• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Shivling found in Gyanvapi: ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿಯೇ ಬಿಡ್ತು, ಇಡೀ ಪ್ರದೇಶ ಸೀಲ್​​ಗೆ ಕೋರ್ಟ್ ಆದೇಶ

Shivling found in Gyanvapi: ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿಯೇ ಬಿಡ್ತು, ಇಡೀ ಪ್ರದೇಶ ಸೀಲ್​​ಗೆ ಕೋರ್ಟ್ ಆದೇಶ

ಮಸೀದಿಗೆ ಬಿಗಿ ಭದ್ರತೆ

ಮಸೀದಿಗೆ ಬಿಗಿ ಭದ್ರತೆ

ವಾರಣಾಸಿಯ ಸ್ಥಳೀಯ ನ್ಯಾಯಾಲಯವು ಮೂರು ದಿನಗಳ ವಿಡಿಯೋ ಸಮೀಕ್ಷೆಯಲ್ಲಿ ಶಿವಲಿಂಗ ಪತ್ತೆಯಾದ ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪವಿರುವ ಜ್ಞಾನವಾಪಿ ಮಸೀದಿಯ ಒಳಗಿನ ಪ್ರದೇಶವನ್ನು ಸೀಲ್ ಮಾಡುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಿದೆ.

  • Share this:

ವಾರಣಾಸಿ: ಉತ್ತರ ಪ್ರದೇಶದ ಬನಾರಸ್‌ನ (Banaras) ಜ್ಞಾನವ್ಯಾಪಿ ಮಸೀದಿಯಲ್ಲಿ (Gyanvapi Masjid) ಸರ್ವೇ ವೇಳೆ ಶಿವಲಿಂಗ (Shivling) ಪತ್ತೆಯಾಗಿದ್ದು, ಇಡೀ ಪ್ರದೇಶವನ್ನು ಸೀಲ್​ ಮಾಡುವಂತೆ ಕೋರ್ಟ್​​ (Varanasi court) ಆದೇಶಿಸಿದೆ. ವಾರಣಾಸಿಯ ಸ್ಥಳೀಯ ನ್ಯಾಯಾಲಯವು ಮೂರು ದಿನಗಳ ವಿಡಿಯೋ ಸಮೀಕ್ಷೆಯಲ್ಲಿ ಶಿವಲಿಂಗ ಪತ್ತೆಯಾದ ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪವಿರುವ ಜ್ಞಾನವಾಪಿ ಮಸೀದಿಯ ಒಳಗಿನ ಪ್ರದೇಶವನ್ನು ಸೀಲ್ ಮಾಡುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಿದೆ. ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋಗ್ರಫಿ ಸಮೀಕ್ಷೆ ಸೋಮವಾರ ಪೂರ್ಣಗೊಂಡಿದ್ದು, ಬಾವಿಯೊಳಗೆ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಪರ ವಕೀಲರು ಪ್ರತಿಪಾದಿಸಿದರು. ಶಿವಲಿಂಗದ ರಕ್ಷಣೆ ಕೋರಿ ವಕೀಲ ವಿಷ್ಣು ಜೈನ್ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು.


ಬಿಗಿ ಭದ್ರತೆಗೆ ಆದೇಶ


ನ್ಯಾಯಾಲಯವು ತನ್ನ ಆದೇಶದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ತಕ್ಷಣವೇ ಶಿವಲಿಂಗ ಪತ್ತೆಯಾದ ಸ್ಥಳಕ್ಕೆ ಮೊಹರು ಹಾಕುವಂತೆ ಮತ್ತು ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸುವಂತೆ ನಿರ್ದೇಶಿಸಿದೆ. ವಾರಣಾಸಿ ಡಿಎಂ, ಪೊಲೀಸ್ ಕಮಿಷನರ್, ಪೊಲೀಸ್ ಕಮಿಷನರೇಟ್ ಮತ್ತು ಸಿಆರ್‌ಪಿಎಫ್ ಕಮಾಂಡೆಂಟ್‌ಗೆ ಮಹಜರ್​​ ಮಾಡಿದ ಪ್ರದೇಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಸೂಚಿಸಿದೆ.


ಇದನ್ನೂ ಓದಿ: Ukraine Soldiers: ಪ್ಲಾನ್ ಅಂದ್ರೆ ಇದು! ರಷ್ಯಾ ಸೈನಿಕರನ್ನು ತಡೆಯಲು ಡ್ಯಾಂ ಓಪನ್ ಮಾಡಿದ ಉಕ್ರೇನ್ ಸೈನಿಕರು!


ಅಡ್ವೊಕೇಟ್ ಕಮಿಷನರ್‌ಗಳು ಸರ್ವೆ ಕಾರ್ಯದ ಬಗ್ಗೆ ಮಾಹಿತಿ ಮತ್ತು ಅವರ ಸಂಶೋಧನೆಗಳನ್ನು ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದು ಪುನರುಚ್ಚರಿಸಿದರೂ, ಜ್ಞಾನವಾಪಿ ಪ್ರಕರಣದ ಅರ್ಜಿದಾರ ಸೋಹನ್ ಲಾಲ್ ಆರ್ಯ ಅವರು ಸಮೀಕ್ಷೆಯ ಸಮಯದಲ್ಲಿ ನಿರ್ಣಾಯಕ ಪುರಾವೆಗಳು ಕಂಡುಬಂದಿವೆ ಎಂದು ಸುದ್ದಿಗಾರರಿಗೆ ತಿಳಿಸಿದರು.


ಕೊಳದೊಳಗೆ ಶಿವಲಿಂಗ ಪತ್ತೆ


ಶನಿವಾರ ಮತ್ತು ಭಾನುವಾರದಂದು, ವಕೀಲರಾದ ಹರಿಶಂಕರ್ ಜೈನ್ ಮತ್ತು ವಿಷ್ಣು ಜೈನ್ ಅವರ ಪ್ರಕಾರ, ದೇವಾಲಯದ ಭಾಗವಾಗಿದ್ದ ಮಸೀದಿಯ ಪ್ರದೇಶಗಳ ಸಮೀಕ್ಷೆಯನ್ನು ಮಾಡಲಾಯಿತು. ಸೋಮವಾರ, ಮುಸ್ಲಿಮರು ವಜು (ನಮಾಜ್‌ಗೆ ಮುನ್ನ ಕೈ, ಬಾಯಿ, ಮೂಗಿನ ಹೊಳ್ಳೆ, ತೋಳುಗಳು, ತಲೆ ಮತ್ತು ಪಾದಗಳನ್ನು ನೀರಿನಿಂದ ತೊಳೆಯುವ ಅಭ್ಯಾಸ) ಮಸೀದಿಯೊಳಗಿನ ಕೊಳವನ್ನು ಸಮೀಕ್ಷೆಗಾಗಿ ಬರಿದಾಗಿಸಲಾಗಿದೆ. ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.


ಏನಿದು ಪ್ರಕರಣ?


ಜ್ಞಾನವಾಪಿ ಸಂಕೀರ್ಣದ ಪಶ್ಚಿಮ ಗೋಡೆಯ ಮೇಲೆ ಹಿಂದೂ ದೇವಾಲಯದ ಅವಶೇಷಗಳು ಕಂಡುಬಂದಿವೆ. ಇದಕ್ಕಾಗಿ ಸೋಮವಾರ ನಾಲ್ಕನೇ ಬೀಗ ತೆರೆದಿದ್ದರೆ, ಶನಿವಾರ ನಡೆದ ಸಮೀಕ್ಷೆ ವೇಳೆ ಮೊದಲ ಮೂರು ಕೊಠಡಿ ತೆರೆಯಲಾಗಿತ್ತು. ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸದ್ಯ ಕಾನೂನು ಹೋರಾಟ ಎದುರಿಸುತ್ತಿದೆ. ವಾರಣಾಸಿಯ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ರಚನೆಯ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶಿಸಿದೆ. ಮಸೀದಿ ಸಂಕೀರ್ಣದಲ್ಲಿ ಹಿಂದೂ ಪೂಜಾ ಚಿಹ್ನೆಗಳು ಇವೆ ಎಂಬ ಹೇಳಿಕೆಗಳ ಹಿಂದಿನ ಸತ್ಯವನ್ನು ಕಂಡುಹಿಡಿಯಲು ಸಮೀಕ್ಷೆಯಾಗಿದೆ.


ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಎಂಬವರು ಮತ್ತು ಇತರರು ತಮ್ಮ ಮನವಿಯೊಂದಿಗೆ ಏಪ್ರಿಲ್ 18, 2021 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಅದರ ಹೊರ ಗೋಡೆಗಳ ಮೇಲಿನ ಹಿಂದೂ ದೇವತೆಗಳ ವಿಗ್ರಹಗಳ ಮುಂದೆ ದೈನಂದಿನ ಪ್ರಾರ್ಥನೆಗೆ ಅನುಮತಿ ಕೋರಿದ್ದರು. ವಿಗ್ರಹಗಳಿಗೆ ಯಾವುದೇ ಹಾನಿ ಮಾಡದಂತೆ ವಿರೋಧಿಗಳು ತಡೆಯಲು ಪ್ರಯತ್ನಿಸಿದರು. ಹಿಂದೂ ಪರ ವಕೀಲರಾದ ಮದನ್ ಮೋಹನ್ ಯಾದವ್, ಶಿವಲಿಂಗವು ನಂದಿಯನ್ನು ಎದುರಿಸುತ್ತಿದೆ ಎಂದು ಪ್ರತಿಪಾದಿಸಿದರು. ಶಿವಲಿಂಗವು 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ ಎಂದು ವಾದಿಸಿದ್ದಾರೆ.


ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ವಿವಾದ


ವಾರಣಾಸಿಯ ಕಾಶಿ ವಿಶ್ವನಾಥ್-ಜ್ಞಾನವಾಪಿ ಸಂಕೀರ್ಣದ ಸಮಸ್ಯೆಯು 2019 ರಲ್ಲಿ ಇತ್ಯರ್ಥಗೊಂಡ ಅಯೋಧ್ಯೆ ದೇವಾಲಯ-ಮಸೀದಿ ವಿವಾದಕ್ಕೆ ಹೋಲುತ್ತದೆ. 1669 ರಲ್ಲಿ ಕಾಶಿ ವಿಶ್ವನಾಥ ಮಂದಿರದ ಒಂದು ಭಾಗವನ್ನು ಕೆಡವಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿ 1991 ರಲ್ಲಿ ಸ್ಥಳೀಯ ಅರ್ಚಕರಾಗಿದ್ದ ಅರ್ಜಿದಾರರ ಗುಂಪೊಂದು ವಾರಣಾಸಿ ನ್ಯಾಯಾಲಯಕ್ಕೆ ತೆರಳಿತು.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು