ಇದು ಬೆಕ್ಕು ಹುಡುಕಲು ಹೋದವರಿಗೆ ಮೊಸಳೆ ಸಿಕ್ಕ ಕಥೆ

'ಮೊಸಳೆಯನ್ನು ನೋಡಿ ಮೊದಲು ನಮಗೆ ಶಾಕ್​ ಆಯ್ತು. ನಾವು ನೋಡಿದ್ದು ನಿಜವೋ, ಸುಳ್ಳೋ ಎಂದು ಖಾತರಿಪಡಿಸಿಕೊಳ್ಳಲು ಮತ್ತೊಮ್ಮೆ ನೋಡಿದಾಗ ಬಾಯಿಂದ ಮಾತೇ ಹೊರಡಲಿಲ್ಲ' ಎಂದು ಮಾಲೀಕರು ಹೇಳಿದ್ದಾರೆ.

sushma chakre | news18
Updated:January 11, 2019, 12:35 PM IST
ಇದು ಬೆಕ್ಕು ಹುಡುಕಲು ಹೋದವರಿಗೆ ಮೊಸಳೆ ಸಿಕ್ಕ ಕಥೆ
ಸೆರೆಸಿಕ್ಕ ಮೊಸಳೆ
sushma chakre | news18
Updated: January 11, 2019, 12:35 PM IST
ಮನೆಯಲ್ಲಿ ಕಾಣೆಯಾಗಿದ್ದ ಬೆಕ್ಕನ್ನು ಹುಡುಕಲು ಹೋಗಿದ್ದ ಮಾಲೀಕರಿಗೆ ಮೊಸಳೆ ಸಿಕ್ಕಿದ ಘಟನೆ ಮಿಸಿಸಿಪ್ಪಿಯಲ್ಲಿ ನಡೆದಿದೆ. ಅಲ್ಲಿನ ಸ್ಥಳೀಯ ಮಾಧ್ಯಮಗಳ ಪ್ರಕಾರ, ಕಳೆದ ಮಂಗಳವಾರ ಈ ಘಟನೆ ನಡೆದಿದ್ದು, ಅಲ್ಲಿನ ಮನೆಯೊಂದರಲ್ಲಿ ವಾಸವಾಗಿದ್ದ ಹೆಂಗಸು ಮತ್ತು ಆಕೆಯ ಮಲಮಗಳು ತಮ್ಮ ಪ್ರೀತಿಯ ಬೆಕ್ಕು ಕಣ್ಮರೆಯಾಗಿದ್ದರಿಂದ ಅದನ್ನು ಹುಡುಕಲು ಹೋದರು.

ಮಳೆನೀರು ಮತ್ತು ಮನೆಯ ಹೆಚ್ಚಾದ ನೀರು ಇಳಿದುಹೋಗಲು ವ್ಯವಸ್ಥೆ ಕಲ್ಪಿಸಲಾಗಿದ್ದ ಜಾಗದಲ್ಲಿ ಬೆಕ್ಕನ್ನು ಹುಡುಕಲಾರಂಭಿಸಿದರು. ಆದರೆ, ಆ ಜಾಗದಲ್ಲಿ ಬೆಕ್ಕು ಇರುವ ಬದಲು ದೊಡ್ಡದೊಂದು ಮೊಸಳೆ ಇತ್ತು. 'ಮೊಸಳೆಯನ್ನು ನೋಡಿ ಮೊದಲು ನಮಗೆ ಶಾಕ್​ ಆಯ್ತು. ನಾವು ನೋಡಿದ್ದು ನಿಜವೋ, ಸುಳ್ಳೋ ಎಂದು ಖಾತರಿಪಡಿಸಿಕೊಳ್ಳಲು ಮತ್ತೊಮ್ಮೆ ನೋಡಿದಾಗ ಬಾಯಿಂದ ಮಾತೇ ಹೊರಡಲಿಲ್ಲ. ತಕ್ಷಣ ಮೊಬೈಲ್​ನಿಂದ ಫೋಟೋ ತೆಗೆದುಕೊಂಡು ಪಕ್ಕದ ಮನೆಯವರಿಗೆ ತಿಳಿಸಿದೆವು' ಎಂದು ಆ ಮನೆಯ ಮಾಲೀಕರು ಹೇಳಿದ್ದಾರೆ.

ಇದನ್ನೂ ಓದಿ: ಠಾಕ್ರೆ ಮಗನ ಮದುವೆಗೆ ಪ್ರಧಾನಿ ಮೋದಿಗಿಲ್ಲ ಆಹ್ವಾನ; ಏನಿದರ ಹಿಂದಿನ ರಾಜಕೀಯ ಲೆಕ್ಕಾಚಾರ?

ಬಳಿಕ, ಪ್ರಾಣಿ ನಿಯಂತ್ರಣ ಅಧಿಕಾರಿಗಳಿಗೆ ಕರೆಮಾಡಿದ ಮಾಲೀಕರು ವಿಷಯ ತಿಳಿಸಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು 7 ಅಡಿ ಉದ್ದವಿದ್ದ ಮೊಸಳೆಯನ್ನು ಹಿಡಿಯಲು ಮಿಸಿಸಿಪ್ಪಿಯ ವನ್ಯಜೀವಿ ಇಲಾಖೆ ಸಿಬ್ಬಂದಿಗೆ ಕರೆ ಮಾಡಿದರು. ನಂತರ ಆ ಮೊಸಳೆಯನ್ನು ಹಿಡಿಯಲಾಯಿತು ಎಂದು ಮಾಹಿತಿ ನೀಡಿದ್ದಾರೆ.ಮೊಸಳೆಯನ್ನು ಹಿಡಿಯುವ ವಿಡಿಯೋವನ್ನು ಕೂಡ ಮಾಲೀಕರು ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದು, ಆ ವಿಡಿಯೋ 77,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ.

Loading...

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ