• Home
  • »
  • News
  • »
  • national-international
  • »
  • Second Home Visa: ಶ್ರೀಮಂತರಿಗೆ ಇಂಡೋನೇಷ್ಯಾದಿಂದ “ಸೆಕೆಂಡ್‌ ಹೋಮ್” ವೀಸಾ ಆಫರ್!

Second Home Visa: ಶ್ರೀಮಂತರಿಗೆ ಇಂಡೋನೇಷ್ಯಾದಿಂದ “ಸೆಕೆಂಡ್‌ ಹೋಮ್” ವೀಸಾ ಆಫರ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂಡೋನೇಷ್ಯಾ ಶ್ರೀಮಂತ ಜಾಗತಿಕ ನಾಗರಿಕರನ್ನು ಸೆಳೆಯಲು ಹೊಸ ನೀತಿಯೊಂದನ್ನು ಜಾರಿಗೆ ತರುತ್ತಿದೆ. ಅದೇ 'ಸೆಕೆಂಡ್‌ ಹೋಮ್‌ ವೀಸಾ' ನೀತಿ.

  • Share this:

ಇಂಡೋನೇಷ್ಯಾದ ಬಾಲಿ ಪ್ರವಾಸಿಗರ (Tourist) ಸ್ವರ್ಗ ಅಂತಾನೇ ಫೇಮಸ್.‌ ಇಲ್ಲಿನ ಅತ್ಯಂತ ಸುಂದರವಾದ ಸಮುದ್ರ ತೀರಗಳನ್ನು, ಪ್ರಕೃತಿಯ (Nature) ನೋಟಗಳನ್ನು ಆನಂದಿಸೋಕೆ ಪ್ರಪಂಚದ ಬೇರೆ ಬೇರೆ ಕಡೆಗಳಿಂದ ಜನರು ಬರುತ್ತಾರೆ. ಅದರಲ್ಲೂ ರಜಾದಿನಗಳಲ್ಲಂತೂ (Holidays) ಪುಟ್ಟ ದ್ವೀಪ ಬಾಲಿ (Bali) ಜನರಿಂದ ತುಂಬಿ ಹೋಗುತ್ತೆ. ಈ ಮಧ್ಯೆ, ಇಂಡೋನೇಷ್ಯಾ ಶ್ರೀಮಂತ ಜಾಗತಿಕ ನಾಗರಿಕರನ್ನು ಸೆಳೆಯಲು ಹೊಸ ನೀತಿಯೊಂದನ್ನು (New Rules) ಜಾರಿಗೆ ತರುತ್ತಿದೆ. ಅದೇ 'ಸೆಕೆಂಡ್‌ ಹೋಮ್‌ ವೀಸಾ' ನೀತಿ.


ಹೌದು, ಇಂಡೋನೇಷ್ಯಾ ದೀರ್ಘಕಾಲ ಉಳಿಯಲು ಆಕರ್ಷಿಸುವ ವೀಸಾ ನೀತಿಯೊಂದನ್ನು ಜಾರಿಗೆ ತಂದಿದೆ. ಆಗ್ನೇಯ ಏಷ್ಯಾದ ಅತಿದೊಡ್ಡ ಆರ್ಥಿಕತೆಯನ್ನು ತನ್ನ ಟ್ರಂಪ್ ಕಾರ್ಡ್ ಮೇಲೆ ಕೇಂದ್ರೀಕರಿಸಲು ಬಾಲಿ ಪ್ರಯತ್ನ ನಡೆಸಿದೆ.


ಅಕೌಂಟ್‌ ನಲ್ಲಿ 2 ಬಿಲಿಯನ್‌ ಇದ್ದರೆ “ಸೆಕೆಂಡ್‌ ಹೋಮ್‌” ವೀಸಾ


ಇಲ್ಲಿ ಹೊರಡಿಸಲಾದ ಹೊಸ ನೀತಿಯ ಪ್ರಕಾರ, ಶ್ರೀಮಂತರಿಗೆ ಅಂದರೆ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ 2 ಬಿಲಿಯನ್ ರೂಪಿಯಾ (Indonesia Currency Rupiah) ($130,000) ಹೊಂದಿರುವವರಿಗೆ ಈ ದೇಶ ಹೊಸ ವೀಸಾ ನೀಡುತ್ತಿದೆ. ಅದೇ “ಎರಡನೇ ಮನೆ” ವೀಸಾ. ಈ ಎರಡನೇ ಮನೆ ವೀಸಾ ಹೊಂದಿರುವವರು ಈ ದೇಶದಲ್ಲಿ 5 ವರ್ಷ ಮತ್ತು 10 ವರ್ಷಗಳ ಕಾಲ ನೆಲೆಸಬಹುದಾಗಿದೆ. ಕ್ರಿಸ್‌ಮಸ್‌ನಲ್ಲಿ ಅಥವಾ ಹೊಸ ನಿಯಮ ಜಾರಿಯಾದ 60 ದಿನಗಳ ನಂತರ ನೀತಿಯು ಜಾರಿಗೆ ಬರುತ್ತದೆ ಎನ್ನಲಾಗಿದೆ.


"ಈ ನೀತಿಯು ಇಂಡೋನೇಷ್ಯಾದ ಆರ್ಥಿಕತೆಗೆ ಸಕಾರಾತ್ಮಕ ಕೊಡುಗೆ ನೀಡಲು ಕೆಲವು ವಿದೇಶಿಯರಿಗೆ ಹಣಕಾಸಿನೇತರ ಪ್ರೋತ್ಸಾಹವಾಗಿದೆ" ಎಂದು ರೆಸಾರ್ಟ್ ದ್ವೀಪದಲ್ಲಿ ನಡೆದ ಉಡಾವಣಾ ಸಮಾರಂಭದಲ್ಲಿ ವಲಸೆಯ ಕಾರ್ಯನಿರ್ವಾಹಕ ಮಹಾನಿರ್ದೇಶಕ ವಿಡೋಡೋ ಏಕತ್ಜಾಜಾನಾ ಹೇಳಿದ್ದಾರೆ.


ಡಿಜಿಟಲ್‌ ಅಲೆಮಾರಿಗಳಿಗೆ ಉತ್ತಮ ಆಯ್ಕೆ!


ಅಂದಹಾಗೆ, ಇಂಡೋನೇಷ್ಯಾ ಕೋಸ್ಟರಿಕಾದಿಂದ ಮೆಕ್ಸಿಕೋವರೆಗಿನ ದೇಶಗಳ ಪಟ್ಟಿಗೆ ಸೇರಿಸುವಂತೆ ರಚಿತವಾಗಿದೆ. ವೃತ್ತಿಪರರು, ನಿವೃತ್ತರು ಮತ್ತು ಇತರ ಶ್ರೀಮಂತ ಜನರನ್ನು ಆಕರ್ಷಿಸಲು ದೀರ್ಘಾವಧಿಯ ವಾಸ್ತವ್ಯವನ್ನು ನೀಡುತ್ತದೆ.


ಡಿಜಿಟಲ್ ಅಲೆಮಾರಿಗಳು ಎಂದು ಕರೆಯಲ್ಪಡುವ ವಿದ್ಯಾವಂತ ಕಾರ್ಮಿಕರು, ಕೋರೋನಾ ಸಾಂಕ್ರಾಮಿಕ ರೋಗದ ನಂತರ ತಮ್ಮ ಕೆಲಸವನ್ನು ದೂರದಿಂದಲೇ ಮಾಡುವಂಥ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಈ ವರ್ಕ್‌ ಫ್ರಮ್‌ ಹೋಮ್‌ ಅಥವಾ ವರ್ಕ ಫ್ರಮ್‌ ಎನಿವೇರ್‌ ಸ್ವಾತಂತ್ರ್ಯವನ್ನು ಬಳಸಲು ನೋಡುತ್ತಿದ್ದಾರೆ. ಆದ್ದರಿಂದ ವಲಸೆ ಆಯ್ಕೆಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪಡೆಯಲು ಎಲ್ಲರೂ ಬಯಸುತ್ತಾರೆ.


ಇದನ್ನೂ ಓದಿ: ಲಿಜ್ ಟ್ರಸ್ ಫೋನ್ ಹ್ಯಾಕ್ ಮಾಡಿದ್ದ ಪುಟಿನ್; ವರದಿ ಬಹಿರಂಗ


ಈ ಮೊದಲು ಅಂದರೆ 2021 ರಲ್ಲಿ ಇಂಡೋನೇಷ್ಯಾ ಡಿಜಿಟಲ್ ಅಲೆಮಾರಿ ವೀಸಾದ ಯೋಜನೆಗಳನ್ನು ರೂಪಿಸಿತ್ತು. ಇದೀಗ ಬಾಲಿಗೆ ಸಂದರ್ಶಕರನ್ನು ಆಕರ್ಷಿಸುವುದರ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಇದು ಅಂತರರಾಷ್ಟ್ರೀಯ ಹಾಲಿಡೇ ಮೇಕರ್‌ಗಳಿಗೆ ರಾಷ್ಟ್ರದ ಪ್ರಮುಖ ತಾಣವಾಗಿದೆ ಮತ್ತು ವಿದೇಶಿ-ಕರೆನ್ಸಿ ಗಳಿಕೆಯ ಪ್ರಮುಖ ಮೂಲವಾಗಿದೆ.


ಗರುಡದಂತಹ ಇಂಡೋನೇಷಿಯಾ ವಿಮಾನಯಾನ ಸಂಸ್ಥೆಗಳು ಅಂತಾರಾಷ್ಟ್ರೀಯ ವಿಮಾನಯಾನವನ್ನು ಪುನರಾರಂಭಿಸುವುದರಿಂದ ಇಂಡೋನೇಷ್ಯಾಕ್ಕೆ ಪ್ರವಾಸಿಗರ ಆಗಮನದಲ್ಲಿ ಹೆಚ್ಚಳವಾಗುವುದರ ಜೊತೆಗೆ ಸಮಯವು ಹೊಂದಿಕೆಯಾಗುತ್ತದೆ.


ಇನ್ನು, ನವೆಂಬರ್‌ನಲ್ಲಿ ಬಾಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯು ಹತ್ತಾರು ಸಾವಿರ ಪ್ರತಿನಿಧಿಗಳನ್ನು ಕರೆತರುವ ಮೂಲಕ ದ್ವೀಪದ ಮೇಲೆ ಅಂತಾರಾಷ್ಟ್ರೀಯ ಗಮನ ಸೆಳೆಯುವ ನಿರೀಕ್ಷೆಯಿದೆ.


ಇದನ್ನೂ ಓದಿ: ಹಬ್ಬದ ಖುಷಿಯಲ್ಲಿದ್ದ ನೂರಾರು ಜನರಿಗೆ ಒಟ್ಟಿಗೆ ಹಾರ್ಟ್ ಅಟ್ಯಾಕ್; 149 ಮಂದಿ ಭೀಕರ ಸಾವು


ಅಂದಹಾಗೆ, ಬಾಲಿ ಇಂಡೋನೇಷಿಯನ್ ದ್ವೀಪಸಮೂಹದಲ್ಲಿ ಅತ್ಯಂತ ಜನಪ್ರಿಯ ದ್ವೀಪವಾಗಿದೆ. ಇದು ಪುರಾತನ ಸಂಸ್ಕೃತಿಗೆ ನೆಲೆಯಾಗಿದೆ. ಅಲ್ಲದೇ ಇಲ್ಲಿನ ಅದ್ಭುತ ದೇವಾಲಯಗಳು ಮತ್ತು ಅರಮನೆಗಳು ಪ್ರವಾಸಿಗರನ್ನು ಬೆರಗುಗೊಳಿಸುತ್ತವೆ.


ಇಲ್ಲಿನ ಕಾಡುಗಳು, ಸಮುದ್ರ ತೀರಗಳನ್ನು ಪ್ರವಾಸಿಗರನ್ನು ಇನ್ನಿಲ್ಲದಂತೆ ಸೆಳೆಯುತ್ತವೆ. ಅಲ್ಲದೇ ಇಲ್ಲಿನ ಪ್ರಮುಖ ಆಕರ್ಷಣೆಗಳಾದ ಪಾಕಪದ್ಧತಿ, ಸೈಟ್‌ ಸ್ಪಾಟ್‌ ಗಳು, ಬೀಚ್‌ ರೆಸಾರ್ಟ್‌ ಗಳು, ಅದ್ಭುತ ಡೈವಿಂಗ್‌ ತಾಣಗಳು ಹೀಗೆ ಪ್ರವಾಸಿಗರ ಆಕರ್ಷಣೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹೀಗಾಗಿ ಇಂಥ ದೇಶದಲ್ಲಿ ಉಳಿಯ ಬಯಸುವ ಶ್ರೀಮಂತರಿಗೆ ಈ ಹೊಸ ವೀಸಾ ನೀತಿ ಪ್ರಯೋಜನಕಾರಿಯೇ ಆಗಿದೆ.

First published: