವಲ ನೂರು ಕಿಮೀ ದೂರ ಇದೆ. ಇಲ್ಲಿ ಪಾಕಿಸ್ತಾನದ ಪ್ರಮುಖ ಉಗ್ರ ಸಂಘಟನೆಗಳು ತರಬೇತಿ ಶಿಬಿರಗಳನ್ನ ಹೊಂದಿವೆ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸೇರಿದ ಮುಜಾಫರಾಬಾದ್ ಮತ್ತು ಕೋಟ್ಲಿಯಲ್ಲೂ ಟ್ರೈನಿಂಗ್ ಕ್ಯಾಂಪ್​ಗಳಿವೆ. ಬಾಲಾಕೋಟ್​ನಲ್ಲಿ ಭಾರತೀಯ ವಾಯುಪಡೆಗಳು ಇಂಥ ಒಂದು ಕ್ಯಾಂಪ್​ ಮೇಲೆ ದಾಳಿ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇನ್ನು, ಅಲ್-ಬದರ್ ಸಂಘಟನೆಯು ಕಾಶ್ಮೀರದಲ್ಲಿ ಅಚ್ಚರಿ ರೀತಿಯಲ್ಲಿ ಸಕ್ರಿಯವಾಗಿದೆ. ಕಾಶ್ಮೀರದಲ್ಲಿರುವ ಪೊಲೀಸ್ ಅಧಿಕಾರಿಗಳ ಕುಟುಂಬಗಳಿಗೆ ಹಾಗೂ ಅವರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕುವಂತೆ ಶ್ರೀನಗರದ ಲಾಲ್ ಚೌಕ್ ಪ್ರದೇಶದಲ್ಲಿ ಪೋಸ್ಟರ್​ಗಳನ್ನ ಅಂಟಿಸಿದ್ದು ಇದೇ ಅಲ್-ಬದರ್ ಸಂಘಟನೆಯೇ. ಸೇನೆ ನಡೆಸಿದ ಹಲವು ಕಾರ್ಯಾಚರಣೆಯಲ್ಲಿ ಈ ಸಂಘಟನೆಯ ಬಹುತೇಕ ಸದಸ್ಯರನ್ನು ಕೊಲ್ಲಲಾಯಿತೆಂದೇ ಭಾವಿಸಲಾಗಿತ್ತು. ಆದರೆ, ಗುಪ್ತಚರರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಅಲ್-ಬದರ್ ಸಂಘಟನೆಯಲ್ಲಿ 2 ಸಾವಿರದಷ್ಟು ಉಗ್ರರಿದ್ದಾರೆ. ಬಹಕತ್ ಜಮೀನ್ ಖಾನ್ ಎಂಬಾತನ ನೇತೃತ್ವದಲ್ಲಿ ಸಂಘಟನೆ ಮರುಜೀವ ಪಡೆದಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಅಮೆರಿಕ ರಾಯಭಾರಿ ಕಚೇರಿ ಬಳಿ ಬಾಂಬ್ ದಾಳಿ; 9/11 ದಾಳಿಯ ವಾರ್ಷಿಕೋತ್ಸವವನ್ನು ನೆನಪಿಸಿದ ತಾಲಿಬಾನ್ ಉಗ್ರರು!

ಆಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಚುಟುವಟಿಕೆ ನಡೆಸಿ ಅನುಭವ ಹೊಂದಿರುವ ಸಂಘಟನೆಯ ಪ್ರಮುಖ ಆಪರೇಟಿವ್​ಗಳೇ ಖೈಬರ್ ಪಖ್ತುಂಕ್ವದಲ್ಲಿ ಹೊಸ ಉಗ್ರರಿಗೆ ತರಬೇತಿ ನೀಡಿದ್ದಾರೆಂಬ ಮಾಹಿತಿ ಇದೆ. ಕಾಶ್ಮೀರದಲ್ಲಿ ಭಾರತೀಯ ಸೇನೆಯ ಮೇಲೆ ಸರ್ವ ರೀತಿಯಲ್ಲಿ ಪ್ರಹಾರ ನಡೆಸುವಷ್ಟು ಶಕ್ತಿಯನ್ನು ಈ ಉಗ್ರ ಸಂಘಟನೆ ಪಡೆದುಕೊಂಡಿರುವ ಶಂಕೆ ಇದೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: September 11, 2019, 1:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading